
ತಾವಂಶಿ ಗ್ರಾಮದ ಅಶೋಕ್ ಗೌರಗೊಂಡ ಇನ್ನಿಲ್ಲ..
ತಡ ರಾತ್ರಿ ರಸ್ತೆ ಅಪಘಾತದಲ್ಲಿ ನಿಧನ
ಹೌದು.. ಸದಾ ಬಡವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಬಂದವರಿಗೆಲ್ಲಾ ಹೂವು ಶಾಲು ನೀಡಿ ಆತಿಥ್ಯದ ಗೌರವ ಒಂದೆಡೆಯಾದರೆ, ಶಿಕ್ಷಣ ಕ್ಷೇತ್ರದಲ್ಲಿ ಸಾಧಕ ವಿದ್ಯಾರ್ಥಿಗಳಿಗೂ ಹಳ್ಳಿಗಳಿಗೆ ತೆರಳಿ ಸತ್ಕಾರ, ಸನ್ಮಾನ ಮಾಡಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತ ಮುಂಚೂಣಿಯಲ್ಲಿ ಇರುತ್ತಿದ್ದ ವ್ಯಕ್ತಿ.
ಬಡವರಿಗೆ ಸಹಾಯ ಅಂತಾ ಬಂದಾಗಲೆಲ್ಲಾ ಆಧಾರವಾಗಿ ನಿಲ್ಲುತ್ತಿದ್ದ ಅದೇ ಜೀವ ಇಂದು ರಸ್ತೆ ಅಪಘಾತದಲ್ಲಿ ಉಸಿರು ಚೆಲ್ಲಿದೆ.
ಸಮಾಜ ಸೇವೆಯ ಧ್ವನಿ ಹಾಗೂ ರಾಜಕೀಯ ಮುತ್ಸದ್ದಿ ಅಶೋಕ್ ಗೌರಗೊಂಡ ಅಥಣಿ ಪಟ್ಟಣದಲ್ಲಿ ತಮ್ಮದೇಯಾದ ಒಂದು ಕಾರ್ಯಾಲಯ ಮಾಡಿ ಬಂದವರಿಗೆಲ್ಲ ಹೂಮಾಲೆ ಹಾಕಿ ಸತ್ಕರಿಸಿ ಬಾಂಧವ್ಯ ಬೆಳೆಸುವ ಸ್ವಭಾವದವರಾಗಿದ್ದರು.
ಅಥಣಿ ಸಮೀಪದ ಬರಮಕೋಡಿ ಹತ್ತಿರ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿರುವ ಅಶೋಕ್ ಗೌರಗೊಂಡ ಅವರಿಗೆ ಅಥಣಿಯ ಶಿವಯೋಗಿ ವೃತ್ತದಲ್ಲಿ ಶ್ರೀ ಶಿವರಾಮೇಗೌಡರ ಬನದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷದವರೆಗೆ ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು.
ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮತ್ತು ಮುಖಂಡರುಗಳಾದ ಸಿದ್ದು ಹಂಡಗಿ, ವಿನಯ್ ಪಾಟೀಲ, ಅರುಣ್ ಮಾಳಿ, ಅಣ್ಣಸಾಬ ತೆಲಸಂಗ, ಜಗನ್ನಾಥ ಬಾಮನೆ, ಸದಾಶಿವ ಕೆಂಗಲಗುದ್ದಿ , ಕುಮಾರ ಬಡಿಗೇರ, ಪ್ರಶಾಂತ್ ತೊಡಕರ, ಇನ್ನೂ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ. ವಿಠ್ಠಲ ಖೋಕಾಟೆ, ಅಥಣಿ



















