ಬಳ್ಳಾರಿ / ಕಂಪ್ಲಿ : ಸರ್ವೋಚ್ಚ ನ್ಯಾಯಾಲಯದ ಬಿ. ಆರ್. ಗವಾಯಿ ಅವರ ಮೇಲೆ ನಡೆದ ಕೃತ್ಯ ಖಂಡಿಸಿ, ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ, ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಗ್ರೇಡ್-2 ತಹಶೀಲ್ದಾರ್ ಷಣ್ಮುಖಪ್ಪಗೆ ಮನವಿ ಪತ್ರ ಸಲ್ಲಿಸಿದರು. ನಂತರ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ. ಎಚ್. ಎಂ. ರಾಜಕುಮಾರ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಮುಖ್ಯವಾದ ಅಂಗವಾದ ನ್ಯಾಯಾಂಗವನ್ನು ಪ್ರತಿಯೊಬ್ಬರೂ ಗೌರವಿಸುವುದು ಮತ್ತು ಯಾವುದೇ ತೀರ್ಪಿಗೆ ತಲೆಬಾಗುವುದು ನ್ಯಾಯಾಂಗಕ್ಕೆ ಮಾತ್ರ. ಆದ್ದರಿಂದ ಯಾವುದೇ ವೈಮನಸ್ಸು ಇರಲಿ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ನಡೆದ ಕೃತ ಅತ್ಯಂತ ಖಂಡನೀಯವಾಗಿದೆ. ಈಗಿನ ವೈಜ್ಞಾನಿಕ ಯುಗವೆಂದು ಕರೆಸಿಕೊಳ್ಳುತ್ತಿರುವ ಸುತ್ತಲೂ ಕ್ಯಾಮರಾಗಳು ಎಡಬಿಡದೇ ನಮ್ಮನ್ನು ಚಿತ್ರೀಕರಿಸಿಕೊಳ್ಳುತ್ತಿರುವ ಇಪ್ಪತ್ತೊಂದನೇ ಶತಮಾನದ ಕಾಲು ಭಾಗ ಮುಗಿಸಿರುವ ಸಮಯದಲ್ಲೇ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಂತಹ ಪ್ರಭಾವಿ ವ್ಯಕ್ತಿಯ ಮೇಲೇ ಈ ಪರಿಯ ಅಸಹನೆಯನ್ನು ಸಾರ್ವಜನಿಕವಾಗಿ ತೋರಿಸಿದ್ದು ನಿಜಕ್ಕೂ ಬಹಳ ಶೋಚನಿಯ. ಆದ್ದರಿಂದ ತಪ್ಪಿತಸ್ಥ ವ್ಯಕ್ತಿಯ ಮೇಲೆ ಶೀಘ್ರುವಾಗಿ ಕಾನೂನು ಕ್ರವ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಕೃತ್ಯ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ವಿವಿಧ ಸಂಘ-ಸಂಸ್ಥೆಯವರು ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹೆಚ್.ಗೋಪಾಲ, ವಸಂತರಾಜ ಕಹಳೆ, ಭಾವೈಕ್ಯ ವೆಂಕಟೇಶ, ಸಣಾಪುರ ಮರಿಸ್ವಾಮಿ, ಬಿ. ಲಕ್ಷ್ಮಣ, ಯಲ್ಲಪ್ಪ, ರಾಮಸಾಗರ ಬಸವರಾಜ, ಹೆಚ್.ಮಂಜು, ರವಿ ಮಣ್ಣೂರು, ಹುಸೇನಪ್ಪ, ರಾಮಾಂಜನೇಯ, ರುದ್ರಪ್ಪ, ಬಸಪ್ಪ ಮೆಟ್ರಿ, ನಾಗಪ್ಪ, ಧನಂಜಯ್ಯ ಸೇರಿ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















