ಬಳ್ಳಾರಿ / ಕಂಪ್ಲಿ : ಹೌದು ಸದಾ ಜನರ ಅಭಿವೃದ್ಧಿ, ಜನರ ಒಡನಾಟ ಹೊಂದಿರುವ ಕಂಪ್ಲಿ ಶಾಸಕ ಜೆ. ಎನ್. ಗಣೇಶ ಕಂಪ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ದಿವ್ಯ ನಿರ್ಲಕ್ಷ್ಯಕ್ಕೆ ಬಾಣಂತಿ ಮತ್ತು ಮಗು ಸಾವನಪ್ಪಿದ್ದ ದಾರುಣ ಘಟನೆಯಿಂದ ಆಕ್ರೋಶಗೊಂಡ ಶಾಸಕ ಜೆ. ಎನ್. ಗಣೇಶ ರವರು ರಾಮಸಾಗರ ಗ್ರಾಮದಲ್ಲಿರುವ ಮೃತರ ಮನೆಗೆ ಶುಕ್ರವಾರ ಭೇಟಿ ನೀಡಿ ಸಂತಾಪ ಸೂಚಿಸಿದ್ದಲ್ಲದೆ ಕುಟುಂಬಸ್ಥರಿಗೆ ಧೈರ್ಯ ತುಂಬಿ ಘಟನೆಯ ವಿವರವನ್ನು ತಿಳಿದುಕೊಂಡು ನಿರ್ಲಕ್ಷ್ಯ ವಹಿಸಿದ ವೈದ್ಯ ಹಾಗೂ ನರ್ಸ್ಗಳ ವಿರುದ್ಧ ಜಿಲ್ಲಾಡಳಿತದೊಂದಿಗೆ ಮಾತಾಡಿ ಅವರ ವರ್ಗಾವಣೆಗೆ ಶಿಫಾರಸ್ಸು ಮಾಡಿದರು. ಹಾಗಾಗಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ವೈದ್ಯರ ವರ್ಗಾವಣೆ ಆಗಿದೆ.
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾಕ್ಟರ್ ರವೀಂದ್ರ ಕನಿಕೇರಿ ಅವರಿಗೆ ಸಂಡೂರು ತಾಲೂಕಿನ ಸಮುದಾಯದ ಅರೋಗ್ಯ ಕೇಂದ್ರಕ್ಕೆ ವರ್ಗಾವಣೆ ಆಗಿದೆ.
ನರ್ಸ್ ರಂಜನಿ ಇವರಿಗೆ ಸಿರುಗುಪ್ಪ ತಾಲೂಕಿನ ಸಮುದಾಯದ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಯಾಗಿದೆ.
ವರ್ಗಾವಣೆಗೊಂಡ ಈರ್ವರೂ ತಮ್ಮ ಆರೋಗ್ಯ ಸೇವಾ ಅವಧಿಯಲ್ಲಿ ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕಾದದ್ದು ಅವರ ಕರ್ತವ್ಯವಾಗಿದೆ.
ಇನ್ನು ಮುಂದಾದರೂ ಈ ರೀತಿಯ ನಿರ್ಲಕ್ಷ್ಯ ವಹಿಸದೆ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುವಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮುಂದಾಗಬೇಕೆಂಬುದು ಇಲ್ಲಿನ ಸಾರ್ವಜನಿಕರ ಅಭಿಪ್ರಾಯ.
ಮುಂದಿನ ದಿನಗಳಲ್ಲಿ ಕಂಪ್ಲಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಉತ್ತಮ ವೈದ್ಯರ ಸೇವೆ ಸಿಗಲಿ ಎಂಬುದು ಕರುನಾಡ ಕಂದ ಪತ್ರಿಕೆಯ ಆಶಯ.
ವರದಿ : ಜಿಲಾನಸಾಬ್ ಬಡಿಗೇರ್



















