ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಮಾಜಿಕ ಸಮೀಕ್ಷೆಯಲ್ಲಿ ಬೆಸ್ತರ ಸಮುದಾಯ ಎಂದು ನಮೂದಿಸಿ : ಮಣ್ಣೂರು ನಾಗರಾಜ

ಬಳ್ಳಾರಿ / ಕಂಪ್ಲಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಮನೆ ಮನೆ ಸಮೀಕ್ಷೆಯು ಸೆ.22ರಿಂದ ಅಕ್ಟೋಬರ್ 7ರತನ ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಈ ಸಮೀಕ್ಷೆಯ ಕ್ರಮ ಸಂಖ್ಯೆ 9 ರಲ್ಲಿ ಬೆಸ್ತರ್, ಕ್ರಮ ಸಂಖ್ಯೆ 10ರಲ್ಲಿ ಶಾಲಾ ದಾಖಲೆಯಲ್ಲಿ ಇರುವಂತೆ ಬರೆಸಿ, ಕ್ರಮ ಸಂಖ್ಯೆ 11ರಲ್ಲಿ ಬೆಸ್ತರ್ ಜಾತಿ ಕಾಲಂನಲ್ಲಿ ಹಿಂದೂ ಬೆಸ್ತರ್ ಎಂದು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಗಂಗಾಮತ ಸಮಾಜದ ನಿಕಟ ಪೂರ್ವ ರಾಜ್ಯ ಉಪಾಧ್ಯಕ್ಷ ಮಣ್ಣೂರು ನಾಗರಾಜ ತಿಳಿಸಿದರು.
ಅವರು ಭಾನುವಾರ ಪಟ್ಟಣದಲ್ಲಿ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ರಾಜ್ಯದ 22 ಜಿಲ್ಲೆಯಲ್ಲಿ ಈಗಾಗಲೇ ಬೆಸ್ತರ್ ಇದ್ದು, ಕರ್ನಾಟಕದಲ್ಲಿ ಗಂಗಾಮತ ಸಮುದಾಯವು ವೃತ್ತಿಯಿಂದಲೇ ಬೆಸ್ತರ್ ಎನಿಸಿಕೊಂಡಿದ್ದೇವೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದುಕೊಳ್ಳುವ ಸಮೀಕ್ಷೆ ವೇಳೆಯಲ್ಲಿ ನೈಜ ಜಾತಿಯನ್ನು ಪ್ರತಿಯೊಬ್ಬರು ನಮೂದಿಸಬೇಕು. ಜಾತಿ ಕಾಲಂನಲ್ಲಿ ಬೆಸ್ತರ್ ಎಂದು ಬರೆಸಿ ನಿಮ್ಮ ಮೋಬೈಲ್ ಸಂಖ್ಯೆಯನ್ನು ಅಧಾರ ಕಾರ್ಡಿಗೆ ಕಡ್ಡಾಯವಾಗಿ ನಮೂದಿಸಿ, ಗಂಗಾಮತ ಸಮುದಾಯದಲ್ಲಿರುವ ಕುಲ ಕಸುಬು ಕಾಲಂನಲ್ಲಿ ಕಬ್ಬೇರ್, ಅಂಬಿಗಾ, ಬಾರೀಕಾ, ಸುಣಗಾರ, ಗಂಗಾಮತ ಇನ್ನೂ ಮುಂತಾದ ಎಂಬ ಉಪನಾಮಗಳಿಂದ ಕರೆಯಲ್ಪಡುತ್ತವೆ. ಆದ್ದರಿಂದ ಜಾತಿ ಗಣತಿಯಲ್ಲಿ ಬೆಸ್ತರ್ ಎಂಬು ಬರೆಸಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗಂಗಾಮತ ಸಮಾಜದ ನಿಕಟ ಪೂರ್ವ ರಾಜ್ಯ ಕಾರ್ಯದರ್ಶಿ ಕೆ.ಮನೋಹರ, ಕಂಪ್ಲಿ ತಾಲೂಕು ಅಧ್ಯಕ್ಷ ಎಲೆಗಾರ ನಾಗರಾಜ, ಮುಖಂಡರಾದ ಬಿ.ಸಿದ್ದಪ, ಬಿ.ಈರಪ್ಪ, ಅಯ್ಯೋದಿ ವೆಂಕಟೇಶ, ಕಟ್ಟೆ ದುರುಗಪ್ಪ, ಪತ್ತಾರ್ ವೀರಭದ್ರಪ್ಪ, ಕಟ್ಟೆ ವೆಂಕಟೇಶ, ಜೋಳಮಾರೋ ಈರಣ್ಣ, ಎ.ರಂಗಪ್ಪ, ಎಸ್‌ಸುರೇಶ, ಕೆ.ಪ್ರಕಾಶ, ಜಿ.ಯಲ್ಲಪ್ಪ, ಮಣ್ಣೂರು ಶಿವಪ್ಪ, ಮೆಟ್ರಿ ಗಿರೀಶ, ಬೆಳಗೋಡ ಲೋಕರಾಜ, ಎಮ್ಮಿಗನೂರು ಈರಣ,್ಣ ರಾಮಾಂಜಿನಿ, ಬೋವಿ ಮಂಜು, ನಂ.2 ಮುದ್ದಾಪುರ ರಾಜಶೇಖರ, ಜಂಗನಾಗರಾಜ, ಕೆ.ಬಸವರಾಜ ಸೇರಿ ಅನೇಕರಿದ್ದರು

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!