ಬೀದರ್: ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾನ್ಯ ಪ್ರದೀಪ್ ಗುಂಟಿ, ಐಪಿಎಸ್ ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಲ್ಲಿ ಜನವಾಡಾ ಪೊಲೀಸ್ ಠಾಣೆಯ ಪಿ.ಎಸ್.ಐ. ಬಾಷುಮಿಯಾ ಹಾಗೂ ಸಿಬ್ಬಂದಿ, ತಮ್ಮ ಠಾಣಾ ವ್ಯಾಪ್ತಿಯ ಅಲಿಯಂಬರ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಸ್ತೆ ಸುರಕ್ಷತೆ, ಸಂಚಾರಿ ನಿಯಮ ಪಾಲನೆಯ ಅಗತ್ಯತೆ ಹಾಗೂ ಅಪಘಾತ ತಡೆಗಟ್ಟುವ ಮಾರ್ಗಗಳನ್ನು ವಿವರಿಸಲಾಯಿತು.
ಮಕ್ಕಳಲ್ಲಿ ಬಾಲ್ಯದಿಂದಲೇ ಸಂಚಾರಿ ಶಿಸ್ತಿನ ಅರಿವು ಮೂಡಿಸುವ ಮೂಲಕ ಭವಿಷ್ಯದಲ್ಲಿ ಅಪಘಾತ ಪ್ರಮಾಣ ಇಳಿಸುವ ಗುರಿ ಹೊಂದಿರುವುದು ಪೊಲೀಸರ ಸಂದೇಶವಾಗಿತ್ತು.
ಜಿಲ್ಲೆಯ ಪೊಲೀಸರ ಈ ಪ್ರಯತ್ನವನ್ನು ಎಲ್ಲರೂ ಶ್ಲಾಘಿಸಿದ್ದು, ಪ್ರತಿಯೊಬ್ಬ ನಾಗರಿಕರು ಸಂಚಾರಿ ನಿಯಮ ಪಾಲನೆಗೆ ಕೈಜೋಡಿಸಬೇಕು ಎಂದು ಪ್ರದೀಪ್ ಗುಂಟಿ, ಐ.ಪಿ.ಎಸ್. ಬೀದರ್ ಜಿಲ್ಲಾ ವರಿಷ್ಠಾಧಿಕಾರಿಗಳು ಕೋರಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವು ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಯಿತು.
ಈ ಸಂಧರ್ಭದಲ್ಲಿ ಶಾಲೆಯ ಮಕ್ಕಳು, ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸಂತೋಷ ಪಡಸಲೆ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಸಾಗರ ಪಡಸಲೆ



















