
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಿರಣಗಿ ಗ್ರಾಮದ ವೀರರಾಣಿ ಚೆನ್ನಮ್ಮ ಪುತ್ತಳಿಯ ವರೆಗೆ ವೀರ ಜ್ಯೋತಿಯನ್ನು ವಿಸ್ತರಿಸುವ ಕುರಿತು ಜಯ ಕರ್ನಾಟಕ ಸಂಘಟನೆಯಿಂದ ದಿನಾಂಕ 30/09/2025 ರಂದು ಅಥಣಿಯ ತಹಸಿಲ್ದಾರ್ ಹಾಗೂ ದಂಡಾಧಿಕಾರಿಗಳಾದ ಸಿದ್ದರಾಯ ಬೋಸಗಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಅಥಣಿ ತಾಲೂಕಿನ ಕಿರಣಗಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಆಗಿರುವ ವೀರರಾಣಿ ಚೆನ್ನಮ್ಮಳ ಮೂರ್ತಿ ಇದ್ದು, ಸದರಿ ಅಕ್ಟೋಬರ್ ತಿಂಗಳಲ್ಲಿ ಬರುವ ವೀರ ಜ್ಯೋತಿಯನ್ನು ತಾಲೂಕಿನ ಕಿರಣಗಿ ಗ್ರಾಮದ ಚೆನ್ನಮ್ಮಳ ಮೂರ್ತಿವರೆಗೆ ಸದರಿ ಜ್ಯೋತಿಯನ್ನು ಕಳಿಸಬೇಕೆಂದು ಹಾಗೂ ವೀರರಾಣಿ ಚೆನ್ನಮ್ಮಳ ಪ್ರತಿಮೆಯು ಕರ್ನಾಟಕದ ಗಡಿ ಭಾಗದ ಕಿರಣಗಿ ಗ್ರಾಮದಲ್ಲಿ ಇರುವುದು ಒಂದು ಹೆಮ್ಮೆಯ ಸಂಗತಿಯಾಗಿದೆ, ಕಾರಣ ಕನ್ನಡಿಗರ ಹೆಮ್ಮೆ ನಮ್ಮ ಚೆನ್ನಮ್ಮಳ ಪ್ರತಿಮೆಗೆ ಒಂದು ಗೌರವ ಸಿಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆ ವತಿಯಿಂದ ವಿನಂತಿಸಿ ಮನವಿಯನ್ನು ಸಲ್ಲಿಸಲಾಯಿತು.
ಇದೇ ವೇಳೆ ಜಯ ಕರ್ನಾಟಕ ಅಥಣಿ ತಾಲೂಕ ಅಧ್ಯಕ್ಷರಾದ ಶ್ರೀ ಆಕಾಶ ನಂದಗಾವ, ಶೋಯೋಬ ಮುಲ್ಲಾ, ಪ್ರದೀಪ ಗುಮಚಿ, ಉಮರ ಸಯ್ಯದ, ಸಂತೋಷ ಬಡಕಂಬಿ, ಹನುಮಂತ ಕೋಳಿಗೇರಿ, ಲಕ್ಷ್ಮಣ ಬಡಕಂಬಿ, ಹನುಮಂತ ಭೋಸಲೆ, ಸಿದ್ದರಾಯ ಬೋಸಲೆ, ರಾಮಗೊಂಡ ಪಾಟೀಲ, ಕಿರಣ್ ಖೋತ, ಮಾಳಪ್ಪ ಮಂಗಸೂಳಿ, ಸಂತೋಷ ಬೇವನೂರ, ಅಭಿಷೇಕ ತೇಲಿ, ಸಿದ್ದು ಬೆನ್ನದ ಪ್ರಶಾಂತ ವಾಗ್ಮೂಡೆ ಸೇರಿದಂತೆ ಇನ್ನೂ ಅನೇಕ ಸದಸ್ಯರು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ



















