ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ವಿದ್ಯಾರ್ಥಿಗಳಿಗೆ ಅಸಾಧ್ಯವಾದುದು ಯಾವುದು ಇಲ್ಲ, ಮನಸ್ಸು ಮಾಡಿದರೆ ಎಲ್ಲವೂ ಸಾಧಿಸಬಹುದು” :ಚಂದ್ರಕಾಂತ ಶಾಬಾದಕರ್

“ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಐಐಟಿ, ಎನ್‌ಐಟಿ, ನೀಟ್ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ”

ಬೀದರ : ” ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ಆಲೋಕ ಸಂತೋಷಕುಮಾರ ಜೆಇಇ ಅಡ್ವಾನ್ಸ್‌ನಲ್ಲಿ ಎಐಆರ್-477 ರಾಂಕ್ ಪಡೆದು ಚೆನೈ ಐಐಟಿ ನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿ ಹಾಗೂ ಸಂದೀಪ ಎಮ್. ಎನ್‌ಐಟಿ ತಿರುಚರಾಪಲ್ಲಿ, ಅಭಿಷೇಕ ಎಸ್. ಎನ್‌ಐಟಿ ತಿರುಚಿರಪಲ್ಲಿ, ಭವಾನಿ ವಿ. ಎನ್‌ಐಟಿ ಔರಂಗಬಾದ, ಮಾರುತಿ ವಿ. ಎನ್‌ಐಟಿ ಸುರತಕಲ್ ಅದೇ ರೀತಿ ನೀಟ್‌ನಲ್ಲಿ ರ್ಯಾಂಕ್ ಪಡೆದ 10 ವಿದ್ಯಾರ್ಥಿಗಳನ್ನು ಮತ್ತು ಮಾರ್ಚ್-2025ರ ವಾರ್ಷಿಕ ಪರೀಕ್ಷೆಯಲ್ಲಿ ಶೇ. 95ರಷ್ಟು ಪಡೆದ ವೈಷ್ಣವಿ ಎನ್. ಇವರುಗಳನ್ನು ಲ್ಯಾಪ್‌ಟಾಪ್ ನೀಡಿ ದಿನಾಂಕ 12-07-2025 ರಂದು ಸತ್ಕಾರ ಸಮಾರಂಭಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಚಂದ್ರಕಾಂತ ಶಾಬಾದಕ‌ರ್, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೀದರ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ ವಿದ್ಯಾರ್ಥಿಗಳು ಓದುವುದರಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು, ಕಷ್ಟಪಟ್ಟು ಓದಬೇಡಿ ಇಷ್ಟಪಟ್ಟು ಓದಬೇಕು ” ಎಂದು ಕರೆ ನೀಡುತ್ತಾ, ಸತತ ಪ್ರಯತ್ನದಿಂದ ಗುರಿ ತಲುಪಬಹುದು ಮತ್ತು ವಿದ್ಯಾರ್ಥಿಗಳು ಮೊಬೈಲ್‌ದಿಂದ ದೂರವಿದ್ದು ಜೀವನವನ್ನು ಸುಂದರವಾಗಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಅದೇ ರೀತಿ ಅತಿಥಿಗಳಾಗಿ ಆಗಮಿಸಿದ ಶ್ರೀ ಪ್ರಭು ಎಸ್. ಪ್ರಾಂಶುಪಾಲರು, ಸಿದ್ಧಾರ್ಥ ಪದವಿ ಪೂರ್ವ ಕಾಲೇಜು ಹಾಗೂ ಬೀದರ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರು ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ” ವಿದ್ಯಾರ್ಥಿಗಳು ಯಾವಾಗಲೂ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಅದರಲ್ಲಿ ಅಬ್ದುಲ್ ಕಲಾಂ, ಡಾ|| ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಅವರಂತೆ ಆಗಲು ಪ್ರಯತ್ನಿಸಬೇಕು ಮತ್ತು ಕೆಸರಿನಲ್ಲಿ ಯಾವ ತರಹ ಕಮಲ ಅರಳುತ್ತದೆ ಅದೇ ತರಹ ಅರಳಬೇಕು. ನಮ್ಮ ಹಣೆಬರಹ ಯಾರೂ ಬದಲಿಸಲು ಸಾಧ್ಯವಿಲ್ಲ. ನಾವೇ ಬದಲಾಯಿಸಬೇಕು, ಅದು ನಮ್ಮ ಶ್ರಮದಿಂದ ಸಾಧ್ಯ” ಎಂದು ತಿಳಿಸಿದರು.

ಇನ್ನೋರ್ವ ಅತಿಥಿಯಾದ ಶ್ರೀ ದಯಾನಂದ ಮಮದೆ ದೈಹಿಕ ಶಿಕ್ಷಕರು ಶ್ರೀ ಸಾಯಿ ಆದರ್ಶ ಪ್ರೌಢ ಶಾಲೆ ಹಾಗೂ ಅನುದಾನಿತ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ “ ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಮಕ್ಕಳಿಗೆ ವಿದ್ಯೆಯ ಜೊತೆಗೆ ನೈತಿಕ ಶಿಕ್ಷಣ ನೀಡುತ್ತಾ ಬೀದರ ಜಿಲ್ಲೆಯಲ್ಲಿ ಕಡಿಮೆ ಶುಲ್ಕದಲ್ಲಿ ಬಡಮಕ್ಕಳಿಗೆ ಜೆಇಇ. ನೀಟ್ ಹಾಗೂ 100% ರಷ್ಟು ಫಲಿತಾಂಶವನ್ನು ನೀಡುತ್ತ ಬರುತ್ತಿದೆ” ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ವಹಿಸಿಕೊಂಡಂತಹ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಗೋವಿಂದ ಡಿ. ತಾಂದಳೆ ಅವರು ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಂಸ್ಥೆ ಮಾರ್ಚ-2025ರ ಪರೀಕ್ಷೆಯಲ್ಲಿ 98.46 ರಷ್ಟು ಫಲಿತಾಂಶ ತಂದಿದ್ದು ಮತ್ತು ಈ ವರ್ಷ ಐಐಟಿ, ಎನ್‌ಐಟಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಅದೇ ರೀತಿ ಈ ವರ್ಷ ನೀಟ್‌ನಲ್ಲಿ 10 ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದು ಸರಕಾರಿ ಕೋಟಾದಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ ಎಂದು ಲ್ಯಾಪ್ಟಾಪ್ ವಿತರಿಸಿ ಮಾತನಾಡಿ “ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಓದಿ ಉತ್ತಮ ರ್ಯಾಂಕ್ ತರಲು ಪ್ರಯತ್ನಿಸಬೇಕು” ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ ಡಿ. ತಾಂದಳೆ, ಕಾರ್ಯದರ್ಶಿ ಗೋಪಾಲ ಡಿ. ತಾಂದಳೆ ಮತ್ತು ಕಾಲೇಜಿನ ಗಣಿತ ಉಪನ್ಯಾಸಕರಾದ ಶ್ರೀ ಸಲಾಉದ್ದಿನ, ಕನ್ನಡ ಉಪನ್ಯಾಸಕರಾದ ಶ್ರೀ ಬಿರೇಶ ಯಾತನೂ‌ರ, ಶ್ರೀ ಡಾ|| ಆಸಿಫ್, ಭೌತಶಾಸ್ತ್ರ ಉಪನ್ಯಾಸಕರಾದ ಆಸಿಫ್ ಅಲಿ, ಆಂಗ್ಲ ಉಪನ್ಯಾಸಕರಾದ ಶ್ರೀ ಸಾಗರ ಪಡಸಲೆ, ಗಣಿತ ಉಪನ್ಯಾಸಕರಾದ ಶ್ರೀ ಚಂದ್ರಕಾಂತ ಝಬಾಡೆ, ಕನ್ನಡ ಉಪನ್ಯಾಸಕಿಯರಾದ ಶ್ರೀಮತಿ ಮಮತಾ, ಶ್ರೀ ಬಸವಕಿರಣ, ಶ್ರೀ ನಾಗರಾಜ , ಶ್ರೀ ಪ್ರೇಮಕುಮಾರ, ಡಾ|| ರಮೇಶ, ಕು. ದಿವ್ಯ, ಕು. ಅಶ್ವಿನಿ ಹಿಪ್ಪಳಗಾವ, ಕು.ಪಲ್ಲವಿ ಚಿಟಗುಪ್ಪೆ, ಶ್ರೀ ರಾಹುಲ ಚುಕ್ಕಾಣಿ, ಕು. ನಾಗರತ್ನ , ಶ್ರೀ ಶಿದ್ದಲಿಂಗ ಮಲ್ಹಾರೆ, ಕು. ನಿಕಿತಾ ರಾಯಕೊಡೆ, ಮಹೇಶ ಸಾವಳೆ, ಐಶ್ವರ್ಯ ಬೆಂಬುಳ್ಗೆ, ಶ್ರೀಮತಿ ಲತಾ ಮಾಶೆಟ್ಟಿ, ಶ್ರೀ ಜಗನಾಥ, ಶ್ರೀನಿವಾಸ ಗುತ್ತೆದಾರ ಸೇರಿದಂತೆ ಪಿ.ಯು.ಸಿ. ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಜರಿದ್ದರು.
ಶ್ರೀ ಅನಿಲಕುಮಾರ ಜಾಧವ ಜೀವಶಾಸ್ತ್ರ ಉಪನ್ಯಾಸಕರು ಮತ್ತು ಶ್ರೀ ರಜನಿಕಾಂತ ಗಣಿತ ವಿಷಯದ ಉಪನ್ಯಾಸಕರು ಇವರು ನಿರೂಪಿಸಿದರು. ಮತ್ತು ಕು. ಸೀಮಾ ಕಟ್ಟೊಳೆ ಭೌತಶಾಸ್ತ್ರ ಉಪನ್ಯಾಸಕರು ವಂದಿಸಿದರು.

ವರದಿ: ‌ಸಾಗರ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!