ಬಳ್ಳಾರಿ/ ಕಂಪ್ಲಿ : ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನ ಹಿಂಬದಿಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಹೂಗಾರ ಸಮಾಜ ಸೇವಾ ಸಂಘದ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರವಿ ಹೂಗಾರ, ಗೌರವಾಧ್ಯಕ್ಷರಾಗಿ ರಮೇಶ ಹೂಗಾರ, ಉಪಾಧ್ಯಕ್ಷರಾಗಿ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಜೀರ್ ಗಾದಿಲಿಂಗ, ಕಾರ್ಯದರ್ಶಿಯಾಗಿ ವಿರೇಶ ಹೂಗಾರ, ಖಜಾಂಚಿ ಗಣೇಶ ಹೂಗಾರ, ಸಲಹೆಗಾರರಾಗಿ ಜೀರ್ ಮಲ್ಲಪ್ಪ, ಜೀರ್ ಬಾಬಣ್ಣ, ಮದ್ದಿಕೇರಿ ಮಲ್ಲಿಕಾರ್ಜುನ, ಚಂದ್ರಶೇಖರಪ್ಪ ಇವರನ್ನು ಸರ್ವರ ಸಹಮತದೊಂದಿಗೆ ನೇಮಕ ಮಾಡಿ, ಆದೇಶಿಸಲಾಯಿತು. ತದ ನಂತರ ಮಾಜಿ ಅಧ್ಯಕ್ಷ ರಮೇಶ ಹೂಗಾರ ಇವರು ನೂತನ ಅಧ್ಯಕ್ಷ ರವಿ ಹೂಗಾರ ಇವರಿಗೆ ಅಧಿಕಾರ ಹಸ್ತಾಂತರ ಮಾಡುವ ಮೂಲಕ ಅಭಿನಂದಿಸಿದರು. ಈ ಸಂದರ್ಭದಲ್ಲಿ ಹೂಗಾರ ಸಮಾಜದವರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















