ಭದ್ರಕಾಳಿ ಪತಿಯೇ ಶ್ರೀ ವೀರಭದ್ರನೆ
ಶ್ರೀ ನಿಡಗಲ್ಲು ಕ್ಷೇತ್ರದಲಿ ನೆಲೆಸಿಹನೆ
ನಂಬಿ ಬಂದ ಭಕ್ತರನು ಸಲಹುವವನೆ
ಜಗದ ಒಡೆಯ ನೀನು ನಿಜ ದೇವನೆ.
ನೊಂದು ಬಂದಿರುವೆ ವರವ ಬೇಡುತ
ಕಡು ಕಷ್ಟಗಳ ದೂರ ದೂಡು ಎನ್ನುತ
ನಂಬಿ ಬಂದಿಹೆನು ನನ್ನ ಹರಕೆ ಕೇಳುತ
ಭಕ್ತಿಯಿಂದ ಬೇಡುವೆ ಕರ ಮುಗಿಯುತ
ಮನ್ನಿಸೆನ್ನ ಮಾಡಿದ ಕರ್ಮದ ಪಾಪವ
ತೊಲಗಿಸೆನ್ನ ಮೇಲಿನ ಕೋಪ ತಾಪವ
ಸಂತೈಸುತ ಹರಸೆನಗೆ ಒಳ್ಳೆಯ ತನವ
ಬಿಡದೆ ತೋರುವೆನು ಭಕ್ತಿಯ ಭಾವವ.
ಅಜ್ಞಾನವೆಂಬ ಕತ್ತಲೆಯಲ್ಲಿ ನೊಂದು
ಸುಜ್ಞಾನ ಇಲ್ಲದೆ ಅಂಧಕಾರದಿ ಬೆಂದು
ಸದ್ಗತಿ ಬೇಡುತ ನಿನ್ನ ಕಾಣಲು ಬಂದು
ಶಿರಬಾಗಿ ನಿಂತಿಹೆನು ಶರಣಾಗಲೆಂದು.
ನಿಷ್ಠೆಯಿಂದ ಮಾಡುತಿರುವೆ ನನ್ನ ಕಾಯಕ
ನೆರಳಾಗುತ ನೀ ನಿಂತು ಕಾಪಾಡುವ ರಕ್ಷಕ
ಈ ಸೃಷ್ಟಿಯ ರಹಸ್ಯಕ್ಕೆ ನೀ ತಾನೇ ನಾಯಕ
ನೀ ಜೀವ ಕೊಟ್ಟು ಪೊರೆಯುವ ಜಗ ಪಾಲಕ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.



















