ಕಲಬುರಗಿ/ ಚಿಂಚೋಳಿ: ಅ.9 ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಪ್ರಕರಣ ಖಂಡಿಸಿ ವಕೀಲರು ಬುಧವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದರು.
ವಕೀಲರ ಸಂಘದ ಅಧ್ಯಕ್ಷ ಶಶಿಕಾತ ಆಡಕಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಕೀಲರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಶಶಿಕಾಂತ ಅಡಕಿ, ಸೂರ್ಯಕಾಂತ ಕರಣಿಕರ, ಮಲ್ಲಿಕಾರ್ಜುನ ರಾಮತೀರ್ಥ, ದೇವೇಂದ್ರ ಜಾಬಿನ್, ಸುನೀಲಕುಮಾರ ಸೊಲ್ಲಾಪುರ, ಶಿವಶರಣಪ್ಪ ಜಾಪಟ್ಟಿ, ಚಂದ್ರಶೆಟ್ಟಿ ಜಾಧವ ವಿಶ್ವನಾಥ ಬೆನಕಿನ್, ಶಿವರಾಯ ಹಾದಿಮನಿ, ನಾಗಭೂಷಣ ಹುಲಗುಂಡಿ, ರಾಜೇಂದ್ರ ರೇವಣೋರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ. ಎಸ್ ವಿ ಗಂಗಾಣಿ.




















