
ಬೆಳಗಾವಿ: ಅಥಣಿ ನಗರದಲ್ಲಿ ಚೈನಿ ಆಸ್ಪತ್ರೆಯ ಹತ್ತಿರದ ಜಮಾದಾರ್ ಬಿಲ್ಡಿಂಗ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಕಾರ್ಯಾಲಯದ ಉದ್ಘಾಟನೆಯನ್ನು ಪೂಜ್ಯರಿಂದ ರಿಬ್ಬಿನ್ ಕಟ್ ಮಾಡುವುದರ ಮೂಲಕ ಹಾಗೂ ಪೂಜ್ಯರು ಮತ್ತು ಗಣ್ಯ ವ್ಯಕ್ತಿಗಳಿಂದ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಪತ್ರಕರ್ತರು ನಿಷ್ಪಕ್ಷ, ನಿಷ್ಟುರ ಮತ್ತು ಪ್ರಾಮಾಣಿಕವಾಗಿ ಸುದ್ದಿಗಳನ್ನು ಮಾಡಬೇಕು ಎಂದು ದಿವ್ಯಸಾನಿಧ್ಯ ವಹಿಸಿದಂತಹ ಶೆಟ್ಟರ್ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಹೇಳಿದರು.
ಪಕ್ಷ ಯಾವುದೇ ಇರಲಿ ವ್ಯಕ್ತಿ ಯಾರೇ ಇರಲಿ ಒಬ್ಬ ವ್ಯಕ್ತಿಗೆ ಸೀಮಿತನಾಗದೆ ಪ್ರಾಮಾಣಿಕವಾಗಿ ಕೆಲಸ ಮಾಡಿ. ಸಮಾಜ ನಿಮ್ಮನ್ನು ಗೌರವಿಸುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಗಜಾನನ ಮಂಗಸೂಳಿ ಹೇಳಿದರು.
ತಾಲೂಕಿನಲ್ಲಿನ ಮೂಲೆ ಮೂಲೆಗಳಲ್ಲಿರುವ ಸುದ್ದಿ ಹುಡುಕಿ ಅಧಿಕಾರಿಗಳ ಕಣ್ಣು ತೆರೆಸಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಬೆಳಗಾವಿ ಜಿಲ್ಲಾ ಜಿಲ್ಲಾಧ್ಯಕ್ಷರಾದ ರವಿ ಕಾಂಬಳೆ ಅವರು ಹೇಳಿದರು.
ಸಂವಿಧಾನದ ನಾಲ್ಕನೇ ಅಂಗ ಪತ್ರಿಕೋದ್ಯಮ ಖಡ್ಗಕ್ಕಿಂತ ಲೇಖನಿ ಹರಿತು ಸಮಾಜದ ಒಳಿತಿಗೆ ಸುದ್ದಿಗಳನ್ನು ಬಿತ್ತರಿಸಿ ನಿಮಗೆ ಯಾವಾಗುಲೂ ಬೆಂಬಲವಾಗಿರುತ್ತೇನೆ ಎಂದು ಹೇಳಿ ಜೊತೆಗೆ ಕಾರ್ಯಕ್ರಮದಲ್ಲಿಯೇ ಸಂಘಟನೆಗೆ ಮಿತೇಶ್ ಪಟ್ಟಣ ಖ್ಯಾತ ವಕೀಲರು ಸ್ಥಳದಲ್ಲಿಯೇ ಐದು ಸಾವಿರ ರೂಗಳನ್ನು ದೇಣಿಗೆ ನೀಡಿದರು.
ವರದಿಯಲ್ಲಿ ಸ್ಪಷ್ಟತೆ, ನಿಖರತೆ, ಸತ್ಯತೆ ಖಾಸಗಿ ವ್ಯಕ್ತಿ ಜೀವನದ ಮಾಹಿತಿ ಗೌಪ್ಯತೆ ಇರಬೇಕು ಮತ್ತು ಬಳಸುವ ಭಾಷೆ ಮನಸ್ಸಿಗೆ ನೋವಾಗದ ರೀತಿ ಇರಬೇಕೆಂದು ತಹಶೀಲ್ದಾರ್ ಹಾಗೂ ತಾಲೂಕ ದಂಡಾಧಿಕಾರಿಗಳಾದ ಸಿದ್ದರಾಯ ಬೋಸಗಿ ಹೇಳಿದರು.
ಸಮಾಜ ಮತ್ತು ಸರ್ಕಾರದ ಸೇತುವೆಯಾಗಿ ಕೆಲಸ ಮಾಡುವ ಪತ್ರಕರ್ತರು ಅಥಣಿ ಪಟ್ಟಣದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಿಕೊಡಬೇಕೆಂದು ತಹಶೀಲ್ದಾರ್ ಹಾಗೂ ತಾಲೂಕ ದಂಡಾಧಿಕಾರಿಗಳಿಗೆ ಅಥಣಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಮನವಿ ನೀಡಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಶೆಟ್ಟರ್ ಮಠ ಅಥಣಿ, ಸನ್ಮಾನ್ಯ ಶ್ರೀ ಗಜಾನನ್ ಮಂಗಸೂಳಿ ಕಾಂಗ್ರೆಸ್ ಮುಖಂಡರು ಅಥಣಿ, ಸನ್ಮಾನ್ಯ ಶ್ರೀ ಗಿರೀಶ್ ಬುಟಾಳಿ ಬಿ.ಜೆ.ಪಿ ಅಥಣಿ ಮಂಡಲ ಅಧ್ಯಕ್ಷರು, ಶ್ರೀ ಸಿದ್ದರಾಯ್ ಬೋಸಗಿ ತಹಶೀಲ್ದಾರರು ಹಾಗೂ ತಾಲೂಕ ದಂಡಾಧಿಕಾರಿಗಳು ಅಥಣಿ, ಶ್ರೀ ಶಿವಾನಂದ ಕಲ್ಲಾಪುರ್ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀಮತಿ ಶಿವಲೀಲಾ ಬುಟಾಳಿ ಅಥಣಿ ಪುರಸಭೆ ಅಧ್ಯಕ್ಷರು, ಡಾ|| ರವಿ ಕಾಂಬಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರು, ಶ್ರೀ ಕಲ್ಲೇಶ್ ಮಡ್ಡಿ ಪುರಸಭೆ ಜನಪ್ರಿಯ ಸದಸ್ಯರು ಅಥಣಿ, ಶ್ರೀ ಮಿತಿಷ್ ಪಟ್ಟಣ್ ಖ್ಯಾತ ವಕೀಲರು, ಶ್ರೀ ಗೌತಮ್ ಪರಾಂಜಪೆ ದಲಿತ ಮುಖಂಡರು ಹಾಗೂ ಸಮಾಜ ಸೇವಕರು, ಶ್ರೀಮತಿ ಸುನಿತಾ ಐಹೊಳೆ ಕೆಪಿಸಿಸಿ ಸಂಯೋಜಕರು, ಶ್ರೀಮತಿ ರೂಪಾ ಕಾಂಬಳೆ ಭರವಸೆ ಬೆಳಕು ಫೌಂಡೇಶನ್ ಅಧ್ಯಕ್ಷರು ಅಥಣಿ, ಶ್ರೀಮತಿ ಜಯಶ್ರೀ ಕಾಂಬಳೆ ಸಮಾಜ ಸೇವಕರು, ಗಂಗಾಧರ್ ಶಿರಗಾವಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರು, ಶ್ರೀಕಾಂತ್ ಚೌಗಲಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಗೌರವ ಅಧ್ಯಕ್ಷರು, ಅಲ್ಲಾವುದ್ದೀನ್ ಶೇಕ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಥಣಿ ಅಧ್ಯಕ್ಷರು, ಸುರೇಶ್ ಸೌದಾಗರ್ ಕಾಂಗ್ರೆಸ್ ಮುಖಂಡರು, ಉಮರ್ ಸೈಯದ್ ಕಾಂಗ್ರೆಸ್ ಮುಖಂಡರು, ವನಿತಾ ಖೋಕಾಟೆ ಹಾಗೂ ಅಥಣಿಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷರು ,ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಸಂಘಟನೆಯ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ



















