ಬೀದರ್ / ಬಸವಕಲ್ಯಾಣ : ನಗರದ ಶ್ರೀ ಸಿಕಂದರ ಮಹಾಶಕ್ತಿ ಪಾರ್ದಿ ಮೀನುಗಾರರ ಸಹಕಾರ ಸಂಘ (ನಿ.) ಬಸವಕಲ್ಯಾಣದವರು ವಿನಾಕಾರಣ ನಮ್ಮ ಸಂಘದ ವಿರುದ್ಧ ಹಗೆ ಕಾರುತ್ತಿದ್ದಾರೆ. ಮೀಡಿಯಾ ಮುಂದೆ ಬಂದು ನಮ್ಮ ಸಂಘದ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳುತ್ತಿದ್ದಾರೆ, ಇದಲ್ಲದೇ ಶ್ರೀ ಗಣೇಶ ಮೀನುಗಾರಿಕೆ ಸಹಾಯಕ ನಿರ್ದೇಶಕರು ಬಸವಕಲ್ಯಾಣ ರವರಾದ ತಮ್ಮ ಮೇಲೆ ಸಹ ಮೀಡಿಯಾ ಮುಂದೆ ಬಂದು ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದೀರಾ ಅಂತ ಸುಮ್ಮ ಸುಮ್ಮನೆ ಬಾಯಿಗೆ ಬಂದ ಹಾಗೆ ಹೇಳುತ್ತಿದ್ದಾನೆ.
ಮುಂದುವರೆದು ಮೀನುಗಾರಿಕೆ ಇಲಾಖೆಯಿಂದ ಮೊನ್ನೆ ನಡೆದ ಟೆಂಡರ ಕಂ ಹರಾಜು ಪ್ರಕ್ರಿಯೆಯಲ್ಲಿ ಮಹಾಶಕ್ತಿ ಪಾರ್ದಿ ಮೀನುಗಾರರ ಸಹಕಾರ ಸಂಘ (ನಿ.) ಬಸವಕಲ್ಯಾಣ ಸಂಘದ ಅಧ್ಯಕ್ಷರಾದ ಶ್ರೀ ಸಿಕಂದರ ರವರು ಉದೇಶಪೂರ್ವಕವಾಗಿ ತಮಗೆ ಸಂಬಂಧಿಸಿದ ವ್ಯಕ್ತಿಯಿಂದ ರೂ. ತಲಾ 25,00,000/- (ಇಪ್ಪತ್ತೈದು ಲಕ್ಷ) ಬೆಟಬಾಲಕುಂದಾ ಹಾಗೂ ತ್ರಿಪೂರಾಂತ ಕೆರೆಗೆ ಈ ಟೆಂಡರನಲ್ಲಿ ಮೊತ್ತ ನಮೂದಿಸಿರುತ್ತಾರೆ. ಸದರಿ ಮೊತ್ತ ಸರಕಾರಕ್ಕೆ ಜಮಾ ಮಾಡದೇ ಉದ್ದೇಶಪೂರ್ವಕವಾಗಿ ಕೆರೆಯ ಹರಾಜು ರದ್ದು ಪಡಿಸಿರುತ್ತಾರೆ. ಇದಲ್ಲದೇ ಮೀನುಗಾರಿಕೆ ಇಲಾಖೆ ಬಸವಕಲ್ಯಾಣ ವತಿಯಿಂದ ಮುಂದೆ ಜರುಗಬೇಕಿರುವ ಟೆಂಡರ ಕಂ ಹರಾಜು ಪ್ರಕ್ರಿಯೆಯು ಇದೇ ರೀತಿಯಾಗಿ ರದ್ದು ಪಡಿಸುತ್ತಾರೆ. ಇದಲ್ಲದೇ ಕಾನೂನು ಬಾಹಿರವಾಗಿ ಬೈಲಾ ತಿದ್ದುಪಡಿ ಮಾಡಿಕೊಂಡಿರುತ್ತಾರೆ. ಮೀನುಗಾರಿಕೆ ಇಲಾಖೆಯಿಂದ ಸಾಧ್ಯತಾ ವರದಿ ಪಡೆಯಬೇಕಾಗುತ್ತದೆ. ಸಾಧ್ಯತಾ ವರದಿ ಪಡೆಯಬೇಕಾದರೆ ಕೌಶಲ್ಯ ಪರೀಕ್ಷೆ ಮಾಡಬೇಕಾಗುತ್ತದೆ ಇದ್ಯಾವುದು ಮಾಡದೇ ಅದು ಹೇಗೆ ಬೈಲಾ ತಿದ್ದುಪಡಿ ಮಾಡಿರುತ್ತಾರೆ ಎನ್ನುವುದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಸವಕಲ್ಯಾಣ ಮೀನುಗಾರಿಕೆ ಸಹಕಾರ ಸಂಘ ನಿಯಮಿತ (ರಿ.) ಸಂಘದವರು ಬಸವಕಲ್ಯಾಣದ ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ ಪತ್ರದ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ



















