ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗೌಡ್ರು ಲಿಂಗನಗೌಡ ಇವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಇಲ್ಲಿನ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಜಿ.ಲಿಂಗನಗೌಡ ಮಾತನಾಡಿ, ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರ, ಸ್ಥಳೀಯ ಮುಖಂಡರ, ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಸೊಸೈಟಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು, ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ರೈತ ಬಾಂಧವರಿಗೆ ತಲುಪಿಸಲಾಗುವುದು ಮುಂದಿನ ದಿನದಲ್ಲಿ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು. ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ತದನಂತರ ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಜಿ.ಲಿಂಗನಗೌಡಗೆ ಮಾಲಾರ್ಪಣೆಯೊಂದಿಗೆ ಗೌರವಿಸುವ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗೌಡ್ರು ಕೆ.ಸಿದ್ದಪ್ಪ, ಉಪಾಧ್ಯಕ್ಷೆ ಗುಬಾಜಿ ಶಿಲ್ಪಮ್ಮ ರಾಮಾಂಜಿನಿ, ನಿರ್ದೇಶಕರಾದ ಎಸ್. ಹನುಮಂತಪ್ಪ, ಗೊರವರ ಹನುಮಂತಪ್ಪ, ಗೌಡ್ರು ಷಣ್ಮುಖಪ್ಪ, ಗೌಡ್ರು ಮಲ್ಲಿಕಾರ್ಜುನ, ಕಾರಿಗನೂರು ಹನುಮಂತಪ್ಪ, ಕೆ.ಮಹಾದೇವಪ್ಪ, ವಿ.ಮುಕ್ಕಣ್ಣ, ಪೂಜಾರಿ ರಮೇಶ, ಗೌಡ್ರು ಮಲ್ಲಮ್ಮ, ಕುರಿ ವಿಶ್ವನಾಥ, ದೇವರಮನೆ ಗಂಗಾಧರ, ಸಿಬ್ಬಂದಿಗಳಾದ ಕೊಮಾರೆಪ್ಪ ಕೆ, ಎಸ್.ಮನೋಜ್, ಹೆಚ್.ಮಾರೇಶ, ಪಿ.ಕಾಸೀಂಸಾಬ್ ಸೇರಿದಂತೆ ರೈತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















