ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಮಾಪುರದಲ್ಲಿ NRLM ಯೋಜನೆಯಡಿ ಮಾಸಿಕ ಸಂತೆ

ಚಾಮರಾಜನಗರ/ ಹನೂರು : ತಾಲ್ಲೂಕು ಪಂಚಾಯಿತಿ ವತಿಯಿಂದ ಸಂಜೀವಿನಿ ಎನ್ ಆರ್ ಎಂ ಎಲ್ ಯೋಜನೆಯಡಿ ತಾಲೂಕಿನ ರಾಮಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹತ್ತಿರ ಮಾಸಿಕ ಸಂತೆಯನ್ನು ರಾಮಾಪುರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಈಶ್ವರ್ ರವರು ಉದ್ಘಾಟಿಸಿದರು.

ನಂತರ ಮಾತನಾಡಿದ ಈಶ್ವರ್ ತಾಲ್ಲೂಕಿನ ವಿವಿದ ಗ್ರಾಮ ಪಂಚಾಯಿತಿಗಳ ಮಹಿಳಾ ಸ್ವ ಸಹಾಯ ಗುಂಪುಗಳ ಒಕ್ಕೂಟಗಳಿಂದ ಮಹಿಳೆಯರು ಉತ್ಪಾದನೆ ಮಾಡಿರುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿಸುವ ಸಲುವಾಗಿ ಮಾಸಿಕ ಸಂತೆ ಏರ್ಪಡಿಸುತ್ತಿರುವುದು ಮಹಿಳೆಯರಿಗೆ ತುಂಬಾ ಉಪಯೋಗವಾಗುತ್ತದೆ.

ಈ ಪ್ರಕ್ರಿಯೆಯು ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಿದ್ದು, ಇದರಿಂದ ಮಹಿಳೆಯರು ಸ್ವಾಲಂಬನೆಯಿಂದ ಜೀವನ ನಿರ್ವಹಣೆ ಮಾಡಲು ಅನುಕೂಲವಾಗಲಿದೆ. ಮಹಿಳೆಯರು ಕುಟುಂಬಕ್ಕೆ ಮಾದರಿಯಾಗಿದ್ದು, ಮಾದಕ ಮುಕ್ತ ಕರ್ನಾಟಕ ಅಭಿಯಾನದಡಿ ಕುಟುಂಬಸ್ಥರು ಮತ್ತು ನೆರೆಹೊರೆಯವರು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಪ್ರಯತ್ನಿಸಿ. ಮುಂದಿನ ಯುವಪೀಳಿಗೆ ಮಾದಕ ವಸ್ತುಗಳ ಚಟದಿಂದ ಮುಕ್ತರಾಗಲು ಪಣತೊಡಬೇಕೆಂದು ತಿಳಿಸಿದರು.

ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಸಾರ್ವಜನಿಕವಾಗಿ ನಿಮ್ಮ ಹತ್ತಿರ ನೆರೆಹೊರೆಯಲ್ಲಿ ಕಂಡುಬಂದರೆ ತಕ್ಷಣ ಸರ್ಕಾರಿ ಸಹಾಯವಾಣಿಗೆ ಕರೆಮಾಡಿ ತಿಳಿಸಬೇಕೆಂದು ಎಲ್ಲರಿಗೂ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಎನ್.ಆರ್.ಎಲ್.ಎಂ ವಲಯ ಮೇಲ್ವಿಚಾರಕರಾದ ಕುಮಾರಿ.ಸಿ, ತಾಲ್ಲೂಕು ವ್ಯವಸ್ಥಾಪಕರಾದ ಲಿಂಗರಾಜು.ಬಿ, ಪೋಲೀಸ್ ಇಲಾಖೆಯ ಸಿಬ್ಬಂದಿಗಳು ತಾಲ್ಲೂಕು ಸಂಜೀವಿನಿ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!