ಗದಗ ತಾಲೂಕ ನರಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಿರೇಕೊಪ್ಪ ಗ್ರಾಮದ ವೀರಯೋಧ ಮಂಜುನಾಥ್ ಮಲ್ಲಪ್ಪ ಗಿಡ್ಮಲ್ಲಣ್ಣವರ ವೀರ ಮರಣ ಹೊಂದಿದ್ದಾರೆ ಪಂಜಾಬ್ ರಾಜ್ಯದ ಜಲಂಧರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ವಿದ್ಯುತ್ ಸ್ಪರ್ಶದಿಂದ ಮರಣ ಹೊಂದಿದ್ದಾರೆ ಇಂದು ಸ್ವಗ್ರಾಮಕ್ಕೆ ಪಾರ್ಥೀವ ಶರೀರವನ್ನು ಜಿಲ್ಲಾ ಆಡಳಿತದ ಮೂಲಕ ಹಿರೇಕೊಪ್ಪ ಗ್ರಾಮಕ್ಕೆ ಯೋಧರ ಸಮ್ಮುಖದಲ್ಲಿ ತರಲಾಯಿತು ಹಿರೇಕೊಪ್ಪ ಪ್ರಾಥಮಿಕ ಶಾಲೆಯಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು ಅಂತಿಮ ದರ್ಶನದಲ್ಲಿ ನರಗುಂದ ಮತಕ್ಷೇತ್ರದ ಮಾಜಿ ಸಚಿವರು ಬಿ. ಆರ್. ಯಾವಗಲ್ಲ ಸಾಹೇಬರು ಅಂತಿಮ ನಮನವನ್ನು ಸಲ್ಲಿಸಿದರು. ಮತ್ತು ಯೋಧನ ಅಂತಿಮ ದರ್ಶನದಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ವರಿಷ್ಠಾಧಿಕಾರಿಗಳು ಲೋಕಸಭಾ ಸದಸ್ಯರಾದ ಪಿ ಸಿ ಗದ್ದಿಗೌಡರ ಮತಕ್ಷೇತ್ರದ ಶಾಸಕರಾದ ಸಿಸಿ ಪಾಟೀಲ್ ಮತ್ತು ಪಂಚ ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷರಾದ ಬಿ.ಬಿ ಅಸೂಟಿ ಹಾಗೂ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಬೋರ್ಚಿ ಹುಯಿಲಗೋಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿಪ್ಪು ನದಾಫ್ ಮತ್ತು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು ಮತ್ತು ಗದಗ ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್ ಬಿ ಗವಾರಿ ಹಾಗೂ ಗ್ರಾಮದ ಯುವಕರು ಹಿರಿಯರು ಸುತ್ತಮುತ್ತಲ ಗ್ರಾಮದ ಜನರು ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು.
ಹುಯಿಲಗೋಳ ಗ್ರಾಮ ಪಂಚಾಯಿತಿ ಆಗಬೇಕು ಸರ್



















