ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅದ್ದೂರಿಯಾಗಿ ದುರ್ಗಾ ಮಾತಾ ದೌಡ ಆಚರಣೆ

ಬೆಳಗಾವಿ/ ಬೈಲಹೊಂಗಲ :ಜಗಜ್ಯೋತಿ ಪವಾಡ ಬಸವೇಶ್ವರ ದೇವಸ್ಥಾನದ ಇಂಚಲ ಸಮಸ್ತ ಹಿಂದೂ ಬಾಂಧವರಿಂದ ಅದ್ದೂರಿಯಾಗಿ ದುರ್ಗಾ ಮಾತಾ ದೌಡ ಆಚರಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಭಜರಂಗದಳದ ವತಿಯಿಂದ ಇಂಚಲ ಗ್ರಾಮದಲ್ಲಿ ದುರ್ಗಾ ಮಾತಾ ದೌಡ ಪ್ರಾರಂಭವಾಗಿದೆ.
ದುರ್ಗಾ ಮಾತಾ ದೌಡ ಎಂದರೆ ನವರಾತ್ರಿ ಹಾಗೂ ದುರ್ಗಾ ಹಬ್ಬದ ಸಂದರ್ಭದಲ್ಲಿ ಆಯೋಜಿಸುವ ಧಾರ್ಮಿಕ ಸಾಂಸ್ಕೃತಿಕ ದೌಡ ಅಥವಾ ಓಟ ಇದು ವಿಶೇಷವಾಗಿ ಯುವಕರಲ್ಲಿ ಭಕ್ತಿ ,ಶಕ್ತಿ ಮತ್ತು ಶಿಸ್ತಿನ ಪ್ರತೀಕವಾಗಿ ನಡೆಯುತ್ತದೆ. ದೌಡ ಎಂಬ ಪದವು ಹಿಂದಿ ಮತ್ತು ಮರಾಠಿ ಭಾಷೆಯದ್ದಾಗಿದ್ದು ಕನ್ನಡದಲ್ಲಿ ಓಟ ಅಥವಾ ಓಡುವುದು ಎಂಬುದಾಗಿದೆ ಅಂದರೆ ನವರಾತ್ರಿ ದಿನಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಬೇಗನೆ ಎದ್ದು ದುರ್ಗಾ ಮಾತೆಯನ್ನು ಪ್ರಾರ್ಥಿಸಿಕೊಂಡು ಶುಭ್ರ ಬಿಳಿ ಬಟ್ಟೆ ಧರಿಸಿ ಕೇಸರಿ ಶಾಲು ಹಾಗೂ ಪೇಟಾ ಧರಿಸಿ ಹಣೆಗೆ ಕೇಸರಿ ತಿಲಕ್ ಧರಿಸಿ ದೇವಿಯ ಭಾವಚಿತ್ರ ಹಾಗೂ ಅಗ್ನಿ ಜ್ಯೋತಿ ಮತ್ತು ಕೇಸರಿ ಧ್ವಜ ಸ್ತಂಭ ಹಿಡಿದುಕೊಂಡು ಮೊಟ್ಟ ಮೊದಲ ಸ್ಥಳ ಪೂಜೆ ಮಾಡಿಕೊಂಡು ಅಲ್ಲಿಂದ ಹೊರತು ಗ್ರಾಮದ ಬೀದಿಗಳಲ್ಲಿ ಸಂಚರಿಸಿ ದೇವಿಯ ಗುಡಿಗೆ ಹೋಗಿ ದರ್ಶನ್ ಪಡೆಯಬೇಕು ಇದು ಹಿಂದಿನಿಂದಲೂ ನವರಾತ್ರಿ ವೇಳೆಯಲ್ಲಿ ಬೆಳಗಿನ ಜಾವ ದುರ್ಗಾ ಮಾತೆಯ ಘೋಷಣೆಗಳನ್ನು ಕೂಗುತ್ತಾ ಹಳ್ಳಿಯ ಬೀದಿಗಳಲ್ಲಿ ಓಡುವ ಸಂಪ್ರದಾಯ ಇತ್ತು ಅದೇ ನಂತರ ಸಂಘಟಿತ ದುರ್ಗಾ ಮಾತಾ ದೌಡ ಆಗಿ ಬೆಳೆಯಿತು..ಇದರಂತೆ ಪವಾಡ ಪುರುಷರ ನಾಡು ಎಂದೇ ಪ್ರಖ್ಯಾತ ಪಡೆದ ನಮ್ಮ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ಶ್ರೀ ಶಿವಯೋಗಿ ರೇವಯ್ಯ ಗುರು ಸಿದ್ದರಾಮ ಶಿವಯೋಗಿಗಳ ಕಮಲ ಸಂಜಾತರಾದ ಶ್ರೀ ಶಿವಾನಂದ ಭಾರತಿ ಅಪ್ಪಾಜಿ ಆಶೀರ್ವಾದ ಪಡೆದು ಅವರ ಕೃಪೆಯಿಂದ ಇಂಚಲ ಗ್ರಾಮದಲ್ಲಿ ಈ ವರ್ಷ ಬಹಳ ಅದ್ಧೂರಿಯಾಗಿ ಜಗಜ್ಯೋತಿ ಪವಾಡ ಬಸವೇಶ್ವರ ದೇವಸ್ಥಾನದಿಂದ ಸಮಸ್ತ ಇಂಚಲ ಗ್ರಾಮದ ಹಿಂದೂ ಭಾಂದವರೆಲ್ಲಾ ಈ ದುರ್ಗಾ ಮಾತಾ ದೌಡ ಪ್ರಾರಂಭ ಮಾಡಿದ್ದಾರೆ ಇದು ದಿನೇ ದಿನೇ ಯುವಕರಲ್ಲಿ ಭಕ್ತಿ ಶಕ್ತಿ, ಆಸಕ್ತಿ ಮೂಡಿಸುತ್ತಾ ಇಂಚಲ ಗ್ರಾಮದಲ್ಲಿ ಅಪ್ಪಾಜಿ ಆಶೀರ್ವಾದದಿಂದ ದಿನಾ ಯಶಸ್ವಿಯಾಗಿ ನಡಿಯುತ್ತಿದೆ ಎಂದು ಹೇಳುವೆಇಂಚಲ ಗ್ರಾಮದ ಬೀದಿಗಳಲ್ಲಿ ಸಂಚರಿಸುತ್ತಾ ಜೈ ಬಸವ ಜೈ ಶಿವಾಜಿ ಜೈ ಶಾಂಭವಿ ಜೈ ಶ್ರೀರಾಮ್ ಭಲೋ ಭಾರತ ಮಾತಾಕಿ ಜೈ ಹಾಗೂ ಶ್ರೀ ಹನ್ನೆರಡನೇ ಶತಮಾನದಲ್ಲಿ ಇದ್ದ ಅವರಿವರೆನ್ನದೇ ಎಲ್ಲಾ ಕಾಯಕ ಶರಣರ ನಾಮಾವಳಿಗಳನ್ನು ಜೈಕಾರ ಹಾಕುತ್ತಾ ಈ ದುರ್ಗಾ ಮಾತಾ ದೌಡ ಪಥ ಸಂಚಲನವನ್ನು ನಮ್ಮ ಇಂಚಲ ಗ್ರಾಮದಲ್ಲಿ ಪ್ರಾರಂಭಿಸಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತೆ ಅದೇನ್ ಗಾಂಭೀರ್ಯ ಅದೇನ್ ಶಿಸ್ತು ಅದೇನ್ ಜೈಕಾರ ನಿಂತು ನೋಡಲೆರಡು ಕಣ್ಣುಗಳು ಸಾಲದು ಅವರಿವನೆದ್ದದೇ ಸ್ವ ಇಚ್ಛೆಯಿಂದ ಎಲ್ಲರೂ ಬನ್ನಿ ಪ್ರೋತ್ಸಾಹಿಸಿ ಪಾಲ್ಗೊಳ್ಳಿ ಎಂದು ಹೇಳುತ್ತೆವೆ. ಮುಂಬರುವ ದಿನಗಳಲ್ಲಿ ಇದನ್ನು ದೊಡ್ಡ ಮಟ್ಟದಲ್ಲಿ ಬೆಳೆಸೋಣ ಎಂದು ಹಿಂದೂ ಸಂಘದ ಕಾರ್ಯಕರ್ತರು ಎಲ್ಲರೂ ಭಾಗಿಯಾಗಿ ವಿಜೃಂಭಣೆಯಿಂದ ಆಚರಿಸೋಣ ಎಂದು ಮಾತನಾಡಿದರು.

ವರದಿ ಉಮೇಶ ಗೌಡರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!