ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಉಡುಗೊರೆ

ದೇವ ಕೊಟ್ಟ ಉಡುಗೊರೆ
ಭಾವ ತುಂಬಿದ ಅರಮನೆ
ನವ ನವೀನ ಮಾದರಿ
ಹಳತು ಹೊಸತು ಸಮ್ಮಿಲನ
ಅನುಭವದ ಸದನ.

ಜೀವ ವೀಣೆ ಮೀಟಿದೆ
ಹಾವ ಭಾವ ಲಹರಿ ಮೂಡಿಸಿ
ಒಳಗಣ್ಣ ತೆರೆ ಒಮ್ಮೆ
ಮೇಲ್ಪದರ ಮಾಸಿದರು
ಅಂತರಂಗದ ಅರಿವಿರಲಿ.

ಆನು ತಾನಾದ ಬಳಿಕ
ಅನುವಾದದ ಬಳುವಳಿ
ತಿರುಳು ತಿಳಿದು
ಒಳ ರಸವ ಹೀರಿ
ನೋಟಕೆ ಮಾರು ಹೋಗದೆ.

ಸೃಷ್ಟಿ ನಿಯಮಕೆ ಓಗೊಟ್ಟು
ದೃಷ್ಟಿ ಬದಲಿಸದೆ
ಸಮಸ್ಥಿತಿಯಲಿ ನಡೆ
ಬಂದು ಹೋಗುವ ದಾರಿ ಸಹಜ
ಆವಕಾಶ ಬಾಚಿ ತಬ್ಬಿಕೋ.

ಅತ್ಮ ಸುಖಿಯಾಗು
ಚಿತ್ತ ಶುದ್ಧಿಯಲಿ
ಬಿತ್ತಿದಂತೆ ಬೆಳೆಯುವೆ
ಕೊಳೆಯ ತೊಡೆದು
ಸುಂದರ ಮಾಡಿಕೋ.

ಪರಮಾತ್ಮನ ನೆನೆ
ಕೊಟ್ಟ ಉಡುಗೊರೆಯ
ಒಪ್ಪ ಓರಣ ಮಾಡಿಕೋ
ತೆರೆದು ನೋಡೋಮ್ಮೆ
ಬರಿದು ಬದುಕಲಿ ಚಿಗುರಿ ಬೆಳೆಯಲಿ.

  • ರೇಷ್ಮಾ ಕಂದಕೂರ, ಶಿಕ್ಷಕಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!