ಕಲಬುರಗಿ : ವರ್ಥ್ಲಿ ವೆಲ್ ನೆಸ್ ಫೌಂಡೇಷನ್ ಟ್ರಸ್ಟ್ ವೇದಿಕೆಯ ಸಮಾಜದ ಸೇವಕರಿಗೆ ಗುರುತಿಸಿ ಅವರಿಗೆ ಪಿ.ಎಮ್ ಮೋದಿ ವಿಷನ್ ಆಫ್ ಭಾರತ ಅವಾರ್ಡ್ 2025 ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ ದುಂಬಾಲು ಬಿದ್ದು, ಅರ್ಜಿ ಹಾಕಿ, ಶಿಫಾರಸ್ಸು ಮಾಡಿಸಿ, ಹಣ ಕೊಟ್ಟು ಪಡೆದ ಪ್ರಶಸ್ತಿಗಳು ನಮ್ಮನ್ನು ಅಣಕಿಸುತ್ತವೆ. ಆದರೆ, ಸಾಧನೆಯಿಂದ ಪಡೆದ ಪ್ರಶಸ್ತಿಗಳು ಸದಾಕಾಲ ನಮ್ಮನ್ನು ಗೌರವಿಸುತ್ತವೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಮತ್ತು ಸಮಾಜದ ಸೇವಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್. ಹೇಳಿದರು.
ಉತ್ತರ ಪ್ರದೇಶದ ಲಕ್ನೊ ನಗರದಲ್ಲಿ ಬುಧವಾರ ದಿನದಂದು ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀಯವರ 75ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತವಾಗಿ ಬೆಳಿಗ್ಗೆ ವರ್ಥ್ಲಿ ವೆಲ್ಲನ್ನೆಸ್ ಫೌಂಡೇಷನ್ ಟ್ರಸ್ಟ್ ವೇದಿಕೆಯ ವತಿಯಿಂದ ಭಾರತ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಯವರ 75 ನೇ ವರ್ಷದ ಹುಟ್ಟು ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಅತ್ಯುತ್ತಮ ಸಮಾಜದ ಸೇವಕರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮನೀಶ ಭಾಜಪೇಯಿ ಅವರು ಮಾತನಾಡಿದರು. ಈ ಸಮಾಜದ ಸೇವೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಪ್ಪತ್ತಕ್ಕೂ ಹೆಚ್ಚು ಜನ ಸಮಾಜದ ಸೇವಕರಿಗೆ ಪ್ರಶಸ್ತಿ ಪಡೆಯಲು ಯಾವುದೇ ಅರ್ಜಿ ಹಾಕಿಲ್ಲ, ಯಾರಿಂದಲೂ ಶಿಫಾರಸ್ಸು ಮಾಡಿಸಿಲ್ಲ, ದೇಶ ಸೇವೆ, ಕನ್ನಡ ನೆಲ, ಜಲ, ಭಾಷೆಯ ರಕ್ಷಣೆಗಾಗಿ ದುಡಿಯುತ್ತಿರುವ ಕನ್ನಡ ಕುವರರಿಗೆ ಈ ವರ್ಥ್ಲಿ ವೆಲ್ಲನ್ನೆಸ್ ಫೌಂಡೇಷನ್ ಟ್ರಸ್ಟ್ ವೇದಿಕೆಯು ಈ ಉತ್ತಮ ಸಮಾಜದ ಸೇವಕರಿಗೆ ಗುರುತಿಸಿ ಅವರಿಗೆ ಪಿ.ಎಮ್ ಮೋದಿ ವಿಷನ್ ಆಫ್ ಭಾರತ ಅವಾರ್ಡ್ 2025 ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ವಿವಿಧ ಕ್ಷೇತ್ರದ ಸಾಧಕರಿಗೆ ಮತ್ತು ಸಮಾಜದ ಗುಣಮಟ್ಟ ಅಥವಾ ಅವರ ಸಾಧನೆಯನ್ನು ಗುರುತಿಸಲು ಯಾವುದೇ ಪರೀಕ್ಷೆಗಳು ನಡೆಸಬೇಕಿಲ್ಲ, ಕೇವಲ ಅವರ ಸೇವೆಗಳನ್ನು ನೋಡಿದರೆ ಸಾಕು ಈ ರೀತಿಯ ಸಮಾಜದ ಸೇವಕರ ಸಾಧನಗಳು ಅವರ ಗುಣಮಟ್ಟ ಸೇವೆ ತಿಳಿಯುತ್ತದೆ ಎಂದು ವಿವರಣೆ ನೀಡಿದರು.
ಅನೇಕ ಸಂಘ ಸಂಸ್ಥೆಗಳು, ಟ್ರಸ್ಟ್ ಗಳಿಂದ 30 ಕ್ಕೂ ಹೆಚ್ಚು ತಾಲೂಕು ಹಾಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿರುವ ಅಪ್ಪಣ್ಣ ಸಮಾಜದ ಸೇವಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಈ ಸಮಾಜದ ಸೇವಕನಿಗೆ ಅನೇಕ ಸಮಾಜದ ಮುಖಂಡರು ಸಹಕಾರದಿಂದ ಈ ಸೇವೆ ಮಾಡಲು ಸಹಕಾರಿಯಾಗಿದೆ ಅವರೆಲ್ಲರಿಗೂ ಅನಂತ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
- ಕರುನಾಡ ಕಂದ



















