ಬೆಳಗಾವಿ : ದಿ. 26/06/2025 ರಂದು ಅಥಣಿ ನಗರದ ಸುಕ್ಷೇತ್ರ ಗಚ್ಚಿನ ಮಠದ ಆವರಣದಲ್ಲಿ ಜಂಗಮ ಜ್ಯೋತಿ ಮಹಾತಪಸ್ವಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಜಯಂತಿಯನ್ನು ಅತೀ ಅದ್ದೂರಿಯಿಂದ ಆಚರಣೆ ಮಾಡಲಾಯಿತು.

ಸಾಯಂಕಾಲ 6:00 ಗಂಟೆಗೆ ಧರ್ಮಸಭೆಯನ್ನು ನಡೆಸಲಾಯಿತು. ಇದರ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳು ವಹಿಸಿದ್ದರು. ಪೂಜ್ಯಶ್ರೀ ಶಿವಕುಮಾರ್ ಮಹಾಸ್ವಾಮಿಗಳು, ಪೂಜ್ಯಶ್ರೀ ಮಹಾಲಿಂಗಯ್ಯ ಮಹಾಸ್ವಾಮಿಗಳು, ವೈದ್ಯರಾದ ರಾಮ ಕುಲಕರ್ಣಿ, ಮುಖಂಡರಾದ ಶ್ರೀ ಗಿರೀಶ್ ಬುಟಾಳಿ, ಶಿವಕುಮಾರ್ ಉಮ್ರಾಣಿ, ಮುಖಂಡರಾದ ಶಿವಾನಂದ ದಿವಾನಮಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ ಸಂಜು ಪಾರ್ಥನಳ್ಳಿ ಮತ್ತು ಸುಷ್ಮಾ ನಂದಗಾವ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
ಬಹಳಷ್ಟು ಜನ ಭಕ್ತಾದಿಗಳು ಮುರುಗೇಂದ್ರ ಶಿವಯೋಗಿಗಳ ಜಯಂತೋತ್ಸವದಲ್ಲಿ ಪಾಲ್ಗೊಂಡು ಶಿವಯೋಗಿಗಳ ಕೃಪೆಗೆ ಪಾತ್ರರಾದರು, ಈ ಕಾರ್ಯಕ್ರಮದಲ್ಲಿ ಅನ್ನದಾಸೋಹವೂ ಕೂಡ ನೆರವೇರಿತು.
ವರದಿ: ವಿಠ್ಠಲ ಖೋಕಾಟೆ, ಅಥಣಿ



















