ಶಿವಮೊಗ್ಗ : ನಗರದಲ್ಲಿ ಇತ್ತಿಚೆಗೆ ನೆಡೆದ ಎರಡು ಧರ್ಮಗಳ ಹಬ್ಬಗಳು ಮತ್ತು ಮೆರವಣಿಗೆ ಗಳು ಶಾಂತಿ ಮತ್ತು ಸೌಹಾರ್ದ ವಾಗಿ ನಡೆದವು. ಪೋಲೀಸ್ ಇಲಾಖೆಗೂ ಇದು ಸವಾಲಾಗಿತ್ತು. ಆದರೆ ನಮ್ಮ ಹೆಮ್ಮೆಯ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಮಿಥುನ್ ಕುಮಾರ್ ಅವರು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಯಶ್ವಸಿಯಾಗಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆ ಹರ್ಷ ವ್ಯಕ್ತ ಪಡಿಸಿದೆ.
ಈ ಸುಸಂಧರ್ಭದಲ್ಲಿ ಶ್ರೀ ಮಿಥುನ್ ಕುಮಾರ್ ಮತ್ತು ಅವರ ಇಡೀ ಪೋಲಿಸ್ ತಂಡಕ್ಕೆ ಶಿವಮೊಗ್ಗ ಜಿಲ್ಲಾ ಜಯಕರ್ನಾಟಕ ಸಂಘಟನೆಯ ಮಹಿಳಾ ಘಟಕ ದ ವತಿಯಿಂದ ಇಂದು ಸಂಘಟನೆ ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ಶ್ರೀಮತಿ ನಾಜೀಮಾ ಅವರ ನೇತೃತ್ವದಲ್ಲಿ, ಸದ್ಯಸರು ಭೇಟಿಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಶ್ರೀಮತಿ ರೇಖಾ, ಸಮೀನಾ ಕೌಸರ್, ಮಂಜುಳಾ,ಜಯಂತಿ, ಪುಷ್ಪ,ಲಕ್ಷೀ, ಆಶಾ, ಪ್ರತಿಭಾ, ಕೌಸರ್, ಜಫರುಲ್ಲಾ, ಮುಂತಾದವರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು.



















