ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿಕ್ಷಕ ಸಮುದಾಯಕ್ಕೆ ಸ್ಪೂರ್ತಿಯಾದ ವಿಶ್ವ ಬಂಧು ಸೇವಾ ಗುರು ಬಳಗದ ಕಲಾ ಸೇವೆ

ಹತ್ತು ಹಲವು ಸಮಾಜಮುಖಿ ಕಾರ್ಯ ಮಾಡುತ್ತಿರುವ ವಿಶ್ವಬಂಧು ಸೇವಾ ಗುರುಬಳಗ.

ಕೊಪ್ಪಳ : ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ ಅದನ್ನು ಸಂರಕ್ಷಿಸಿಕೊಂಡು ಹೋಗುವುದು ಮಾನವ ಧರ್ಮ. ಮಾನವನಾದರೂ ಯಾವುದಾದರೂ ಒಂದು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳುವ ಮೂಲಕ ಸಮಾಜದಿಂದ ಪ್ರಕೃತಿಯಿಂದ ಪಡೆದ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡ ನಾವು ಸಮಾಜಕ್ಕೆ ನಮ್ಮೆಲ್ಲಾ ಕೆಲಸಗಳ ಜೊತೆ ಜೊತೆಗೆ ಏನಾದರೂ ಒಂದು ಕೊಡುಗೆ ನೀಡಲು ನಾವು ಸದಾ ಸಿದ್ದರಾಗಿರಬೇಕು ಎಂಬುದಕ್ಕೆ ಸೃಜನಶೀಲ ಚಟುವಟಿಕೆಗಳ ಮೂಲಕ ಸಮಾಜ ಸೇವೆಯ ಮೂಲಕ ವೃತ್ತಿಯಲ್ಲಿ ಶಿಕ್ಷಕರಾದ ವಿಶ್ವ ಬಂಧು ಸೇವಾ ಗುರು ಬಳಗ ಸಾಕ್ಷಿಯಾಗಿದೆ. ಈ ಸಂಘಟನೆ ಸಮಾನ ಮನಸ್ಕರರು ಗುರುಗಳು ಸೇರಿಕೊಂಡು ನಿಸ್ವಾರ್ಥ ಮನೋಭಾವದಿಂದ ಸೃಜನಶೀಲ ಚಟುವಟಿಕೆಗಳ ಮೂಲಕ ಶಿಕ್ಷಕ ವೃತ್ತಿಯ ಜೊತೆಗೆ ಬಿಡುವಿನ ಸಮಯದಲ್ಲಿ ಮತ್ತು ಸೇವೆಗಾಗಿ ಒಂದಿಷ್ಟು ಸಮಯವನ್ನು ಬಿಡುವು ಮಾಡಿಕೊಂಡು ಸಮಾಜ ಸೇವೆಯನ್ನು ಮಾಡುತ್ತಿರುವ ವಿಶ್ವ ಬಂಧು ಸೇವಾ ಗುರು ಬಳಗದ ಶಿಕ್ಷಕರ ಕಾರ್ಯ ಅಭಿನಂದನಾರ್ಹ.

ಸಮಾಜದ ಸ್ವಸ್ಥತೆ ಹಾಳಾಗುತ್ತಿರುವ ಈ ಸಂದರ್ಭದಲ್ಲಿ, ಯುವಕರು, ವೃತ್ತಿಪರರು ನಾಗರಿಕರು, ಹಲವಾರು ದುಷ್ಟಚಟಗಳಿಗೆ ಬಲಿಯಾಗಿ ತಮ್ಮ ವೈಯಕ್ತಿಕ ಜೀವನ ಮತ್ತು ಸಾಮಾಜಿಕ ಜೀವನವನ್ನು ಹಾಳು ಮಾಡಿಕೊಳ್ಳುವ ಸಂದರ್ಭದಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು ಕೂಡ ಸಮಾಜವನ್ನು ಕಟ್ಟುವುದು ನಮ್ಮ ಕಾರ್ಯ ಎಂದು ಭಾವಿಸಿ ವೃತ್ತಿಯ ಜೊತೆ ಜೊತೆಗೆ ಸ್ವಸ್ಥ ಸಮಾಜ ಕಟ್ಟಲು ಸಂಘಟಿತರಾದ ಶಿಕ್ಷಕರ ಬಳಗ ಇದು. ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಶಿಕ್ಷಕರು. ಬಿಡುವಿನ ವೇಳೆಯಲ್ಲಿ ಸಮಾಜ ಸೇವ ಕಾರ್ಯವನ್ನು ಮಾಡುತ್ತಿರುವುದು ಇವತ್ತಿನ ಸಮಾಜಕ್ಕೆ ಮಾದರಿಯಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರು, ಉಪನ್ಯಾಸಕರು ಸೇರಿದಂತೆ 15 ಜನ ಸದಸ್ಯರಿಂದ ಪ್ರಾರಂಭವಾದ ವಿಶ್ವ ಬಂಧು ಸೇವಾ ಗುರು ಬಳಗವು ಇಂದು 110ಕ್ಕಿಂತ ಹೆಚ್ಚು ಸದಸ್ಯರ ಒಳಗೊಂಡಿದೆ. ಇವರ ಉದ್ದೇಶವೇ ಸ್ವಸ್ಥ ಸಮಾಜವನ್ನು ಕಟ್ಟುವುದು ಒಂದು ಬದಲಾವಣೆ ಹೆಜ್ಜೆ ಇಟ್ಟಾಗ ಹಲವು ಹೊಸ ದಾರಿಗಳನ್ನ ಸೃಷ್ಟಿಸಿಕೊಳ್ಳುತ್ತದೆ ಎಂಬುದಕ್ಕೆ ವಿಶ್ವ ಬಂಧು ಸೇವಾ ಗುರು ಬಳಗದ ಇವತ್ತಿನ ಕಾರ್ಯಗಳೇ ಸಾಕ್ಷಿಯಾಗಿದೆ. ಶಿಕ್ಷಣ ಇಲಾಖೆಯ ಜೊತೆಜೊತೆಗೆ ತಾವೇ ಸ್ವತಃ ಸೇವೆಗೆ ಸಮಯ, ಹಣ ಎಲ್ಲವನ್ನೂ ಸೇರಿಸಿಕೊಂಡು ಮಕ್ಕಳ ಶಿಕ್ಷಣದಲ್ಲಿ ಪರಿಣಾಮಕ ಬದಲಾವಣೆ ತರಲು ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಗತಗೊಳಿಸಿ ಯಶಸ್ವಿಯಾಗುತ್ತಿದ್ದಾರೆ. ಇವರ ಕಾರ್ಯ ಎಷ್ಟು ಅಚ್ಚುಕಟ್ಟಾಗಿದೆ ಎಂದರೆ. ಇವರು ನೀಡಿರುವ ಸೇವೆಗಳನ್ನ ಪಡೆದ ಆ ಭಾಗದ ಶಾಲಾ ಮಕ್ಕಳು ಕಲಿಕೆಗೆ ಬೇಕಾದ ವಾತಾವರಣವನ್ನು ನಿರ್ಮಿಸುವ ಇವರ ಸೇವೆಯನ್ನು ಬಳಕೆ ಮಾಡಿಕೊಂಡು ಗುಣಮಟ್ಟದ ಕಲಿಕೆಯನ್ನು ಪಡೆದುಕೊಂಡು ಶೈಕ್ಷಣಿಕ ಅವರ ಫಲಿತಾಂಶದಲ್ಲಿ ಪರಿಣಾಮಕ ಬದಲಾವಣೆಯನ್ನು ಕಂಡಿದೆ. ಅದಕ್ಕೆ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು, ನಾಗರಿಕ ಸಮಾಜ ಸಂಪೂರ್ಣವಾಗಿ ಬೆಂಬಲವಾಗಿ ನಿಂತಿದೆ. ಕಾರಣ ಯಾವುದೇ ಸಂಘಟನೆ ಪ್ರಾರಂಭವಾದಾಗ ಜೊತೆಗೂಡುವವರ ಸಂಖ್ಯೆ ಕಡಿಮೆ ಇರಬಹುದು ಆದರೆ ಉದ್ದೇಶ ಮತ್ತು ಪರಿಣಾಮ ಸಮರ್ಪಕವಾಗಿ ಹೊರ ಬಂದಾಗ ಸಂಘಟನೆಯ ಬಲ ಮತ್ತಷ್ಟು ಹೆಚ್ಚು ಕೊಳ್ಳುತ್ತದೆ ಎಂಬುದಕ್ಕೆ ಬೃಹದಾಕಾರವಾಗಿ ಬೆಳೆದಿರುವ ಬೆಳೆಯುತ್ತಿರುವ ಶಿಕ್ಷಕರ ಬಳಗವೇ ಸಾಕ್ಷಿಯಾಗಿದೆ.

ಇವರು ನಿರ್ವಹಿಸಿರುವ ಕಾರ್ಯಗಳು

  • ಶಾಲೆಗಳಲ್ಲಿ ಸಂಪೂರ್ಣ ಗೋಡೆ ಬರಹ ಚಿತ್ರಗಳು ಯೋಗದ ಭಂಗಿಗಳು ವಿವಿಧ ಚಿತ್ತಾರಗಳನ್ನು ಬಿಡಿಸುವುದರ ಮೂಲಕ ಗ್ರಾಮೀಣ ಭಾಗದ ಮಕ್ಕಳು ಶಾಲೆಗೆ ಮರಳುವಂತೆ ಮಾಡಿರುವುದು ಇವರು ಮತ್ತೊಂದು ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಅಭಿನಂದನೆ ಸಿಕ್ಕಿದೆ.
  • ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಕೆಗೆ ಪೂರಕವಾಗಿರುವ ಚಿತ್ತಾರಗಳನ್ನು ಬಿಡಿಸುವ ಮೂಲಕ ಕಲಿಕೆಯಿಂದ ಹಿಂದುಳಿದ ಮಕ್ಕಳು ಮತ್ತು ವಿಶೇಷ ಮಕ್ಕಳಿಗೆ ಪ್ರೇರಣೆಯನ್ನು ನೀಡುತ್ತಿದೆ 
  • ಸ್ಪೂರ್ತಿ ತುಂಬುವ ಪ್ರೇರಣೆಯ ಸಾಲುಗಳು ಉತ್ತೇಜನ ಹೆಚ್ಚಿಸುವ ಗಾದೆ ಮಾತುಗಳು ಮಕ್ಕಳ ಕಲಿಕೆಗೆ ಪೂರಕ ಗೋಡೆ ಬರಹಗಳು ಈ ಮುಂತಾದ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಶಿಕ್ಷಕರ ಬಳಗ ಇದು.
  • ಕನಿಷ್ಠ ವೆಚ್ಚದಲ್ಲಿ ಅಗತ್ಯವಿರುವ ಬಣ್ಣಗಳನ್ನು ತಂದು ವಿದ್ಯಾರ್ಥಿಗಳಿಗೆ ಆಕರ್ಷಕವಾದ ಉಪಯೋಗವಾಗುವ ಗಣಿತದ ಸೂತ್ರಗಳು ರೇಖಾಖಂಡಗಳು ಕನ್ನಡ ವ್ಯಾಕರಣದ ಚಿತ್ತಾರಗಳು ವಿವಿಧ ದಿಕ್ಕುಗಳು, ಮಗ್ಗಿಗಳು ಮಕ್ಕಳ ಮನಸ್ಸನ್ನು ಸೆಳೆಯುವಂತೆ ಚಿತ್ರವನ್ನು ಬಿಡಿಸುತ್ತಿರುವುದು ಇವರ ಪ್ರಸಂಶನೆಯಲ್ಲಿ ಮತ್ತೊಂದಾಗಿದೆ.
  • ಮಾರನಾಳ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ, * ಮಂಗಳೂರು ಹೋಬಳಿಯನ್ನು ಆಯ್ಕೆ ಮಾಡಿ ಕೋವಿಡ್ ವಾರಿಯರ್ಸ್ ಗೆ ಕಷಾಯ ಪೌಡರ್ ಹಾಗೂ ಮಾಸ್ಕ್ ವಿತರಣೆ ಮಾಡಲಾಯಿತು.
  • ಚಂಡಿನಾಳ ಸರ್ಕಾರಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ, ಬೇಸಿಗೆ ರಜಾ ಅವಧಿಯಲ್ಲಿ
  • ಮಂಗಳೂರಿನ ಅಂಬೇಡ್ಕರ್ ನಗರ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರ, ಪ್ರತಿಭಾ ಪುರಸ್ಕಾರ, ಸಾವಯವ ಕೃಷಿ ಕುರಿತು ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ. 
  • ಹಿರೇವಂಕಲಕುಂಟಾ ಹೋಬಳಿಯನ್ನು ಆಯ್ಕೆ ಮಾಡಿ ಗುಳೆ, ಹಿರೇವಂಕಲಕುಂಟಾ ಹಾಗೂ ಗಾಣದಾಳ ಗ್ರಾಮಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಜೊತೆಗೆ ಸ್ವಾತಂತ್ರ ಹೋರಾಟಗಾರ ಜಯಂತಿ ಆಚರಣೆ, 
  • ಹಿರೇವಂಕಲಕುಂಟಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹತ್ತು ದಿನಗಳ ಉಚಿತ ಯೋಗ ಶಿಬಿರ, ರಂಗೋಲಿ ಸ್ಪರ್ಧೆ, ಸ್ಲೋ ಬೈಕ್ ರೈಡ್ ಸ್ಪರ್ಧೆ ಹಾಗೂ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ , 
  • ವನಜಬಾವಿ ಶಾಲೆಯಲ್ಲಿ ವಿಶ್ವ ವಿಜೇತ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ, 
  • ತಿಪ್ಪನಾಳ ಮತ್ತು ಲಿಂಗನಬಂಡಿ ಶಾಲೆಯಲ್ಲಿ ವಿವಿಧ ವಸತಿ ಶಾಲೆಯ ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿ ಶಿಬಿರ,
  • ಹೊಸಳ್ಳಿಯಲ್ಲಿ ಉಚಿತ ಬೇಸಿಗೆ ಶಿಬಿರ ನಡೆಯಿತು. ಕುಕನೂರು ಹೋಬಳಿಯನ್ನು ಆಯ್ಕೆ ಮಾಡಿ ಸಿದ್ನೇಕೊಪ್ಪ ಹಾಗೂ ಗಾವರಾಳ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಜೊತೆಗೆ ಪರಿಸರ ಕುರಿತು ಚಿತ್ರಕಲೆ ಸ್ಪರ್ಧೆ,
  • ವಜ್ರಬಂಡಿ, ಗುತ್ತೂರ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ. ಪ್ಲೆಕ್ಸ ಅಳವಡಿಕೆ ಮತ್ತು ಗೋಡೆ ಬರಹ ಸೇವೆ.ಶಾಲೆಯ ಆಕರ್ಷಣೆ ಮತ್ತು ಗುಣಾತ್ಮಕ ಶಿಕ್ಷಣಕ್ಕೆ ಪೂರಕ ಮತ್ತು ಪ್ರೇರಕವಾಗಿರುವ ಪ್ಲೆಕ್ಸ ಅಳವಡಿಕೆ ಸೇವೆ ಮತ್ತು ಗೋಡೆ ಬರಹ ಮೂಲಕ ಪರಿಣಾಮಕಾರಿಯಾದ ಸುಮಾರು 86 ಕೊಠಡಿಗಳಿಗೆ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. 

ಸಿದ್ದಲಿಂಗಪ್ಪ ಶ್ಯಾಗೋಟಿ ರವರು ಕೋವಿಡ್ ಸಂದರ್ಭದಲ್ಲಿ ಕುವೆಂಪುರವರು ಬರೆದಿರುವ ಸ್ವಾಮಿ ವಿವೇಕಾನಂದರ ಪುಸ್ತಕ ಓದಿದ ಅದರಿಂದ ಪ್ರೇರಣೆಗೊಂಡು ಸಮಾಜಮುಖಿ ಕಾರ್ಯ ಕೈಗೊಳ್ಳಲು ಒಂದು ಸಂಸ್ಥೆ ಸ್ಥಾಪಿಸಬೆಕೆನ್ನುವ ಇಚ್ಛೆಯನ್ನು ಆತ್ಮೀಯ ಸ್ನೇಹಿತರ ಜೊತೆ ಹೋಬಳಿವಾರು ನಾಲ್ಕೈದು ಜನ ಸ್ನೇಹಿತರೊಂದಿಗೆ ಸಭೆ ಮಾಡಿ ಸುಮಾರು 15 ರಿಂದ 20 ಜನ ಸ್ನೇಹಿತರು ದಿನಾಂಕ 01.06.2020 ರಂದು ಕುಕನೂರ ತಾಲೂಕಿನ ತಿಮ್ಮಪ್ಪನ ತೋಪಿನಲ್ಲಿ ಸಭೆ ಮಾಡಿ ಸಮಗ್ರವಾಗಿ ಚರ್ಚಿಸಿ ಶ್ರಮ, ಸೇವೆ, ಸಹಬಾಳ್ವೆಯ ತತ್ವದಡಿ. ಸ್ವಾಮಿ ವಿವೇಕಾನಂದರು ಹಾಗೂ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಆದರ್ಶವಾಗಿರಿಸಿಕೊಂಡು ಪ್ರತಿ ವರ್ಷ ಪ್ರತಿಯೊಬ್ಬರೂ 1000 ರೂ ಹಾಕಿಕೊಂಡು ವಿಶ್ವಬಂಧು ಸೇವಾ ಗುರುಬಳಗ ಎಂಬ ಶಿರೋನಾಮೆಯಲ್ಲಿ ಕಾರ್ಯ ನಿರ್ವಹಿಸಲು ನಿರ್ಣಯ ಕೈಗೊಳ್ಳಲಾಗಿದೆ.ಪರಿಸರ ಸಂರಕ್ಷಣೆ,

ಸರ್ಕಾರಿ ಶಾಲೆಗಳ ಸಬಲೀಕರಣ, ಪ್ರತಿಭಾ ಪುರಸ್ಕಾರ,ಶರಣರು, ಸಂತರು,ದಾರ್ಶನಿಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ತಿಳಿಯುವುದು, ಯೋಗ ಶಿಬಿರ, ಮಕ್ಕಳ ಬೇಸಿಗೆ ಶಿಬಿರ ಹಾಗೂ ವಿವಿಧ ತರಬೇತಿ,ಕಾರ್ಯಾಗಾರ ಮತ್ತು ಉಪನ್ಯಾಸಗಳ ಆಯೋಜನೆ ಹೀಗೆ ವಿವಿಧ ಸಮಾಜಮುಖಿ, ರಚನಾತ್ಮಕ ಚಟುವಟಿಕೆಗಳನ್ನು ಮಾಡುವ ಉದ್ದೇಶವಿಟ್ಟು ಕೊಂಡು ಈ ಸಂಘಟನೆ ಸ್ಥಾಪೀಸಲಾಯಿತು ಎನ್ನುತ್ತಾರೆ ವಿಶ್ವ ಬಂದು ಸೇವಾ ಗುರು ಬಳಗದ ಅಧ್ಯಕ್ಷರಾದ, ಶಿಕ್ಷಕರಾದ ಶ್ರೀ ಸಿದ್ದಲಿಂಗಪ್ಪ ಶ್ಯಾಗೋಟಿ ಅವರು. ಅಂದು ಹದಿನೈದು ಇಪ್ಪತ್ತು ಸಮಾನ ಮನಸ್ಕ ಸ್ನೇಹಿತರೊಂದಿಗೆ ಪ್ರಾರಂಭವಾದ ವಿಶ್ವಬಂಧು ಸೇವಾ ಗುರುಬಳಗ ಈಗ ಸುಮಾರು 160 ಜನ ಸದಸ್ಯರನ್ನು ಹೊಂದಿದೆ ಸೇವಾ ಮನೋಭಾವ ಹೊಂದಿರುವವರು ಸದಸ್ಯರಾಗಬಹುದಾಗಿದೆ. ಶಿಕ್ಷಕ ಬಂಧುಗಳು, ಜನಪ್ರತಿನಿಧಿಗಳು ಅಧಿಕಾರಿಗಳು,ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜಮುಖಿ ಚಿಂತಕರು ಸಹಾಯ, ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

ಗುರುಬಳಗದ ಸೇವಾ ಕಾರ್ಯದಿಂದ ಹಲವಾರು ಬದಲಾವಣೆ ಮತ್ತು ಪರಿಣಾಮ ನೋಡಬಹುದು.

  • ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯನ್ನು ಗಳಿಸುತ್ತಿರುವುದು 
  • ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ ನಿರ್ಮಾಣವಾಗಿರುವುದು 
  • ಮಕ್ಕಳ ಕಲಿಕೆಯನ್ನು ಸುಲಭವಾಗಿಸಿದ ಶಿಕ್ಷಕರ ಬಳಗ
  • ಮಕ್ಕಳ ಓದಿನ ಆಸಕ್ತಿಯನ್ನು ಹೆಚ್ಚಿಸಿದೆ 
  • ಮಕ್ಕಳಿಗೆ ಗುಣಾತ್ಮಕ ಶಿಕ್ಷಣಕ್ಕೆ ಮಾದರಿಯಾಗಿದೆ 
  • ಗೋಡೆ ಬರಹ ಚಿತ್ರಪಟಗಳ ಬಿಡಿಸುವುದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಮತ್ತು ಪರಿಣಾಮಾತ್ಮಕ ನುಡಿಗಳಿಂದ ಉತ್ತೇಜನ ಸಿಕ್ಕಿದೆ 
  • ಶಿಕ್ಷಕರ ಸಮುದಾಯಕ್ಕೆ ಸ್ಪೂರ್ತಿದಾಯಕವಾದ ಕಲಾ ಸೇವೆ 
  • ಶಿಕ್ಷಕ ಬಳಗದ ಸೇವೆಯಿಂದ ಶಾಲಾ ಚಿತ್ರಣವೇ ಬದಲಾಗಿದೆ  
  • ಹಲವು ವರ್ಷಗಳಿಂದ ಸುಣ್ಣ ಬಣ್ಣ ಕಾಣದೆ ಉಳಿದಿದ್ದ ಶಾಲೆಗಳು. ಈ ಬಳಗದ ಸೇವೆಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡಗಳು ಈಗ ವರ್ಣಮಯವಾಗಿವೆ ಮತ್ತು ಚಿತ್ತಾಕರ್ಷಕವಾಗಿದೆ 
  • ರಜಾ ದಿನಗಳಲ್ಲಿ ಮತ್ತು ಸಮಯ ಮಾಡಿಕೊಂಡು ಶಿಕ್ಷಕರ ಬಳಗದ ಸೇವೆ ಎಲ್ಲರಿಗೂ ಮಾದರಿಯಾಗಿದೆ.

ಶಿಕ್ಷಕರೆಂದರೆ ಮಕ್ಕಳಿಗೆ ಬರೀ ಪಾಠ ಮಾಡುವುದಷ್ಟೇ ಅಲ್ಲ. ಸಮಾಜವನ್ನು ತಿದ್ದುವ ಸಮಾಜವನ್ನು ಬದಲಾವಣೆ ಮಾಡುವ ಜವಾಬ್ದಾರಿ ಇರುತ್ತದೆ ಎಂಬುದನ್ನು ಅರಿತು. ಶಾಲಾ ಶಿಕ್ಷಣದಲ್ಲಿ ಬದಲಾವಣೆ ತರಲು. ತಮ್ಮದೇ ಆದ ಸಂಘಟನೆಯ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಮತ್ತು ಕುಕುನೂರು ತಾಲೂಕುಗಳಲ್ಲಿ ಸರ್ಕಾರಿ ಶಾಲೆಗಳ ಬದಲಾವಣೆಗೆ ಕಲಿಕಾ ವಾತಾವರಣ ನಿರ್ಮಾಣ ಮಾಡಲಿಕ್ಕೆ ಶ್ರಮಿಸುತ್ತಿರುವ ವಿಶ್ವ ಬಂದು ಸೇವಾ ಗುರು ಬಳಗ. ಈ ಬಳಗದ ಸೇವೆ ಮಕ್ಕಳ ಕಲಿಕೆಯ ನ್ಯೂನ್ಯತೆಗಳನ್ನು ಹೋಗಲಾಡಿಸಿದೆ. ಮಕ್ಕಳಿಗೆ ಆಕರ್ಷಕ ವಾತಾವರಣವನ್ನ ನಿರ್ಮಾಣ ಮಾಡಿದೆ. ಇಂಥ ಸಂಘಟನೆಗಳು ಹೆಚ್ಚಾದಂತೆ. ಮಕ್ಕಳ ಕಲಿಕೆ ಮಟ್ಟ ಹೆಚ್ಚುತ್ತದೆ. ಸ್ವಸ್ಥ ಸಮಾಜ ನಿರ್ಮಾಣವಾಗಲು ಇಂಥ ಸಂಘಟನೆಗಳು ಬುನಾದಿಯಾಗುತ್ತವೆ. ಈ ಸಂಘಟನೆಗೆ ನಮ್ಮೆಲ್ಲರ ಬೆಂಬಲ ಅತ್ಯಗತ್ಯವಾಗಿದೆ.

  • ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ,
    ಉಪನ್ಯಾಸಕರು, ಲೇಖಕರು.
    9845646370
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!