ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಪಿಡಿ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ

ವಿಕಲಚೇತನರ ಸಮಸ್ಯೆಗಳು ಹಾಗೂ ಅವರ ಹಕ್ಕೋತ್ತಾಯಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಿ ಸರಕಾರದ ಗಮನ ತರುವೆ – ಶಾಸಕ ಶರಣಗೌಡ ಕಂದಕೂರು

ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಶಾಸಕರಾದ ಶರಣಗೌಡ ಕಂದಕೂರರವರು ಇಂದು ಗುರುಮಠಕಲ್ ತಾಲೂಕಿನ ಸಮುದಾಯದ ಅರೋಗ್ಯ ಕೇಂದ್ರದಲ್ಲಿರುವ ಎಪಿಡಿ ಸಂಸ್ಥೆಯ ಅಧಿಕಾರಿಗಳನ್ನು ತಮ್ಮ ನಿವಾಸದಲ್ಲಿ ಭೇಟಿಯಾದರು.

ಕಳೆದ ವಾರ ಶಾಸಕರು ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಎಪಿಡಿ ಸಂಸ್ಥೆಗೆ ಭೇಟಿ ನೀಡಿ ತಾಲೂಕಿನ ವಿಕಲಚೇತನರ ಆರೈಕೆ ಹಾಗೂ ಅವರಿಗೆ ನೀಡಲಾಗಿರುವ ಸೌಲಭ್ಯಗಳು, ಅಲ್ಲಿನ ಫಿಜಿಯೋಥೆರಪಿ, ಕಳೆದ 3 ವರ್ಷಗಳಲ್ಲಿ ಸಮುದಾಯದಲ್ಲಿ ಮಾಡಿದ ಹಲವಾರು ಕಾರ್ಯಕ್ರಮಗಳ ಮಾಹಿತಿ ಪಡೆದಿದ್ದರು,

ಇಂದು ಎಪಿಡಿ ಅಧಿಕಾರಿಗಳ ಜೊತೆ ಯಾದಗಿರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಬೆನ್ನೂಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳ ಆರೈಕೆ ಕುರಿತಾಗಿ ಹಾಗೂ ಪುನಶ್ಚೇತನ ಕಾರ್ಯಕ್ರಮಕ್ಕೆ ಎಪಿಡಿ ಸಂಸ್ಥೆಗೆ ತಮ್ಮ ಸಹಕಾರ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಬೆಂಬಲ ನೀಡುವ ಭರವಸೆಯನ್ನು ನೀಡಿದರು.

ಇದೇ ಜುಲೈ ತಿಂಗಳ 22 ರಂದು ಗುರುಮಠಕಲ್ ಪಟ್ಟಣದಲ್ಲಿ ತಾಲೂಕ ಆರ್ ಪಿ ಡಿ ಟಾಸ್ಕ್ ಫೋರ್ಸ್ ವತಿಯಿಂದ ಹಮ್ಮಿಕೊಂಡಿರುವ ಅಂಗವಿಕಲ ವ್ಯಕ್ತಿಗಳ ಕಾಯ್ದೆ 2016 ಅರಿವು, ವಿಕಲಚೇತನರ ಹಕ್ಕೊತ್ತಾಯ ಹಾಗೂ ವಿಕಲಚೇತನ ಸಾಧಕರಿಗೆ ಸನ್ಮಾನ ಸಮಾರಂಭಕ್ಕೆ ಶುಭ ಕೋರಿದರು.

ವಿಕಲಚೇತನರ ಸಮಸ್ಯೆಗಳಿಗೆ ಪರಿಹಾರ, ಸರ್ಕಾರಿ ಕಚೇರಿಗಳಿಗೆ ಮೆಟ್ಟಿಲೇಣಿ ರೈಲಿಂಗ್ ವ್ಯವಸ್ಥೆ, ಎಲ್ಲಾ ಇಲಾಖೆಗಳಲ್ಲಿ ವಿಕಲಚೇತನರಿಗೆ ಮೀಸಲಿಟ್ಟ 5% ಅನುದಾನ ಕುರಿತು KDP ಸಭೆಯಲ್ಲಿ ಚರ್ಚೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ 5% ವಿಕಲಚೇತನರಿಗೆ ಮೀಸಲಾತಿ, ಇನ್ನಿತರ ಪ್ರಮುಖ ವಿಷಯಗಳನ್ನು ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯುವ ಕಾರ್ಯವನ್ನು ನಾನು ಮಾಡುತ್ತೇನೆ ಎಂಬ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಶ್ರೀ ಮಹೇಶ್ ಬಿರಾದರ್, ತಾಲೂಕ ಆರೋಗ್ಯ ಅಧಿಕಾರಿಗಳ ಹನುಮಂತರೆಡ್ಡಿ, ಕು. ಸಂಪ್ರೀತ ಮೇಡಂ ಎಪಿಡಿ ಸಂಸ್ಥೆಯ ವ್ಯವಸ್ಥಾಪಕರು, ನಾಗಪ್ಪಜಿ ಅವಟಿ, ಜಿಲ್ಲಾ ಸಂಯೋಜಕರು ನೀತಿ ಮತ್ತು ವಕಾಲತ್ತು ವಿಭಾಗ,ಶ್ರೀ ಶರಣಬಸಮ್ಮ ಸೈಕಾಲಜಿಸ್ಟ್ ಸ್ಪೆಷಲ್ ಎಸ್ಟ್, ವಿರುಪಾಕ್ಷಿ ಮಾಲಿಪಾಟೀಲ್ ಗುರುಮಠಕಲ್ ತಾಲೂಕ ಸಂಯೋಜಕರು, ರಮೇಶ್ ಕಟ್ಟಿಮನಿ ಯಾದಗಿರಿ ತಾಲೂಕ ಸಂಯೋಜಕರು, ಪ್ರಿಯದರ್ಶನ್ ತೆರಪಿಸ್ಟ್, ಮೋಹನ್ CBR, ಉಪಸ್ಥಿತರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!