ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೈತರ ಸಮಸ್ಯೆ ಕುರಿತು ಸದನದಲ್ಲಿ ಮಾತನಾಡದ ಶಾಸಕ ಎಂದು ದೂರಿದ ರೈತರ ಮುಖಂಡ ವೀರಣ್ಣ ಗಂಗಾಣಿ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರೈತ ಸಂಘಟನೆಗಳು ಕೊಡ್ಲಿ ಸರ್ಕಲ್ ತಡೆದು ಹೋರಾಟ ಮಾಡಲಾಗಿದೆ. ಸದನದಲ್ಲಿ ಮಾತನಾಡದ ಶಾಸಕ ರೈತರ ಹೋರಾಟದಲ್ಲಿ ಮಾತನಾಡಿದ ಎಂದು ದೂರಿದ ರೈತ ಮುಖಂಡ ಚಿಂಚೋಳಿ ಮತ್ತು ಕಾಳಗಿ ತಾಲೂಕು ಅತಿ ಹಿಂದುಳಿದ ಪ್ರದೇಶವಾಗಿದೆ ರೈತರು ತಮ್ಮ ಒಕ್ಕಲುತನ ಮೇಲೆ ನಂಬಿ ಕುಳಿತ ಅನ್ನದಾತರ ಹಣದ ಮಾಲು ತೊಗರಿ, ಹೆಸರು, ಉದ್ದು, ಸೋಯಾ ಬಿನ್, ಇತರೆ ತರಕಾರಿ ಬೆಳೆಗಳು ಸಿಕ್ಕಾಪಟ್ಟೆ ಲಾಗೊಡಿ ಮಾಡಿ, ಸದಿ, ಎಡಿ, ಔಷಧಿ, ಸಾಲಾ ಮಾಡಿ ಬೆಳೆದು ರೈತರ ಮಾಲು ನೀರು ಪಾಲಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರು ಬದುಕು ಬಿದಿಗೆ ಬಂದಿದೆ ಒಕ್ಕಲುತನ ಉಳಿಗಾಲವಿಲ್ಲದಂತಾಗಿದೆ. ರೈತರಿಗೆ ದಿಕ್ಕು ತೊಚದಂತಾಗಿದೆ ಹೀಗಾಗಿ ರೈತ ಕಂಗಾಲಾಗುವಂತೆ ಮಾಡಿದೆ ಸಾಲದ ಭಾದೆ ತಾಳಲಾರದೆ ಸರಣಿ ರೈತರ ಆತ್ಮಹತ್ಯೆಯ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿವೆ ಅತಿವೃಷ್ಟಿ ಮಳೆಯಿಂದ ಹಾನಿಯಾದ ಬೆಳೆಗಳು ಸಮೀಕ್ಷೆ ನಡೆಸಿ ತಕ್ಷಣವೇ ಪರಿಹಾರ ಕೊಡಬೇಕು ಮತ್ತು ಹಿಂದಿನ ವರ್ಷ ಮತ್ತು ಈ ವರ್ಷದ ಬೆಳೆ ವಿಮೆ ಎಲ್ಲಾ ರೈತರ ಖಾತೆಗೆ ಹಾಕಬೇಕೆಂದು ರೈತ ಸಂಘಜಿಲ್ಲಾ ಅಧ್ಯಕ್ಷರು ಶರಣಬಸಪ್ಪ ಶೆಟ್ಟಿ ಒತ್ತಾಯ ಮಾಡಲಾಗಿದೆ.

• ಧಾರಾಕಾರವಾಗಿ ಸುರಿದ ಮಳೆಯಿಂದ ಗೊಟುರು ಕಣಸುರು ಮತ್ತು ಹೆಬ್ಬಾಳ ಗ್ರಾಮಗಳಲ್ಲಿ ಮಳೆ ನೀರು ನುಗ್ಗಿ ಮನೆಗಳಲ್ಲಿದ್ದ ದವಸ ಧಾನ್ಯಗಳು ಬೆಳೆ ಕಾಳುಗಳು ದಿನಸಿ ಪದಾರ್ಥಗಳು ಬಟ್ಟೆ ಗಳು‌ ಎಲ್ಲವೂ ಹಾಳಾಗಿ ಹೋಗಿವೆ. ಸುಮಾರು ಹಳ್ಳಿಯ ಗ್ರಾಮಸ್ಥರು ಜನರ ಬದುಕು ಅಧೋ ಗತಿಯಾಗಿದೆ ಇಲ್ಲಿ ಯಾರು ಹೇಳೋರು ಕೇಳೋರು ಇಲ್ಲದಂತಾಗಿದೆ ತಕ್ಷಣವೇ ಹದಗೆಟ್ಟ ರಸ್ತೆ ದುರಸ್ತಿ, ಕಾಲುವೆ ತುಂಬಿದ್ದು ಹುಳು ತೆಗೆಸಿ ಬೀಚಿಂಗ್ ಪೌಡರ್ ಮತ್ತು ಫ್ಯಾಗಿಂಗ್ ಮಾಡಿಸಬೇಕು. ಗ್ರಾಮದ ಜನರಿಗೆ ಮನೆಗಳ ಬಿದ್ದವರಿಗೆ ಮನೆ ನಿವೇಶನ ಮಂಜೂರು ಮಾಡಿ ಮತ್ತು ನಷ್ಟಕ್ಕೊಳಗಾದವರಿಗೆ ಸೂಕ್ತ ನೆರವು ಪರಿಹಾರ ಕೊಡಬೇಕು. ಹುಲುಸುಗುಡ ಫೂಲ್ ಹತ್ತಿರ ಹದಗೆಟ್ಟ ರಸ್ತೆ ದುರಸ್ತಿ ಮಾಡಬೇಕು.
ಹಿಂಗಾರು ಬಿತ್ತನೆಗಾಗಿ ರೈತರು ಹೊಲದಲ್ಲಿ ಹುಲ್ಲು ಬೆಳೆದು ಹೊಲಗಳ ಬಿಳು ಬಿದ್ದು ಹೋಗಿವೆ. ಹಿಂಗಾರು ಬಿತ್ತನೆ ಮಾಡಲು ಹೊಲ ಸ್ವಚ್ಚತಾ ಮಾಡಲು, ಬೀಜ ರಸಗೊಬ್ಬರ ಖರೀದಿ ಮಾಡಲು ರೈತರ ಹತ್ತಿರ ಹಣ ಇಲ್ಲದಂತಾಗಿ ರೈತರು ಕಂಗಾಲಾಗಿದ್ದಾರೆ. ಹಿಂಗಾರು ಬಿತ್ತನೆಗೆ ದಿನಗಳು ಕೂಡಾ ಇಲ್ಲದಂತಾಗಿ ರೈತರಿಗೆ ಉಳಿಗಾಲವಿಲ್ಲದಂತಾಗಿದೆ. ರೈತರು ಬೇಸತ್ತು ಬದುಕಲು ಊರು ಬಿಟ್ಟು ಬೇರೆ ಊರಿಗೆ ಹೋಗುವ ಭೀತಿ ನಿರ್ಮಾಣವಾಗಿದೆ. ಹೀಗಾಗಿ ಹಿಂಗಾರು ಬಿತ್ತನೆಗಾಗಿ ಕಡಲೆ ಬೀಜ, ಜೋಳದ ಬೀಜ, ಶೇಂಗದ ಬೀಜ, ಕುಸುಬೆ ಬೀಜ, ಸೂರ್ಯಕಾಂತಿ ಬೀಜ, ರಸಗೊಬ್ಬರ, ಸ್ಪಿಂಕ್ಲರ್ ಪೈಪ್, ಬೀಜ ಉಚಿತವಾಗಿ ಕೊಡಬೇಕು.
ರೈತರ ಸಾಲ ಮನ್ನಾ ಮಾಡಬೇಕು. ಸಾಲದ ಭಾದೆ ತಾಳಲಾರದೆ ರೈತರ ಆತ್ಮಹತ್ಯೆಯ ಪ್ರಕರಣಗಳು ತಡೆಗಟ್ಟಬೇಕು. ಅತಿವೃಷ್ಟಿ ಹಸಿ ಬರಗಾಲವೆಂದು ಘೋಷಣೆ ಮಾಡಬೇಕು.
ರೈತರ ಬಡವರ ಹಾನಿಗೊಳಗಾದ ಜನರ ನೆರವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಬರಬೇಕೆಂದು ಕರ್ನಾಟಕ ರೈತ ಸಂಘ ತಾಲೂಕು ಸಮಿತಿ ಒತ್ತಾಯಿಸುತ್ತದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಅತಿವೃಷ್ಟಿ ಮಳೆಯಿಂದ ಹಾನಿಗೊಳಗಾದ ರೈತರ ಹೊಲಗಳಲ್ಲಿ ಬದು ನಿರ್ಮಾಣ ತಡೆಗೊಡೆ ನಿರ್ಮಾಣ ಚಾಪ ಗೊಡೆ ನಿರ್ಮಾಣ, ಜಮೀನು ಸಮತಾಳು ಮಾಡಬೇಕು ತೋಟಗಾರಿಕೆ ಬೆಳೆಗಳು, ಮಾವು ,ತೆಂಗು, ನಿಂಬು,ಚಾಪಲ್, ತೋಟಗಾರಿಕೆ ಇಲಾಖೆಯ ಮೂಲಕ ಉಚಿತವಾಗಿ ಸಸಿ ಕೊಡಬೇಕು. ನರೇಗಾ ಯೋಜನೆ ಅಡಿಯಲ್ಲಿ ವಿತರಿಸಬೇಕು. ಬೌಲ್ಡರ್ ಚೆಕ್ಸ್ ಕಾಮಗಾರಿ ಹಾನಿಗೊಳಗಾದ ರೈತರ ಅನುಗುಣವಾಗಿ ಕ್ರಿಯಾ ಯೋಜನೆ ತಕ್ಷಣವೇ ತಯಾರಿ ರೈತರ ಹೊಲಗಳಲ್ಲಿ ಕಾಮಗಾರಿ ಪ್ರಾರಂಭಿಸಬೇಕು.
ಈ ವರ್ಷ ಬೆಳೆ ವಿಮೆ ಕಟ್ಟಿದ್ದ ಎಲ್ಲಾ ರೈತರಿಗೆ ಮಳೆ ಬಂದು ಬೆಳೆ ಹಾನಿಯಾದ ರೈತರಿಗೆ ಇಸ್ಕೋ ಟೋಕಿಯೊ ಬೆಳೆ ವಿಮಾ ಕಂಪನಿಯು ಟೊಲ್ ಫ್ರೀ ನಂಬರ್ ಹತ್ತುತ್ತಿಲ್ಲ ರೈತರಿಗೆ ಅನ್ಯಾಯವಾಗುತ್ತಿದೆ. ತಕ್ಷಣವೇ ಬೆಳೆ ವಿಮೆಯಿಂದ ವಂಚಿತರಾಗದಂತೆ ವಿಮೆ ಕಟ್ಟಿದ್ದ ರೈತರು ಅರ್ಜಿಗಳು ನೇರವಾಗಿ ವಿಮಾ ಕಂಪನಿ ಮತ್ತು ಕೃಷಿ ಇಲಾಖೆಯವರೆ ಹಳ್ಳಿಗಳಲ್ಲಿ ಡಂಗೂರು ಹಾಕಿಸಿ ಅರ್ಜಿ ಆದೇಶ ಬಿಡಬೇಕು. ಕೃಷಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಅತಿಯಾಗಿ ಮಳೆಯಿಂದ ಬೇಸತ್ತು ಹೊದ ರೈತರು ಅತಿವೃಷ್ಟಿ ಮಳೆಯಿಂದ ರೈತರ ದುಡ್ಡು ನಿರುಪಾಲಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರು ಚಿಂತಾಜನಕರಾದ ಸಮಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿ ಬಿದಿಗೆ ಬಂದಾಗ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನವರು ರೈತರು ಬೆಳೆ ಸಾಲ ಕಟ್ಟಲಾರದ ರೈತರ ಖಾತೆಗಳನ್ನು ಸ್ಥಗಿತ ಮಾಡಿ, ರೈತರಿಗೆ ಹಣಕಾಸಿನ ವ್ಯವಹಾರ ಮಾಡಲಾರದೆ ರೈತರಿಗೆ ಅನ್ಯಾಯ ಮಾಡುತ್ತಿರುವ ರೈತರ ಖಾತೆಗಳನ್ನು ಪುನಹ ಚಾಲು ಮಾಡಬೇಕೆಂದು ಒತ್ತಾಯಿಸಿ, ನೂರಾರು ರೈತರು ಕೋಡ್ಲಿ ಸರ್ಕಲ್ ಬಂದ್ ಮಾಡಿ ಹೋರಾಟ ಮಾಡಲಾಯಿತು. ಈ ಸಂದರ್ಭದಲ್ಲಿ ಹೋರಾಟವನ್ನು ಉದ್ದೇಶಿಸಿ ಅನೇಕ ರೈತರು ಮತ್ತು ಶಾಸಕ ಡಾ. ಅವಿನಾಶ ಜಾದವ ಮಾತನಾಡಿದರು. ಸದನದ ಒಳಗೆ ಮಾತನಾಡದ ಶಾಸಕರು ರೈತರ ಮಧ್ಯ ಮಾತನಾಡಿ ಫಲವೇನು ಎಂದ ರೈತ ಮುಖಂಡ ವೀರಣ್ಣ ಗಂಗಾಣಿ ಮಾತನಾಡಿದರು.
ವಾಡಿಕೆಕ್ಕಿಂತ ಕಡಿಮೆ ಮಳೆಯಾಗಿದೆ ಅಂತ ಜಂಟಿ ನಿರ್ದೇಶಕರು ಸಮದ ಪಟೇಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತದೆ. ಸುಳ್ಳು ಪತ್ರಿಕೆ ಹೇಳಿಕೆ ನೀಡಿದ್ದಾರೆ. ಇನ್ನೊಮ್ಮೆ ಸೂಕ್ತವಾಗಿ ಪರಿಶೀಲಿಸಬೇಕೆಂದು ಕಾಳಗಿ ಮತ್ತು ಚಿಂಚೋಳಿ ತಾಲೂಕಿನ ರೈತರು ಒತ್ತಾಯಿಸುತ್ತಿದ್ದಾರೆ.
ಈ ಹೋರಾಟದಲ್ಲಿ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೆಟ್ಟಿ, ತಾಲೂಕ ಅಧ್ಯಕ್ಷರಾದ ವೀರಣ್ಣ ಗಂಗಾಣಿ, ಪರಮೇಶ್ವರ ಕಾಂತಾ, ಅಣ್ಣಪ್ಪ ಅರಳಿ, ಅನಂತರೆಡ್ಡಿ ದೇಶಮುಖ, ಸಿದ್ದು ಬುಬುಲಿ, ಪಪ್ಪು ಗೋಣಗಿ, ರೈತ ಮಹಿಳೆ ಜಗದೇವಿ, ಸುಂದರ ಡಿ ಸಾಗರ್, ಶ್ರೀಕಾಂತ ತಾಂಡೂರ, ರೇವಣಸಿದ್ದಪ್ಪ ನಾವದಗಿ, ಸಿದ್ದು ಅಲ್ಲಾಪುರ, ಶಿವು ಸುಲೇಪೇಟ್, ಗೌರಿಶಂಕರ ಸುರ್ವಾರ, ಪ್ರದೀಪ ಪಾಟೀಲ್, ಶಿವು ಪ್ಯಾಟಿಮನಿ ಸಿದ್ದು ಪೆದ್ದಿ, ಖಾಸಿಂ ಪಟೇಲ್, ರಾಜು ದಳಪತಿ, ಶಿವಲಿಂಗಪ್ಪ ಹೊಸಮನಿ, ಇನ್ನೂ ಅನೇಕ ರೈತರು ಈ ಹೋರಾಟದಲ್ಲಿ ಭಾಗಿಯಾಗಿದ್ದರು.

ವರದಿ ಚಂದ್ರಶೇಖರ್ ಆರ್. ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!