ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸನ್ಮಾನ ಮತ್ತು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು.
ದಿನಾಂಕ 14-07-2025 ರಂದು ವೀರಣ್ಣ ಗಂಗಾಣಿ ತಾಲೂಕು ಅಧ್ಯಕ್ಷರು ರೈತ ಸೈನ್ಯ, ಶಿವರಾಜ ಪಾಟೀಲ್ ಗೋಣಿಗಿ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಮಂಜು ಪಾಟೀಲ್ ಕಂದಗೋಳ ಇವರ ನೇತೃತ್ವದಲ್ಲಿ ಕಾಳಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿಯ ಕಲಬುರಗಿ ನಗರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಭೀಮಾ ಧರಣಿ ರಟಕಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೈತರ ಸಮಸ್ಯೆ, ಎಲ್ಲಾ ಜನಾಂಗದವರು ಕಷ್ಟ ಅಂತ ತಮ್ಮ ಬಳಿಗೆ ಬಂದಾಗ ಮುಂದಾಳತ್ವ ವಹಿಸಿ ಅವರ ಸಮಸ್ಯೆ ಬಗ್ಗೆ ಹರಿಯುವವರೆಗೂ ತಾವು ನಿರಂತರ ಹೋರಾಟ ಮಾಡಬೇಕು ಜನರ ಮಧ್ಯೆ ಇದ್ದು ಅವರ ಸುಖ ಶಾಂತಿಗಾಗಿ ತಾವು ಶ್ರಮಿಸಬೇಕು. ಇದು ನಿಮ್ಮ ಮೇಲೆ ಒಂದು ದೊಡ್ಡ ಜವಾಬ್ದಾರಿಯಾಗಿರುತ್ತದೆ ಎಂದು ಈ ಸಮಾರಂಭವನ್ನು ಉದ್ದೇಶಿಸಿ ವೀರಣ್ಣ ಗಂಗಾಣಿ ಮಾತನಾಡಿದರು.
ಈ ಸಂದರ್ಭದಲ್ಲಿ ವೀರಣ್ಣ ಗಂಗಾಣಿ ತಾಲೂಕು ಅಧ್ಯಕ್ಷರು ರೈತ ಸೈನ್ಯ ,ಶಿವರಾಜ ಪಾಟೀಲ್ ಗೋಣಿಗಿ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಮಂಜು ಪಾಟೀಲ್ ಕಂದಗೋಳ ಸಿದ್ದಯ್ಯ ಮಠಪತಿ. ಮಲ್ಲು ಪಾಟೀಲ್. ಸುಂದರ್ ಡಿ ಸಾಗರ್, ಮಲ್ಲಿಕಾರ್ಜುನ್ ಸಿಂಗೆ ಗೋಟುರ್, ಹಣಮಂತ ಮೇಲಿನ ಕೇರಿ,ಡೇವಿಡ್ ಕರಣ ರಾಜಪುರ್, ಅಜಿತ್ ರಟಕಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















