ಹಾಸನ: ಶೃಂಗೇರಿ ಶ್ರೀ ಶಂಕರಮಠ, ಕೆ.ಆರ್. ಪುರಂ, ಹಾಸನ ಇದರ ವತಿಯಿಂದ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠಾಧೀಶ್ವರ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳ ಮತ್ತು ಶ್ರೀಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳ ಆಶೀರ್ವಾದ ಮತ್ತು ಅನುಜ್ಞೆಯಂತೆ ಹಾಸನಾಂಬಾ ದರ್ಶನ ಸಮಯದಲ್ಲಿ ಪರಸ್ಥಳದವರಿಗೆ ಊಟೋಪಚಾರ ವ್ಯವಸ್ಥೆಯನ್ನು ದಿನಾಂಕ 10.10.2025 ರಿಂದ 22.10.2025 ಏರ್ಪಡಿಸಲಾಗಿದೆ.
ಉಪಾಹಾರ : ಬೆಳಗ್ಗೆ 8 ಗಂಟೆಯಿಂದ 10ರವರೆಗೆ, ಭೋಜನ :ಮಧ್ಯಾಹ್ನ 12ರಿಂದ 3ರವರೆಗೆ.
ಈ ವ್ಯವಸ್ಥೆ ಕಡ್ಡಾಯವಾಗಿ ಪರಸ್ಥಳದಿಂದ ದೇವಿಯ ದರ್ಶನಕ್ಕೆ ಬರುವವರಿಗೆ ಮಾತ್ರ.
ಒಂದು ದಿನ ಮುಂಚಿತವಾಗಿ ಎಷ್ಟು ಜನ ಬರುತ್ತಾರೆ, ಯಾವ ಸಮಯಕ್ಕೆ ಬರುತ್ತಾರೆ ಎಂಬುದನ್ನು ಕರೆಮಾಡಿ ತಿಳಿಸಬೇಕಲ್ಲದೆ ಇಲ್ಲಿ ಬಂದಾಗ ಅವರ ಆಧಾರ್ ಕಾರ್ಡ್ ತೋರಿಸಬೇಕಾಗಿರುವುದು ಕಡ್ಡಾಯವಾಗಿದೆ.
ಬೆಳಗ್ಗೆ ಬರುವವರು ತಮ್ಮ ವಾಹನಗಳನ್ನು ಶ್ರೀಮಠದ ಆವರಣದಲ್ಲೇ ನಿಲ್ಲಿಸಿ ಶೌಚವಿಧಿಗಳನ್ನು ಪೂರೈಸಿಕೊಂಡು ಆಟೋ ಮಾಡಿಕೊಂಡು ಹೋಗಿ ಹಾಸನಾಂಭ ದರ್ಶನ ಮಾಡಿಬಂದು ಪ್ರಸಾದ ಭೋಜನ ಸ್ವೀಕರಿಸಿ ತೆರಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಸಂಪ್ರದಾಯಸ್ಥರಿಗೆ ಪ್ರತ್ಯೇಕ ವ್ಯವಸ್ಥೆಯಿದ್ದು ಈ ಬಗ್ಗೆ ಮೊದಲೇ ತಿಳಿಸಬೇಕಾಗಿರುತ್ತದೆಯಲ್ಲದೆ
ಸಂಘ ಸಂಸ್ಥೆಗಳವರು ತಮ್ಮ ಸಂಸ್ಥೆಯ ವತಿಯಿಂದ ಬರುವವವರ ಸಂಖ್ಯೆಯನ್ನು ತಮ್ಮ ಲೆಟರ್‌ಹೆಡ್‌ನಲ್ಲಿ ನಮೂದಿಸಿ 98440 03434ಗೆ whatsapp ಮೂಲಕ ಪೂರ್ವಭಾವಿಯಾಗಿ ತಿಳಿಸ ಬಹುದು ಮತ್ತು ಶ್ರೀಮಠದ ಶಾಖೆ/ಸಂಘ ಸಂಸ್ಥೆಗಳ ಪತ್ರ ತರುವವರಿಗೆ ಅದನ್ನೇ ಗುರುತಿನ ಪತ್ರವೆಂದು ಪರಿಗಣಿಸಲಾಗುವುದು.
ವಾಟ್ಸಾಪ್ ನಂಬರ್: 98440 03434 /
98446 41800.
ಅವಶ್ಯಕತೆಯಿರುವ ಪರಸ್ಥಳೀಯ ಬಂಧು-ಮಿತ್ರರಿಗೆ ಈ ವಿಷಯ ತಿಳಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಲಾಗಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್



















