ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಕಾಶ ಗುಳೇದಗುಡ್ಡ ಅವರ ಪತ್ರಿಕಾ ರಂಗದ ಸೇವೆಗೆ ಸಂದ ಗೌರವ 


 
ವೃತ್ತಿ ಮತ್ತು ಪ್ರವೃತ್ತಿಗಳ ನಡುವೆ ಸಮನ್ವಯ ಸಾಧ್ಯವಾದರೆ ಸಾಧನೆ ಸುಲಭವಾಗುತ್ತದೆ. ಪ್ರವೃತ್ತಿಯೇ ವೃತ್ತಿಯಾದರೆ ಅತ್ಯಪರೂಪದ ಸಾಧನೆ ಸಿದ್ಧಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಪರಿಶ್ರಮ, ಪ್ರತಿಭೆ, ಪ್ರಯತ್ನಗಳು ಒಟ್ಟುಗೂಡಿದರೆ ಈ ಸಮಾಜ ಗುರುತಿಸಬಹುದಾದ ಹಾಗೂ ಗೌರವಿಸಬಹುದಾದ ಕೀರ್ತಿಗೆ ಪಾತ್ರರಾಗುತ್ತಾರೆ ಎಂಬುದಕ್ಕೆ ಪ್ರಕಾಶ ಗುಳೇದಗುಡ್ಡ ಅವರೇ ಸಾಕ್ಷಿ. ಅವರ ಪತ್ರಿಕೋದ್ಯಮದ ಪಯಣವೇ ಅಪರೂಪದ್ದಾಗಿದೆ, ಅನುಪಮವಾದುದಾಗಿದೆ.
 
ಕುರಿ ಕಾಯುವ ಹುಡುಗನೊಬ್ಬ ದಿನಪತ್ರಿಕೆಗಳನ್ನು ಹಂಚುವ ಕೆಲಸಕ್ಕೆ ತೊಡಗುವ ಮೂಲಕ ಪತ್ರಿಕಾ ಪ್ರಪಂಚವನ್ನು ಕುತೂಹಲದ ಕಣ್ಣುಗಳಿಂದ ನೋಡತೊಡಗಿದ…ಅದೇ ಪ್ರಕಾಶರ ಪತ್ರಿಕಾ ರಂಗದ ಪ್ರವೇಶಕ್ಕೆ ದಾರಿಯಾಯಿತು. ಪ್ರಕಾಶ ಅವರು ಹುಟ್ಟಿದ್ದು 1983 ರಲ್ಲಿ ಕಮತಗಿಯಲ್ಲಿ. 2000 ಇಸವಿಯಲ್ಲಿ ಎಸ್. ಎಸ್. ಎಲ್. ಸಿ ಮುಗಿಯುತ್ತಿದ್ದಂತೆಯೇ ಪ್ರಕಾಶ ರಂಗಪ್ಪ ಗುಳೇದಗುಡ್ಡ ಅವರು ಮಾಧ್ಯಮ ಲೋಕಕ್ಕೆ ಪ್ರವೇಶ ಪಡೆದುಕೊಂಡರು.  
 
ಇಳಕಲ್ಲದಿಂದ ಪ್ರಕಟವಾಗುತ್ತಿದ್ದ ‘ಬಂಡಾಯ’ ಪತ್ರಿಕೆಗೆ ಕಮತಗಿಯಿಂದಲೇ ಬರೆಯಲು ಶುರು ಮಾಡಿದ ಪ್ರಕಾಶರ ಪ್ರತಿಭೆಗೆ ಪೂರ್ಣ ಪ್ರಮಾಣದ ಬರವಣಿಗೆಯನ್ನು ಪ್ರಾರಂಭಿಸಲು ವೇದಿಕೆ ಒದಗಿಸಿಕೊಟ್ಟ ಬಾಗಲಕೋಟ ಜಿಲ್ಲಾ ಪತ್ರಿಕೆ ‘ಸಮಾಜವೀರ’. ಪತ್ರಿಕೆಯ ಅಂದಿನ ಸಂಪಾದಕರಾದ ದಿ. ಎನ್.ಎಚ್. ಶಾಲಗಾರ, ಗೌರವ ಸಂಪಾದಕರಾದ ದಿ. ಯು.ಎಚ್. ಸಾರವಾಡ ಅವರ ಪ್ರೋತ್ಸಾಹ, ಮಾರ್ಗದರ್ಶನ ಅವಿಸ್ಮರಣೀಯವಾದುದು. ಅಲ್ಲದೆ ಸಮೀರ ರಫೂಗಾರ ಅವರ ಸ್ನೇಹವೂ ಮರೆಯಲಾರದ್ದು. ಆ ಸಂದರ್ಭದಲ್ಲಿ ಆರ್. ನರಸಿಂಹಮೂರ್ತಿ, ಆರ್.ಬಿ. ಘಂಟಿ ಅವರ ಒತ್ತಾಸೆಯೂ ಮಾಧ್ಯಮ ಲೋಕಕ್ಕೆ ಬರಲು ಕಾರಣವಾಯಿತು.
 
ಪತ್ರಿಕೋದ್ಯಮದ ಪ್ರಾಥಮಿಕ ಪಾಠ ಶಾಲೆಯಾದ ಸಮಾಜವೀರ ಪತ್ರಿಕೆಯು ಸಮಾಜವನ್ನು ನೋಡುವ ಮತ್ತು ವರ್ತಮಾನದ ವಿದ್ಯಮಾನಗಳನ್ನು ಚಿಕಿತ್ಸಕ ದೃಷ್ಟಿಯಿಂದ ಗಮನಿಸಿ ವರದಿ ಮಾಡಲು ಅವಕಾಶ ಮಾಡಿಕೊಟ್ಟ ಮೊಟ್ಟಮೊದಲ ಅಧಿಕೃತ ವೇದಿಕೆ ಮತ್ತು ಅವಕಾಶವೆಂದರೂ ತಪ್ಪೇನಿಲ್ಲ.
 
2001 ರಿಂದ ನಿರಂತರವಾಗಿ ವರದಿಗಾರಿಕೆಯಲ್ಲಿ ತೊಡಗಿಸಿಕೊಂಡ ಪ್ರಕಾಶ ಅವರು ಸಮಾಜದ ಸಮಸ್ಯೆಗಳಿಗೆ ಲೇಖನಿಯನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಬಂದಿದ್ದಾರೆ. ಅವರ ನಿಷ್ಠೆ, ಶ್ರದ್ಧೆ, ಪ್ರಮಾಣಿಕತೆಯಿಂದಾಗಿ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕೆಲಸ ಮಾಡುವ ಅವಕಾಶಗಳೂ ಅವರ ಪಾಲಿಗೆ ಒಲಿದು ಬಂದಿವೆ.

ಕರ್ನಾಟಕ ಟೈಮ್ಸ್ ಪತ್ರಿಕೆಯ ಬಾಗಲಕೋಟೆ ಜಿಲ್ಲಾ ವರದಿಗಾರ, ಕನ್ನಡ ಪ್ರಭ ಪತ್ರಿಕೆಯ ಬಾಗಲಕೋಟೆ ಜಿಲ್ಲಾ ಸಹಾಯಕ ವರದಿಗಾರ, ಪ್ರಜಾವಾಣಿ ಪತ್ರಿಕೆಗೆ ಅಮೀನಗಡ ಹೋಬಳಿ ಮಟ್ಟದ ವರದಿಗಾರರಾಗಿ ಕೆಲಸ ಮಾಡಿದ ಪ್ರಕಾಶ ಅವರು ಮುಂದೆ ‘ಸಂಯುಕ್ತ ಕರ್ನಾಟಕ ಪತ್ರಿಕೆ’ಯ ಕೊಪ್ಪಳ ಜಿಲ್ಲಾ ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದು ಹೆಮ್ಮೆಯ ಸಂಗತಿ.

ಕಾರಣಾಂತರದಿಂದ ಮತ್ತೆ ತವರು ಜಿಲ್ಲೆಗೆ ಮರಳಿದ ಅವರು, ವಿಜಯಕರ್ನಾಟಕ, ವಿಜಯವಾಣಿ, ಉದಯವಾಣಿ ಪತ್ರಿಕೆಗಳಿಗೆ ಕಮತಗಿ ಗ್ರಾಮೀಣ ಭಾಗದಿಂದ ವರದಿ ಮಾಡಿ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಪರಿಹಾರವನ್ನು ತಮ್ಮ ಬರಹಗಳ ಮೂಲಕ ದೊರಕಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.
 
ಪತ್ರಿಕೆಗಳ ವಿನ್ಯಾಸ, ಜಾಹೀರಾತು, ವಿತರಣೆ ಇತ್ಯಾದಿ ಕೆಲಸಗಳ ಜೊತೆಗೆ ಅವರು ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೆಯಾದ ಹೆಜ್ಜೆಗುರುತನ್ನು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಹಿರಿಯರೂ ಹಿತೈಷಿಗಳೂ ಆದ ಉಮೇಶ್ ಪೂಜಾರಿ ಮತ್ತು ಮಹೇಶ ಅಂಗಡಿ, ದಿ. ರಾಮ ಮನಗೂಳಿ, ಈಶ್ವರ ಶೆಟ್ಟರ್, ಸುಭಾಷ್ ಹೊದ್ಲೂರು, ಪ್ರಕಾಶ ಬಾಳಕ್ಕನವರ, ಮುತ್ತು ನಾಯ್ಕರ್, ಆನಂದ ದಲಭಂಜನ, ಜಗದೀಶ ಗಾಣಿಗೇರ ಅವರೂ ಸೇರಿದಂತೆ ಜಿಲ್ಲೆಯ ಹಿರಿಯ ಮತ್ತು ಕಿರಿಯ ಮಾಧ್ಯಮ ಮಿತ್ರರ ಸಹಕಾರದಿಂದ ‘ಉದಯ ವಿಜಯ’ ಪತ್ರಿಕೆಯನ್ನು ತಮ್ಮದೇ ಸಂಪಾದಕತ್ವದಲ್ಲಿ ಮುನ್ನಡೆಸುತ್ತಿರುವ ಸಾಹಸಿ, ಸಹೃದಯಿ.

ಪ್ರಕಾಶರು ತಮ್ಮ ಪತ್ರಿಕೆಯಲ್ಲಿ ಸಮಾಜಮುಖಿ ವರದಿಗಳ ಪ್ರಕಟನೆಗೆ ಪ್ರಥಮ ಆದ್ಯತೆ ನೀಡುತ್ತ ಬಂದಿದ್ದು, ಸಧ್ಯ ವಿಜಯವಾಣಿ ಪತ್ರಿಕೆಗೆ ಕಮತಗಿ ವರದಿಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.  
 
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದ ಘನತೆಯನ್ನು ಎತ್ತಿಹಿಡಿಯಲು ನಿರಂತರವಾಗಿ ಶ್ರಮಿಸುತ್ತಿರುವ ಪ್ರಕಾಶರು ಆಡಳಿತಾಂಗವನ್ನು ಬರೆಹಗಳ ಮೂಲಕವೇ ಎಚ್ಚರಿಸುತ್ತ ಸಮಾಜದ ಸ್ವಾಸ್ಥ್ಯಕ್ಕೆ ಪತ್ರಿಕೆಗಳು ಹಾಗೂ ಪತ್ರಕರ್ತರು ಸದಾ ಕ್ರಿಯಾಶೀಲರಾಗಿ ಶ್ರಮಿಸುತ್ತಿರಬೇಕೆಂಬ ಮಾತಿಗೆ ನಿದರ್ಶನವಾಗಿದ್ದಾರೆ.

ಪ್ರಕಾಶರ ಪತ್ರಿಕಾರಂಗದ ಸಾಧನೆಯನ್ನು ಗುರುತಿಸಿ 2023 ರಲ್ಲಿ ಬಾಗಲಕೋಟೆ ಜಿಲ್ಲಾಡಳಿತವು ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ, ಹತ್ತು ಹಲವು ಸಂಘ-ಸಂಸ್ಥೆಗಳು ಅವರ ಅಪರೂಪದ ಮಾಧ್ಯಮ ಕ್ಷೇತ್ರದ ಕೆಲಸಗಳನ್ನು ಗುರುತಿಸಿ ಸನ್ಮಾನಿಸಿ ಪುರಸ್ಕರಿಸಿವೆ.
 
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಾಗಲಕೋಟೆ ಜಿಲ್ಲಾ ಘಟಕವು ಪ್ರಕಾಶ ಗುಳೇದಗುಡ್ಡ ಅವರ ಎರಡು ದಶಕಗಳಿಗೂ ಮೀರಿದ ಪತ್ರಿಕಾರಂಗದ ಅನುಪಮ ಸೇವೆಯನ್ನು ಗುರುತಿಸಿ, ದಿ. ಶ್ರೀಶೈಲ ಅಂಗಡಿ ಅವರ ಸ್ಮರಣಾರ್ಥ 2025 ನೇ ಸಾಲಿನ ‘ಅತ್ಯತ್ತಮ ಗ್ರಾಮೀಣ ಪತ್ರಕರ್ತ ಪ್ರಶಸ್ತಿ’ ನೀಡಿ ಗೌರವಿಸುತ್ತಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!