ಬರೆದುಬಿಡು ಪ್ರೇಮಕೆ ಹೊಸದೊಂದು ಮುನ್ನುಡಿ.
ಇಂದಾದರೂ ಹಿತವೆನಿಸಲಿ ನಿನ್ನದೊಂದು ಮುನ್ನುಡಿ.
ಅದೇ ಭಾರ ಬದುಕು ಅದೇ ಮರೆಯಲಾಗದ ನೋವು
ಎಂದಾದರೂ ಗೀಚಿ ಕಳುಹಿಸು ನನಗೊಂದು ಮುನ್ನುಡಿ.
ಯುಗ ಯುಗಗಳೇ ಸಾಗಿವೆ ಜಗವು ಬದಲಾಗಿ ಹೋಗಿದೆ
ಬದಲಾದರೂ ನಾವು ಹೇಳಬೇಕು ಅರಿವಿಗೊಂದು ಮುನ್ನುಡಿ
ಇರುಳ ಸುತ್ತ ಮೌನ ಬೇಲಿ ಕರಾಳ ಮುಖ ಎದುರಾದೀತು
ರಾಮ ರಾಜ್ಯದ ನೆಲದಲಿ ಕೆತ್ತಿಸು ಸತ್ಯಕ್ಕೊಂದು ಮುನ್ನುಡಿ.
ರವೀ ದೇವನೊಬ್ಬ ನಾಟಕಕಾರ ಪಾತ್ರದಾರಿಗಳು ನಾವೆಲ್ಲಾ
ಸಾಗಬೇಕು ದಕ್ಕಿದಂತೆ ಇರಲಿ ಧೈರ್ಯಕ್ಕೊಂದು ಮುನ್ನುಡಿ.
- ರವಿ.ವಿಠ್ಠಲ. ಆಲಬಾಳ, (ಕನ್ನಡಿಗ ರವಿ)



















