ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೂಡ್ಲಿಗಿ : ಕ.ರಾ.ಅಂ.ನೌ.ಸಂಘದ ಮುಖಂಡರೊಂದಿಗೆ ಕಾರ್ಯಕರ್ತೆಯರು – ಸಿಐಟಿಯು ಸೇರ್ಪಡೆ ಘೋಷಣೆ

ವಿಜಯನಗರ ಜಿಲ್ಲೆ ಕೂಡ್ಲಿಗಿ : ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕೂಡ್ಲಿಗಿ ತಾಲೂಕು ಘಟಕ , ರಾಜ್ಯ ಘಟಕ ಹಾಗೂ ವಿಜಯನಗರ ಜಿಲ್ಲಾ ಘಟಕ ನಿರ್ದೇಶನದಂತೆ ಸಿಐಟಿಯು ಸಂಘಟನೆಗೆ ಸೇರ್ಪಡೆಗೊಂಡಿರುವುದಾಗಿ ಘೋಷಿಸಲಾಗಿದೆ. ಸಂಬಂಧಿಸಿದಂತೆ ಕ.ರಾ.ಅಂ.ನೌ.ಸಂಘದ ವಿಜಯನಗರ ಜಿಲ್ಲಾಧ್ಯಕ್ಷರಾದ ಕೆ.ನಾಗರತ್ನ ರವರು , ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಮ್.ಸ್ವಪ್ನಾರವರು ಜಂಟಿ ಹೇಳಿಕೆ ನೀಡಿದ್ದಾರೆ. ಅವರು ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ದೇವಸ್ಥಾನದ ಹತ್ತಿರ ವಿರುವ , ಸಿಐಟಿಯು ತಾಲೂಕು ಕಚೇರಿಯಲ್ಲಿ ಅಧೀಕೃತವಾಗಿ ಹೇಳಿಕೆ ನೀಡಿ ಖಚಿತಪಡಿಸಿದ್ದಾರೆ. ಅಂಗನವಾಡಿ ಸಂಘದ ರಾಜ್ಯ ಮುಖಂಡರಾದ ಕೆ. ನಾಗರತ್ನ ರವರು ಮಾತನಾಡಿದರು , ಸಿ ಐ ಟಿ ಯು ಸಂಘಟನೆ ರಾಜ್ಯಾಧ್ಯಂತ ತುಂಬಾ ಪ್ರಭಲ ಹಾಗೂ ಪ್ರಭಾವಿ ಸಂಘಟನೆಯಾಗಿ ಹೊರಹೊಮ್ಮಿದೆ. ಕ.ರಾ.ಅಂ.ನೌ. ಸಂಘದ ರಾಜ್ಯಾಧ್ಯಕ್ಷರಾದ ವರಲಕ್ಷ್ಮಿ ಕಾಮ್ರೆಡ್ ರವರು , ರಾಜ್ಯದ ಸಮಸ್ತ ಅಂಗನವಾಡಿ ನೌಕರರ ಏಳಿಗೆಗಾಗಿ ಹಾಗೂ ಹಲವಾರು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಸರ್ಕಾರಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು , ನಮ್ಮೆಲ್ಲರ ಸಮಸ್ಯೆಗಳನ್ನು ಹೋರಾಟದ ಮೂಲಕ ಬಗೆಹರಿಸಬೇಕೊಳ್ಳಬೇಕಿದೆ ಎಂದರು. ಕ. ರಾ. ಅಂ. ನೌ. ಸಂಘದ ರಾಜ್ಯ ಮುಖಂಡರ‍ಾದ ಬಿ.ಉಮಾದೇವಿ, ಸಿಐಟಿಯು ಸಂಘಟನೆ ಹಾಗೂ ಕಾರ್ಮಿಕ ಮುಖಂಡರು , ವಕೀಲರಾದ ಸಿ.ವಿರುಪಾಕ್ಷಪ್ಪ ನೇತೃತ್ವದಲ್ಲಿ ಸಿಐಟಿಯು ಸಂಘಟನೆಯ ತಾಲೂಕು ಮುಖಂಡರಾದ , ಗುನ್ನಳ್ಳಿ ರಾಘವೇಂದ್ರ. ಕ.ರಾ.ಅಂ.ನೌ.ಸಂಘದ ತಾಲೂಕು , ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಸದಸ್ಯರು. ವಾಲ್ಮೀಕಿ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಬೊಮ್ಮಘಟ್ಟ ಪಂಪಾಪತಿ , ವಾಲ್ಮೀಕಿ ಸಮುದಾಯದ ಮುಖಂಡರಾದ ಯು.ಗೌರಮ್ಮರವರ ಸ್ವಾಮಿರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ಸಿ ಐ ಟಿಯು ಸಂಘಕ್ಕೆ ಸೇರಿದ , ಕ.ರಾ.ಅಂ.ನೌ.ಸಂಘದ ಪದಾಧಿಕಾರಿಗಳ ಹೆಸರು ಇಂತಿದೆ. ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ , ಕೂಡ್ಲಿಗಿ ತಾಲೂಕು ಅಧ್ಯಕ್ಷರಾಗಿ ಮಹಾಂತೇಮ್ಮ.
ಪ್ರಧಾನ ಕಾರ್ಯದರ್ಶಿಯಾಗಿ ಕೆ. ಯೆಂಕಮ್ಮ , ಖಜಾಂಚಿ ಕೆಂಚಮ್ಮ , ಉಪಾಧ್ಯಕ್ಷರಾಗಿ ಸುಮಂಗಳ ,
ಸಹಕಾರ್ಯದರ್ಶಿಗಳಾಗಿ ಜ್ಯೋತಿ ,
ಕವಿತಾ, ಚೌಡಮ್ಮ, ಕಾಮಾಕ್ಷಿ ಆಯ್ಕೆಯಾಗಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!