ಕೊಪ್ಪಳ/ಬೆಟಗೇರಿ : ಸರಕಾರಿ ಪ್ರೌಢ ಶಾಲೆ ಬೆಟಗೇರಿ ಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ಯ ಬೆಟಗೇರಿ ಶಿಕ್ಷಕರ ದಿನಾಚರಣೆಯ ಗ್ರಾಮಸ್ಥರು ಶಾಲೆಯ ಎಲ್ಲಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನು ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಉದ್ಘಾಟಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಶಾಲೆಯ ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಬಸವರಾಜ ನಾಗರೆಡ್ಡಿ ಮಾತನಾಡಿ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದ್ದು ಅವರನ್ನು ಸನ್ಮಾನಿಸಿ ಗೌರವ ಸಮರ್ಪಿಸುವುದು ನಮ್ಮ ನಮ್ಮ ಕರ್ತವ್ಯವಾಗಿದೆ ಎಂದರು. ನಂತರ ತಾಲೂಕ ಪಂಚಾಯತ್ ಮಾಜಿ ಸದಸ್ಯರಾದ ವೀರೇಶ್ ಸಜ್ಜನ್ ಮಾತನಾಡಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇಲ್ಲಿರುವ ಎಲ್ಲಾ ಶಿಕ್ಷಕರು ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿದ್ದು ಅವರಿಗೆ ಗೌರವವನ್ನು ಸಲ್ಲಿಸುವುದು ಸಮಾಜದ ಕರ್ತವ್ಯ ವಾಗಿದೆ ಮತ್ತು ಶಿಕ್ಷಕರ ಗೌರವ ಇಮ್ಮಡಿ ಗೊಳ್ಳಬೇಕಾದರೆ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು ಎಂದು ಹೇಳಿದರು. ಶಿಕ್ಷಕರಾದ ಗಿರಿಯಪ್ಪ ಹಾರ್ನಹಳ್ಳಿ ಗುರುವನ್ನು ಗೌರವಿಸಿದರೆ ಗುರಿ ಮುಟ್ಟುತ್ತೇವೆ ಗುರುವನ್ನು ನಿಂದಿಸಿದರೆ ಗುಲಾಮರಾಗುತ್ತೇವೆ ಆ ಕಾರಣಕ್ಕಾಗಿ ನಾವುಗಳು ಗುರುವನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕರಾದ ಪರಶುರಾಮ್ ಸಾಲ್ಮನಿ ವಹಿಸಿ ಈ ಸನ್ಮಾನ ಶಿಕ್ಷಕರ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು. ರಾಜಸಾಹೇಬ್ ಬಳಿಗಾರ್ ಅತಿಥಿಗಳನ್ನು ಸ್ವಾಗತಿಸಿದರು ಪ್ರಕಾಶರೆಡ್ಡಿ ಗೋವಿಂದರಡ್ಡಿ ನಿರೂಪಿಸಿದರು.
ರವಿಕಿರಣ ವಂದಿಸಿದರು. ಶಿಕ್ಷಕರಾದ ಮರ್ದಾನಲಿ ಗಡಾದ , ಸುನಿತಾ ಯಾಳಗಿ, ಸೋಮಣ್ಣ, ಪರಶುರಾಮ , ಸೋಮಶೇಖರಯ್ಯ ಊರಿನ ಪ್ರಮುಖರಾದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದುರಗಪ್ಪ ಬಜೆತ್ರಿ ಸದಸ್ಯರಾದ ನವೀನ್ ಮಾಧಿನೂರ ನಾಗರಾಜ ಪಾತ್ರದ ಹಾಗೂ ಶಂಕ್ರಪ್ಪ ಬಡಿಗೇರ್ ಮಲ್ಲಪ್ಪ ಚಿoಚಲಿ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















