ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಘವು ರೈತರ ಅನುಕೂಲಕ್ಕಾಗಿ ಶ್ರಮಿಸುತ್ತಿದೆ : ಬಿ. ಕಾಸೀಂಸಾಬು

ಬಳ್ಳಾರಿ / ಕಂಪ್ಲಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಸುಮಾರು 26.78.435 ರೂ. ಗಳ ನಿವ್ವಳ ಲಾಭಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಬಿ.ಕಾಸೀಂಸಾಬು ಹೇಳಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಹಕರು ಸಂಘದೊಡನೆ ವ್ಯವಹರಿಸುವ ಮೂಲಕ ಉತ್ತಮ ವ್ಯವಹಾರಿಕ ಬಾಂಧವ್ಯ ಬೆಳೆಸಿಕೊಳ್ಳಬೇಕು, ಸಂಘವು ರೈತರ ಅನುಕೂಲಕ್ಕಾಗಿ ಶ್ರಮಿಸುತ್ತಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಇ.ಜಡೇಶರೆಡ್ಡಿ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ, 3894 ಸದಸ್ಯರನ್ನೊಂದಿದು 124.45 ಲಕ್ಷ ರೂಪಾಯಿಗಳ ಷೇರು ಬಂಡವಾಳ ಹೊಂದಿದೆ. 220.01 ಲಕ್ಷ ರೂಪಾಯಿಗಳ ಠೇವಣಿ ಸಂಗ್ರಹಿಸಿದೆ. 52.22 ಲಕ್ಷ ವ್ಯಾಪಾರ ನಡೆಸಿ, 14.96 ಲಕ್ಷ ರೂಪಾಯಿಗಳ ವ್ಯಾಪಾರಿ ಲಾಭ ಹೊಂದಿದೆ. ಒಟ್ಟಾರೆಯಾಗಿ ಸಂಘವು ಸುಮಾರು 26.78.435 ರೂ.ಗಳ ನಿವ್ವಳ ಲಾಭ ಹೊಂದಿದೆ ಎಂದರು.
ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಡಿಸಿಸಿ ಜಿಲ್ಲಾ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಗ್ರಾ. ಪಂ. ಅಧ್ಯಕ್ಷ ಹೆಚ್.ಜೆ.ಶಾರದಾ, ಸಂಘದ ಉಪಾಧ್ಯಕ್ಷ ಸಿದ್ದಮ್ಮನಹಳ್ಳಿ ಅಲ್ಲಾಸಾಬ್, ನಿರ್ದೇಶಕರಾದ ಬಿ. ಮಹೇಶಗೌಡ, ಎಚ್.ಪಕ್ಕೀರಪ್ಪ, ಕೆ.ಶೇಖರಪ್ಪ, ಎನ್.ಅಮರೇಶ, ಜೀರ್ ಉಮಾಪತಿ, ನೆಲ್ಲುಡಿ ರಾಜಸಾಬ್, ದೇವರಮನೆ ರಂಜಾನ್‌ಸಾಬ್, ಟಿ.ರಾಮು, ತಿಪ್ಪಮ್ಮ, ಕೆ.ಗಂಗಮ್ಮ, ಎ.ಕಿಶೋರಕುಮಾರ, ಕೆ.ಚಂದ್ರಶೇಖರ, ಮುಖಂಡರಾದ ಸದಾಶಿವಪ್ಪ, ವಡ್ರು ವಿರೇಶ ಸೇರಿದಂತೆ ಗ್ರಾಮಸ್ಥರು ಹಾಗೂ ಸಂಘದ ಸಿಬ್ಬಂದಿ ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!