ಅಮರೇಗೌಡ ಮಲ್ಲಾಪುರ ನಿಸ್ವಾರ್ಥ ಸೇವೆಯಿಂದ ದಿನನಿತ್ಯ ಗಿಡಮರಗಳ ರಕ್ಷಣೆ ಮಾಡಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವುದು ಶ್ಲಾಘನೀಯ : ನೀಲ್ ಕಮಲ್ ಸ್ವರಕಾರ್.

ರಾಯಚೂರು ಜಿಲ್ಲೆಯ ಸಿಂಧನೂರು ನಗರದ R. H ನಂ. 4ರ ನ್ಯೂ ಮಾ ಶಾರದಾ ಆಂಗ್ಲ ಮಧ್ಯಮ ಶಾಲೆಯಲ್ಲಿ ವನಸಿರಿ ಫೌಂಡೇಷನ್ ವತಿಯಿಂದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ 50 ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ನ್ಯೂ ಮಾ ಶಾರದಾ ಶಾಲೆಯ ಸಂಸ್ಥಾಪಕರಾದ ನೀಲ್ ಕಮಲ್ ಸ್ವಾರಕರ್ ಮಾತನಾಡಿ ಪರಿಸರವು ಪ್ರತಿಯೊಂದು ಜೀವರಾಶಿಗಳಿಗೆ ಅತ್ಯವಶ್ಯ. ಮುಂದಿನ ಪೀಳಿಗೆಗೆ ಪರಿಸವನ್ನು ನಾವುಗಳೆಲ್ಲರೂ ಕಾಪಾಡುವುದು ಅತ್ಯವಶ್ಯಕವಾಗಿದೆ. ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು,ಆತನ ದುರಾಸೆಯನ್ನಲ್ಲ” ಎಂಬ ಗಾಂಧೀಜಿಯವರ ಮಾತಿನಲ್ಲಿ ಅರ್ಥಗರ್ಭಿತವಾಗಿದೆ. ಇದನ್ನು ನಾವುಗಳು ಮನಗೊಳ್ಳಬೇಕು. ಇತ್ತೀಚಿನ ಆಧುನಿಕತೆಯಲ್ಲಿ ಮನುಷ್ಯ ನಾನು ನನ್ನದು ಎಂದು ಗಿಡಮರಗಳನ್ನು ಕಡಿದು ಹಾಕುತ್ತಿದ್ದಾನೆ. ಆದರೆ ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರು ನಿಸ್ವಾರ್ಥ ಸೇವೆಯಿಂದ ದಿನನಿತ್ಯ ಗಿಡಮರಗಳ ರಕ್ಷಣೆಯಲ್ಲಿ ತೊಡಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವುದು ಶ್ಲಾಘನೀಯ. ಅವರ ಈ ಪರಿಸರ ಕಾಳಜಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇವರಿಂದ ಸಿಂಧನೂರು ಹಸಿರಾಗಿ ಕಂಗೊಳಿಸುತ್ತಿದೆ ನಾವು ಕೂಡಾ ಅಮರೇಗೌಡ ಮಲ್ಲಾಪುರ ಜೊತೆಗೂಡಿ ಗಿಡಮರಗಳನ್ನು ಬೆಳಸಲು ಮಂದಾಗೋಣ ಎಂದರು.
ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಗಿಡಮರಗಳಿದ್ದರೆ ನಾವುಗಳೆಲ್ಲರೂ ಜೀವಿಸಲು ಸಾಧ್ಯ, ಇವತ್ತಿನ ದಿನಗಳಲ್ಲಿ ಪ್ಲಾಸ್ಟಿಕ್, ತ್ಯಾಜ್ಯ ವಸ್ತಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರದಲ್ಲಿ ದುರ್ವಾಸನೆಯಿಂದ ಪರಿಸರ ದಿನನಿತ್ಯ ಹಾಳಾಗುತ್ತಿದೆ. ಇದರಿಂದ ಜನರಿಗೆ ಹಲವಾರು ರೋಗರುಜನಗಳು ಹರಡುತ್ತವೆ ಆದ್ದರಿಂದ ನಾವುಗಳೆಲ್ಲರೂ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುಗಳನ್ನು ಬೆರ್ಪಡಿಸಿ ನಗರಸಭೆಯ ವಾಹನ ಬಂದಾಗ ಹಾಕಬೇಕು. ನಮಗೆ ಶುದ್ಧವಾದ ಗಾಳಿ ಬೇಕಾದರೆ ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳಸಲು ಮುಂದಾಗಬೇಕು ಎಂದರು.
ಈ ಸಂಧರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಶಾಲೆಯ ಅಧ್ಯಕ್ಷ ಅಮರ ಶ್ರೀಲ್ ಸಂಸ್ಥಾಪಕ ನೀಲ್ ಕಮಲ್ ಸ್ವರಕಾರ್, ಮುಖ್ಯ ಗುರು ಇಂದಿರಾ, ಸದಸ್ಯ ಖಾನಾಯಿ ದೇವರಿ ಹಾಗೂ ವನಸಿರಿ ಸದಸ್ಯರಾದ ದೇವು ತಿಮ್ಮಾಪುರ, ವೀರಭದ್ರಯ್ಯ ಸ್ವಾಮಿ, ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.
- ಕರುನಾಡ ಕಂದ



















