ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಧುನಿಕ ಯುಗದ ಭರಾಟೆಯಲ್ಲಿ ಬಯಲಾಟ ಕಣ್ಮರೆಯಾಗುತ್ತಿದೆ ಕಲೆ ಉಳಿಸಿ ಬೆಳೆಸಿ : ವಿರುಪಾಕ್ಷಿ

ಬಳ್ಳಾರಿ / ಕಂಪ್ಲಿ :ಬಯಲಾಟ ಸೇರಿದಂತೆ ಜನಪದ ಕಲೆಗಳು ಆಧುನಿಕ ಯುಗದ ಭರಾಟೆಯಲ್ಲಿ ಕಣ್ಮರೆಯಾಗುತ್ತಿದ್ದು, ಯುವ ಸಮುದಾಯವು ಹಿಂದಿನ ಕಲೆಗಳನ್ನು ಅಧ್ಯಯನ ಮಾಡಿ, ಬಯಲಾಟದಂತಹ ಕಲೆಗಳನ್ನು ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಎನ್. ಗಣೇಶ ಅವತ ಆಪ್ತ ಸಹಾಯಕ ವಿರುಪಾಕ್ಷಿ ಹೇಳಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾ. ಪಂ. ಯ ಕಣವಿತಿಮ್ಮಲಾಪುರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ, ಬಳ್ಳಾರಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಯೋಗದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಭಕ್ತ ಪ್ರಹ್ಲಾದ್ ಅರ್ಥಾತ್ ಸಹಸ್ರ ಕವಚನ ವಧೆ ಎಂಬ ಸುಂದರ ಪೌರಾಣಿಕ ಬಯಲಾಟ ಪ್ರದರ್ಶನದಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಪಾಲ್ಗೊಂಡ ನಂತರ ಮಾತನಾಡಿ, ಇಂದಿನ ದೃಶ್ಯ ಮಾಧ್ಯಮ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ದೊಡ್ಡಾಟ ಬಯಲಾಟದಂತಹ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಭವಿಷ್ಯ ರೂಪಿಸಬೇಕು ಎಂದರು.

ಪ್ರದರ್ಶನ : ಇಲ್ಲಿನ ಬಯಲಾಟದಲ್ಲಿ ಎನ್.ಶಿವಪ್ಪ (ಬಾಲಕೃಷ್ಣ),
ಜಿ.ರೇಣುಕಾಗೌಡ (ಹಿರಣ್ಯ ಕಶಪ),
ಹಳ್ಳಿ ಕೃಷ್ಣ (ಪ್ರಹ್ಲಾದ್),
ಎನ್.ಸಂದೀಪ (ಅಗ್ನಿದೇವ),
ಟಿ.ಹನುಮಯ್ಯ (ಉಗ್ರನರಸಿಂಹ), ಎಂ.ಯಲ್ಲಪ್ಪ (ನರಹರಿ),
ನಾಯಕರ ಶಿವು (ನಾರಾಯಣ), ಟಿ.ಕುಬೇರ(ದೇವೇಂದ್ರ),
ಕೋರಿಬಸಪ್ಪ(ಮನ್ಮಥ), ಎಂ.ಕನಕರಾಜ್(ಸಹಸ್ರಕವಚ),
ಟಿ.ರಾಮಲಿಸ್ವಾಮಿ, ಹಳ್ಳಿ ದೇವೇಂದ್ರಪ್ಪ, ಚಿನ್ನೂರು ಶರಣಪ್ಪ (ಹಿಮ್ಮೇಳ), ಕೂಡ್ಲಿಗಿ ವೈಟ್ ಸುಮಾರ(ಮೇನಕ/ ಲಕ್ಷ್ಮಿ), ಉಮಾ ಅಂಕಮ್ಮನಹಳ್ಳಿ(ದಿತಿದೇವಿ/ರತಿ/ಶಚಿದೇವಿ), ಕೂಡ್ಲಿಗಿ ಗೀತಾ(ಖಯಾದು/ಊರ್ವಶಿ) ಪಾತ್ರಧಾರಿಗಳಾಗಿ ಅತ್ಯದ್ಭುತವಾಗಿ ಪ್ರದರ್ಶಿಸುವ ಮೂಲಕ ನೋಡುಗರ ಕಣ್ಮನ ಸೆಳೆದರು.

ನಾಟಕದ ವ್ಯವಸ್ಥಾಪಕರಾಗಿ ಉಳ್ಳೂರು ಪಕ್ಕೀರಪ್ಪ, ಎನ್.ರಾಮಯ್ಯ, ಓರಬಾಯಿ ಮಹಾದೇವ, ಕಥಾಸಂಚಾಲಕರಾಗಿ ಬಡಿಗೇರ್ ಕೃಷ್ಣ, ಸಂಗೀತ ನಿರ್ದೇಶಕರಾಗಿ ಎಸ್.ಕೆ.ತೇಜರಾಜ್ ಇವರು ಅಚ್ಚುಕಟ್ಟಾಗಿ ಬಯಲಾಟ ನಡೆಸಿಕೊಟ್ಟರು.
ಆಯಾ ಪಾತ್ರಧಾರಿಗಳು ವೇದಿಕೆಗೆ ಬರುತ್ತಿದ್ದಂತೆ ತಮಟೆ ನಾದ, ಪಟಾಕಿ ಸಿಡಿಸಿ, ಕೇಕೆ, ಶಿಳ್ಯೆ ಹೊಡೆಯುವ ಮೂಲಕ ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಶಾಸಕರ ಆಪ್ತ ಕಂಬತ್ ಧನರಾಜ್, ಯುಹಾನ್, ರಾಮಸಾಗರ ನಾರಾಯಣಪ್ಪ, ಮೆಟ್ರಿ ಗಿರಿ, ಬಳೆ ಮಲ್ಲಿಕಾರ್ಜುನ, ಮುಖಂಡರಾದ ಹಳ್ಳಿ ದೇವೇಂದ್ರಪ್ಪ, ಬುಜ್ಜಪ್ಪ, ರಾಮಯ್ಯ, ಮಹಾದೇವ, ಓರಬಾಯಿ ಲಕ್ಷ್ಮಣ ಸಿಂಧನೂರು ಸಿದ್ದಪ್ಪ, ಕುಂಬಾರ ಬಸವಣ್ಣ, ಅಂಬರೇಶ, ಡೊಂಗಿ ಬಸಪ್ಪ, ವೆಂಕಟೇಶ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!