ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾಧ್ಯಮ ರತ್ನ ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಜುಲೈ 27 ರಂದು ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿದ ಸಾಧಕರಿಗೆ ಮಾಧ್ಯಮ ರತ್ನ ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ‌.

ಕಲಬುರಗಿ/ ಜೇವರ್ಗಿ: ಜು. 27ರಂದು ಪತ್ರಿಕಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನ ಮಾಡಿದ ಸಾಧಕರಿಗೆ ಮಾಧ್ಯಮ ರತ್ನ ಪ್ರಶಸ್ತಿ ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜೇವರ್ಗಿ ತಾಲೂಕು ಘಟಕದ ಅಧ್ಯಕ್ಷ ಮರೆಪ್ಪ ಬೇಗಾರ್ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜುಲೈ 27 ರಂದು ಕನ್ನಡ ಭವನದಲ್ಲಿ ಸಾಯಂಕಾಲ 4:00 ಗಂಟೆಗೆ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ ಅಧ್ಯಕ್ಷ ಮರೆಪ್ಪ ಬೇಗಾರ್ ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಡಾಕ್ಟರ್ ಶಿವಾನಂದ್ ಮಹಾಸ್ವಾಮಿಗಳು ವಿರಕ್ತ ಮಠ ಸೊನ್ನ ಹಾಗೂ ಚಿಗರಹಳ್ಳಿಯ ಸಿದ್ದಬಸವ ಕಬೀರ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಹಾಗೂ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆ ಕೆ ಆರ್ ಡಿ ಅಧ್ಯಕ್ಷ ಹಾಗೂ ಶಾಸಕರಾದ ಡಾಕ್ಟರ್ ಅಜಯ್ ಧರ್ಮಸಿಂಗ್ ಮಾಡಲಿದ್ದಾರೆ, ನಂತರ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹಾಗೂ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಯವರು ಜ್ಯೋತಿ ಬೆಳಗಿಸಲಿದ್ದಾರೆ. ನಂತರ ಭಾವಚಿತ್ರ ಪುಷ್ಪಾರ್ಚನೆಯು ಕೇದಾರಲಿಂಗ ಹಿರೇಮಠ ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಮಲ್ಲಿನಾಥಗೌಡ ಪಾಟೀಲ್ ಸಲ್ಲಿಸಲಿದ್ದಾರೆ ಹಾಗೂ ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿಗಳಾದ ರಾಜಶೇಖರ್ ಸಾಹು ಸೀರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ, ಜೆಡಿಎಸ್ ಹಿರಿಯ ಮುಖಂಡ ರಮೇಶ್ ಬಾಬು ವಕೀಲ್ ರವರು ಸಸಿ ನೆಡುವವರು ಹಾಗೂ ಕಾರ್ಯಕ್ರಮದ ನೇತೃತ್ವವನ್ನು ಕುರುಬ ಸಮಾಜದ ತಾಲೂಕ ಅಧ್ಯಕ್ಷ ಸಾಯಬಣ್ಣ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಹರನಾಳ, ಕೋಲಿ ಸಮಾಜದ ಮುಖಂಡ ವಸಂತರಾವ ನರಿಬೋಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಾಶಿಮ ಪಟೇಲ್ ,ಪ್ರಥಮ ದರ್ಜೆ ಗುತ್ತೇದಾರರ ಗೊಲ್ಲಾಳಪ್ಪ ಯತ್ನಾಳ್ ವಹಿಸಲಿದ್ದಾರೆ.
ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಪ್ರಗತಿಪರ ಚಿಂತಕರಾದ ಭಗವಂತರಾವ ಬೆಣ್ಣೂರ ಮುಖ್ಯ ಅತಿಥಿಗಳಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಹಾಗೂ ಶಹಾಪೂರವಾಣಿ ಸಂಪಾದಕರಾದ ಈರಣ್ಣ ಹಾದಿಮನಿ, ಪಿಕಾರ್ಡ್ ಮಾಜಿ ಅಧ್ಯಕ್ಷರಾದ ರೈಮನ ಪಟೇಲ್ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವಣಸಿದ್ದಪ್ಪ ಸಂಕಾಲಿ, ವರ್ತಕರ ಸಂಘದ ಅಧ್ಯಕ್ಷರಾದ ಬಿಎನ್ ಪಾಟೀಲ್ ,ಕಾರ್ಯದರ್ಶಿಗಳಾದ ಬಸವರಾಜ ಸಾಸಬಾಳ, ಕುರುಬ ಸಮಾಜದ ತಾಲೂಕ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ರದ್ದೇವಾಡಗಿ ,ಅಯ್ಯನಗೌಡ ಪೊಲೀಸ್ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ದಿನ್ನಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಹಾಗೂ ಮಾಧ್ಯಮ ರತ್ನ ಪುರಸ್ಕೃತರಾದ ಧನರಾಜ ರಾಠೋಡ್, ಡಾ. ಅಶೋಕ್ ದೊಡ್ಮನಿ, ಚಂದ್ರಶೇಖರ್ ಕಟ್ಟಿಮನಿ, ಚಿರಾಯು ಜ್ಞಾನಿ ದಿನ ಪತ್ರಿಕೆ ಪ್ರಧಾನ ಸಂಪಾದಕರಾದ ಚಂದ್ರಶಾಗೌಡ ಮಾಲಿ ಪಾಟೀಲ್, ಸುರೇಶ ಹಿರೇಮಠ್ ರಾಜು ಮುದ್ದಡಗಿ ,ಶರಣು ಬಡಿಗೇರ್, ಸಿದ್ದನಗೌಡ ಪಾಟೀಲ್, ಸಿದ್ದು ಕಾಮನಕೇರಿ, ಗೌಸ್ ಇನಮದಾರ್, ನಾಗರಾಜ ಶಹಬಾದ್ ,ಸಮಾಜ ಸೇವಾ ರತ್ನ ಪುರಸ್ಕೃತರಾದ ಯುವ ಉದ್ದಮಿ ಬಸವರಾಜ್ ಪಾಟೀಲ್ ಸೋಮನಾಥಹಳ್ಳಿ, ರೆಡ್ಡಿ ಸಮಾಜದ ತಾಲೂಕ ಅಧ್ಯಕ್ಷ ಶಿವ ರೆಡ್ಡಿ ಐನಾಪುರ್, ಬಿಜೆಪಿ ಯುವ ಮುಖಂಡರಾದ ಸುರೇಶ ಪಾಟೀಲ್ ನೇದಲಗಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಎಸ್ ಕೆ ಬಿರಾದಾರ, ಸಿದ್ದನಗೌಡ ಪೊಲೀಸ್ ಪಾಟೀಲ್ ಹಳ್ಳಿ, ವಕೀಲರಾದ ರವಿಚಂದ್ರ ಗುತ್ತೇದಾರ್, ಭಾರತ ಸರ್ಕಾರ ನೊಟರಿ ರಾಜಶೇಖರ್ ಶಿಲ್ಪಿ ವಕೀಲರು, ಅಜ್ಜು ಲಕ್ಪತಿ, ತಾಲೂಕ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶರಣಪ್ಪ ದೇಸಾಯಿ ಹಾಗೂ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಬೀರನೂರ್ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಶಿವಶರಪ್ಪ ಚಿಕ್ಕಮೇಟಿ ಕಲ್ಯಾಣ ಕರ್ನಾಟಕ ಕರವೇ ರಾಜ್ಯ ಅಧ್ಯಕ್ಷರಾದ ಶರಣು ಬೀರನೂರ ಕಾಂಗ್ರೆಸ್ ಮುಖಂಡರಾದ ಬಾಗರೆಡ್ಡಿ ಆಂದೋಲ, ಕಾಂಗ್ರೆಸ್ ಯುವ ಮುಖಂಡರಾದ ಸುನಿಲ್ ಚನ್ನೂರ, ಖ್ಯಾತ ಉದ್ದಮಿಗಳಾದ ಅಲ್ಲಾವುದ್ದೀನ್, ನೆಲೋಗಿ ಜೆಡಿಎಸ್ ಯುವ ಮುಖಂಡರಾದ ಅರುಣ್ ರೆಡ್ಡಿ ಶಿವಪುರ, ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕರಾದ ಸಿದ್ರಾಮ ಕಟ್ಟಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀಹರಿ ಕರಕಿಹಳ್ಳಿ, ಗೃಹ ರಕ್ಷಕ ದಳ ಘಟಕ ಅಧಿಕಾರಿ ಯಶವಂತ ಮಂದೇವಾಲ,ಭಾರತಿ ಬಿ. ಪಾಟೀಲ, ಎಸ್ ಕೆ ಡಿ ಆರ್ ಟಿ ಸಿ ಟ್ರಸ್ಟ್ ರೂಪಾ ಜಿ ಗೋಲ ಶಿಕ್ಷಕರಾದ ಸರೋಜಿನಿ ಹಳಿಮನಿ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರಾಜೇಶ್ವರಿ ಹಿರೇಗೌಡ, ನಾಟಿ ವೈದ್ಯರಾದ ಶರಣಪ್ಪ ಸುಬೇದಾರ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ರಾಜಶೇಖರ ಹರನಾಳ, ಬೀರನೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದೇವರಾಜ್ ಮೌರ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೂದೆಪ್ಪ ಯಾದವ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೂಡ ವಿಶೇಷ ಸನ್ಮಾನ ಮಾಡಲಾಗುವುದೆಂದು ಕಜಯೂ ಅಧ್ಯಕ್ಷ ಮರೆಪ್ಪ ಬೇಗಾರ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಪ್ರಗತಿಪರ ಚಿಂತಕರು ಹಾಗೂ ರೈತ ಪರ, ಬಸವಪರ ಸಾಹಿತಿಗಳು, ಲೇಖಕರು, ಪತ್ರಕರ್ತರು,ಅಂಬೇಡ್ಕರ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!