
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಕ್ಷೇತ್ರ ಚಿಮ್ಮಇದಲಾಯಿ ಗ್ರಾಮದ ಶ್ರೀ ಸಿದ್ರಾಮೇಶ್ವರ ಸಂಸ್ಥಾನ ಹಿರೇಮಠದಲ್ಲಿ ದಸರಾ ಹಬ್ಬದ ನಿಮಿತ್ಯವಾಗಿ ಪ್ರತಿ ವರ್ಷದ ಪದ್ದತಿಯಂತೆ ಶ್ರೀ ಆದಿಶಕ್ತಿ ಶಾಂಭವಿ ದೇವಿಯ ಪಾರಾಯಣ ಹಾಗೂ ಶ್ರೀ ವೀರಭದ್ರೇಶ್ವರ ದೇವರ ಮಹಾಪುರಾಣವು ದಿನಾಂಕ 22-09-2025 ರಿಂದ ಪ್ರತಿ ದಿನ ರಾತ್ರಿ 8:00 ಗಂಟೆಯಿಂದ 10:00 ಗಂಟೆಯವರೆಗೆ ಸಾಗಿ ಬರುತ್ತಿದ್ದು, ಮುಕ್ತಾಯ ಸಮಾರಂಭ ಕಾರ್ಯಕ್ರಮದಲ್ಲಿ ದಿನಾಂಕ: 06-10-2025 ರಂದು ರಾತ್ರಿ 7:30 ಕ್ಕೆ ಪಾವನ ಸಾನಿಧ್ಯವನ್ನು ಶ್ರೀ ಷಟ್ ಸ್ಥಲ ಬ್ರಹ್ಮ ಮಹಾಂತೇಶ್ವರ ಶಿವಾಚಾರ್ಯರು ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠ ಚಿಮ್ಯಾಇದಲಾಯಿ ಪೂಜ್ಯರು ವಹಿಸಿ ಪುರಾಣ ಹೇಳಿದರು.
ಗ್ರಾಮದ ಗೌಡರ ಮನೆತನದಿಂದ ಪೂಜ್ಯರಿಗೆ ತುಲಾಭಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ
ಶ್ರೀ ಬಸವರಾಜ ಮಲಿ ತಾಲೂಕಾಧ್ಯಕ್ಷರು ಕಾಂಗ್ರೇಸ್ ಚಿಂಚೋಳಿ,
ಶ್ರೀ ಶರಣು ಪಾಟೀಲ ಮೋತಕಪಳ್ಳಿ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಂಚೋಳಿ ವೇದಿಕೆ ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ವೀರಣ್ಣ ಗಂಗಾಣಿ ರಟಕಲ್ ತಾಲೂಕ ಅಧ್ಯಕ್ಷರು
ರೈತ ಸಂಘ,
ಶ್ರೀ ಸಿದ್ದು ಪಾಟೀಲ ಉದ್ದಿಮೆದಾರರು ಕಲಬುರಗಿ,
ಶ್ರೀ ಆನಂದ ಟೈಗರ್ ಅಧ್ಯಕ್ಷರು ಪುರಸಭೆ ಚಿಂಚೋಳಿ, ಶ್ರೀ ಚಿಂತನ ರಾಥೋಡ ಕಾಂಗ್ರೆಸ್ ಮುಖಂಡರು ಕಲಬುರಗಿ,
ಶ್ರೀ ಸಂಜು ಪಾಟೀಲ್ ತಾಲೂಕಾಧ್ಯಕ್ಷರು ವೀರಶೈವ ಲಿಂಗಾಯತ ಸಮಾಜ ಚಿಂಚೋಳಿ,
ಶ್ರೀ ಶೇಖ ಭಕ್ತಿಯಾರ ಜಾಗೀರದಾರ ವಕೀಲರು ಚಿಂಚೋಳಿ,
ಶ್ರೀ ವಿರೇಶ ಯಂಪಳ್ಳಿ ಬಿ.ಜೆ.ಪಿ. ಮುಖಂಡರು ಚಿಂಚೋಳಿ,
ಶ್ರೀ ಸಂಜೀವಕುಮಾರ ಗುತ್ತೇದಾರ ಫೈನಾನ್ಸ್ ಮ್ಯಾನೇಜರ್,
ಶ್ರೀ ಚೇತನ ಸುಲೇಪೇಟ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು. ಮಡಯ್ಯ ಸ್ವಾಮಿ ಮಠಪತಿ ನಿರೂಪಿಸಿದರು.
ವರದಿ ಎಸ್. ವಿ. ಗಂಗಾಣಿ



















