ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ನಿವಾಸಿಯಾದ ಶ್ರೀ ಮಲ್ಲಿಕಾರ್ಜುನ ಶಿವಪ್ಪ ಲಚ್ಯಾಣ ಇವರ ಮನೆಯು ಭಾಗಶಃ ಅರ್ಧ ಭಾಗ ಬಿದ್ದಿದ್ದು, ಆಹಾರ ಪದಾರ್ಥಗಳು ಮಣ್ಣು ಪಾಲಾಗಿವೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಾನಿಕ ಚೌಕಾಸಿ ಮಾಡಿ, ಗ್ರಾಮಕ್ಕೆ ಭೇಟಿ ನೀಡಿ ಆ ಮನೆಯ ಪರಿಸ್ಥಿತಿಯನ್ನು ಪರಿಶೀಲಿಸಿ ಸಂಬಂಧಪಟ್ಟ ಆ ಬಡಪಾಯಿಗೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡುತ್ತಾರೆಯೇ? ಎಂದು ಕಾದು ನೋಡಬೇಕಾಗಿದೆ.
- ಕರುನಾಡ ಕಂದ



















