ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

” ಶ್ರೀ ಗುರು ಗಂಗಲಿಂಗ ಮಹಾರಾಯರ ಜಾತ್ರಾ ಮಹೋತ್ಸವದ ಅಂಗವಾಗಿ ಬೃಹತ್ ರಕ್ತ ದಾನ ಶಿಬಿರ”

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಶ್ರೀ ಗುರು ಗಂಗಲಿಂಗ ಮಹಾರಾಯರ 32ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಿನ್ನೆ ಜಿಲ್ಲಾ ಸರಕಾರಿ ಆಸ್ಪತ್ರೆ ವಿಜಯಪುರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಅಗರಖೇಡ ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಸಿದ್ದೇಶ್ವರ ಸೂಪರ್ ಸ್ಪೆಷಲಿಸ್ಟ್ ಹಾಸ್ಪಿಟಲ್ ವಿಜಯಪುರ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಷಣೆ ಆಯೋಜಿಸಲಾಗಿತ್ತು.
ರಕ್ತದಾನವು ಅಮೂಲ್ಯವಾದ ದಾನವಾಗಿದೆ, ಮತ್ತು ಇದು ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ, ರಕ್ತದಾನ ಮಾಡುವುದರಿಂದ, ನಾವು ರಕ್ತದ ಅಗತ್ಯವಿರುವವರಿಗೆ ಸಹಾಯ ಮಾಡಬಹುದು ಮತ್ತು ಅವರ ಪ್ರಾಣವನ್ನು ಉಳಿಸಬಹುದು ಎಂದು ತಿಳಿದು ಅನೇಕ ಭಕ್ತಾದಿಗಳು ಬಂದು ರಕ್ತದಾನ ಮಾಡಿದರು. ಇದೇ ಸಮಯದಲ್ಲಿ ಕೆಲವರು ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ರಾಜೇಶ್ ಕೊಳೆಕಾರ್, ಚೈತ್ರಾ ಭಜಂತ್ರಿ, ಕಾಮಣ್ಣ ದಶವಂತ, ಎಸ್.ಆರ್. ಗೋಟ್ಯಾಳ, ಎಸ್ ಎಸ್ ಅಂಕಲಗಿ, ಪ್ರಮೋದ್ ಕುಮಾರ್, ಎಸ್ ಬಿ ಜಾಧವ್, ಎಸ್ ಎಸ್ ಕಲಮನಿ, ಶ್ರೀಮತಿ ಮತಿಬಾ, ಮೋಹನ್ ರೆಡ್ಡಿ, ಸಿದ್ದೇಶ್ವರ ಸೂಪರ್ ಸ್ಪೆಷಲಿಸ್ಟ ಹಾಸ್ಪಿಟಲ್ ಸಿಬ್ಬಂದಿಯಾದ ಮಹೇಶ್ ಅಗರಖೇಡ ಹಾಗೂ ಎಲ್ಲಾ ಆಶಾ ಕಾರ್ಯಕರ್ತೆಯರು, ಕಮಿಟಿಯ ಪದಾಧಿಕಾರಿಗಳಾದ ಗೌಡಪ್ಪ ಗೌಡ ಪಾಟೀಲ್, ದಶಗೀರ ಮುಲ್ಲಾ, ಜಾಕಿರ್ ವಾಲಿಕಾರ್, ಶಾಮ್ ಮೊರೆ, ವಿಶ್ವನಾಥ ಕೌಲಗಿ, ಶಾಹಿದ್ ಮುಲ್ಲಾ, ಪ್ರಭು ಪಾಟೀಲ್, ಆನಂದ ನಾವಿ, ಭೀಮರಾಯ ಎಳಮೇಲಿ, ಲಕ್ಷ್ಮಣ ಬೋಸಲೆ, ಬಾಬು ಗೌಡ ಪಾಟೀಲ್, ರಾಮ ಮೋರೆ, ರಾಜಕುಮಾರ ಲಗಳಿ, ಮಹೇಶ್ ಭೂಸಲೆ ಉಪಸ್ಥಿತರಿದ್ದರು.

ವರದಿ ಮನೋಜ್ ನಿಂಬಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!