ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಗವತ ಗೀತೆ ಪಠಣದಿಂದ ಜೀವನ ಪಾವನ : ವಿ ವಿ ಪತ್ತಾರ

ಬಾಗಲಕೋಟೆ/ ಹುನಗುಂದ: ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹನುಗುಂದ ಇವರು ನವರಾತ್ರಿಯ ಅಂಗವಾಗಿ ಮಕ್ಕಳಿಗೆ ಭಗವತ ಗೀತೆ ಶ್ಲೋಕ ಪಠಣ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹುನುಗುಂದ ತಾಲೂಕ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ವಿ ವಿ ಪತ್ತಾರ ಭಗವತ್ ಗೀತೆಯನ್ನು ಪ್ರತಿನಿತ್ಯ ಶ್ರವಣ ಮಾಡುವುದರಿಂದ ಮನುಷ್ಯನ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಸಾವಿರಾರು ವರ್ಷಗಳ ಹಿಂದೆ ಪಾಂಡವರು ಮತ್ತು ಕೌರವರ ಮದ್ಯದಲ್ಲಿ ನೆಡೆದ ಯುದ್ಧದ ಸಮಯದಲ್ಲಿ ಅರ್ಜುನ ಯುದ್ಧ ಭೂಮಿಯಲ್ಲಿ ಬಂದು ನಿಂತಾಗ ವಿರೋಧಿಗಳ ಸಾಲಿನಲ್ಲಿ ರಕ್ತ ಸಂಬಂಧಿಗಳು ವಿದ್ಯೆ ಕಲಿಸಿದ ಗುರುಗಳನ್ನು ಕಂಡು ತನ್ನ ಗಾಂಢೀವವನ್ನು ಕೆಳಗಿಟ್ಟು ಯುದ್ಧ ಮಾಡಲು ನಿರಾಕರಿಸುತ್ತಾನೆ ಆಗ ಕೃಷ್ಣ ಪರಮಾತ್ಮ ಅರ್ಜುನನನಿಗೆ ಹೇಳಿದ ನೀತಿ ಪಾಠ ಭಗವತ್ ಗೀತೆಯಲ್ಲಿ ಅಡಗಿದೆ ಎಂದು ಹೇಳಿದರು. ಕೇವಲ ಅದು ಅರ್ಜುನನಿಗೆ ಮಾತ್ರ ಹೇಳಿದ ನೀತಿ ಪಾಠವಲ್ಲ ಸಾರ್ವಕಾಲಿಕ ಸಾಧನ ಇದಾಗಿದೆ ಅದಕ್ಕಾಗಿ ನಾವೆಲ್ಲರೂ ನಮ್ಮ ಮಕ್ಕಳಿಗೆ ಪಠ್ಯಪುಸ್ತಕಗಳೊಂದಿಗೆ ಭಗವತ್ ಗೀತೆ ಓದಲು ಕೊಡುವುದರಿಂದ ಸಮಾಜದಲ್ಲಿ ಧರ್ಮ ನಿಷ್ಠರಾಗಿ ಜೀವನದಲ್ಲಿ ಎಂತಹದೆ ತೊಂದರೆಗಳು ಬಂದರೆ ಎದುರಿಸಿ ಬದಕುವ ಸಾಮರ್ಥ್ಯ ಹೊಂದುತ್ತಾರೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ನಾರಾಯಣ ಪತ್ತಾರ ಭಗವದ್ಗೀತೆ ಸಂಪೂರ್ಣ ಸಂಸ್ಕೃತದಲ್ಲಿ ಇದ್ದು ಪ್ರತಿನಿತ್ಯ ನಾವೆಲ್ಲರೂ ಭಗವದ್ಗೀತೆ ಪಠಣ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅದಕ್ಕಾಗಿ ನಾವೆಲ್ಲರೂ ನಮ್ಮ ನಮ್ಮ ಮಕ್ಕಳಿಗೆ ಭಗವದ್ಗೀತೆಯನ್ನು ಓದಿಸುವದರ ಜೊತೆಗೆ ನಾವು ಪ್ರತಿನಿತ್ಯ ಭಗವದ್ಗೀತೆಯಲ್ಲಿರುವ ಶ್ಲೋಕಗಳನ್ನು ಪಠಣ ಮಾಡಬೇಕೆಂದರು.
ಸಾನಿದ್ಯ ವಹಿಸಿ ಮಾತನಾಡಿದ ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಗುರಪ್ಪಯ್ಯ ಮಹಾಸ್ವಾಮಿಗಳು ಸಂಸ್ಕೃತ ಭಾಷೆ ಕಠಿಣವಾದ ಭಾಷೆ ಭಗವದ್ಗೀತೆ ಸಂಸ್ಕೃತದಲ್ಲಿ ಇರುವುದರಿಂದ  ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಿಂತ ಮುಂಚೆ ಸ್ಪಷ್ಟ ಉಚ್ಚಾರ ಗಟ್ಟಿ ಧ್ವನಿಯಲ್ಲಿ ಶ್ಲೋಕ  ಹೇಳುವುದನ್ನು ರೂಢಿಸಿಕೊಳ್ಳಬೇಕು ಆಗ ಸ್ಪರ್ಧೆಯಲ್ಲಿ ಜಯ ಕಟ್ಟಿಟ್ಟ ಬುತ್ತಿ ಎಂದರು.
ವೇದಿಕೆ ಮೇಲೆ ಮೌನೇಶ್ ಪುರೋಹಿತ ಶಾಂತಾಬಾಯಿ ಪತ್ತಾರ ಉಪಸ್ಥಿತರಿದ್ದರು. ನಟರಾಜ ಬಡಿಗೇರ ನಿರೂಪಿಸಿದರು, ಪ್ರಾಸ್ತಾವಿಕವಾಗಿ ನರಸಿಂಹ ಪತ್ತಾರ ಮಾತನಾಡಿದರು, ಅಶೋಕ ದೊಡ್ಡಪತ್ತಾರ ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!