ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಂಗಳಮುಖಿಯರಿಗೆ ಉಚಿತವಾಗಿ ವಸ್ತ್ರದಾನ ವಿತರಣೆ : ಶಾಸಕ ಗಣೇಶ ಅವರ ಸಮ್ಮುಖದಲ್ಲಿ ಯುವ ಮುಖಂಡ ಕನಕಪ್ಪ ಸುಣಗಾರ ಜನ್ಮ ದಿನಾಚರಣೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಬೈಪಾಸ್ ರಸ್ತೆಯ ಶಾಸಕರ ಕಚೇರಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ಎಮ್ಮಿಗನೂರು ಕನಕಪ್ಪ ಸುಣಗಾರ ಅವರ ಜನ್ಮದಿನದ ಅಂಗವಾಗಿ ಶಾಸಕ ಜೆ. ಎನ್. ಗಣೇಶ ಅವರ ಸಮ್ಮುಖದಲ್ಲಿ ಮಂಗಳಮುಖಿಯರಿಗೆ ಉಚಿತವಾಗಿ ವಸ್ತ್ರ (ಸೀರೆ) ವಿತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿಕೊಂಡರು.
ನಂತರ ಶಾಸಕ ಗಣೇಶ ಅವರು ಕನಕಪ್ಪ ಇವರಿಗೆ ಆಶೀರ್ವದಿಸಿ ಮಾತನಾಡಿ, ಆಡಂಬರದ ಆಚರಣೆ ಬಿಟ್ಟು, ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಿಕೊಂಡಿದ್ದು, ರಾಜಕೀಯ, ಆರ್ಥಿಕವಾಗಿ ಬೆಳೆಯುವ ಜೊತೆಗೆ ಇನ್ನಷ್ಟು ಸೇವೆ ಮಾಡಲು ದೇವರು ಶಕ್ತಿ ನೀಡಲಿ. ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಮುಂದಿನ ದಿನದಲ್ಲಿ ರಾಜಕೀಯವಾಗಿ ಸೇವೆ ಮಾಡಲು ಅವಕಾಶ ದೊರಕಲಿ ಎಂದರು.
ತದ ನಂತರ ಶಾಸಕರ ಮತ್ತು ಮಂಗಳಮುಖಿಯರ ಆಶೀರ್ವಾದ ಪಡೆದ ನಂತರ ಯುವ ಮುಖಂಡ ಕನಕಪ್ಪ ಸುಣಗಾರ ಮಾತನಾಡಿ, ಜನ ಮೆಚ್ಚಿದ ನಾಯಕ ಶಾಸಕ ಗಣೇಶ ಅವರ ಮಾರ್ಗದರ್ಶನದಂತೆ ಸಣ್ಣಪುಟ್ಟ ಸಮಾಜ ಸೇವೆಗಳನ್ನು ಮಾಡುತ್ತಿದ್ದು, ಇನ್ನಷ್ಟು ಸೇವೆ ಮಾಡಲು, ಪ್ರತಿಯೊಂದು ಹಂತದಲ್ಲಿ ಶಾಸಕರ ಆಶೀರ್ವಾದ ಅಗತ್ಯವಾಗಿದೆ. ಮಂಗಳಮುಖಿಯರಿಗೆ ವಸ್ತ್ರದಾನ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಇಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿದ ನಂತರ 25ಕ್ಕೂ ಹೆಚ್ಚು ಮಂಗಳಮುಖಿಯರಿಗೆ ವಸ್ತ್ರದಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ವಿರೂಪಾಕ್ಷಿ, ಮಾಧ್ಯಮ ಸಲಹೆಗಾರ ಯೋಹಾನ, ಪುರಸಭೆ ಸದಸ್ಯ ಸಿ.ಆರ್.ಹನುಮಂತ, ಮುಖಂಡರಾದ ಕೆ.ಷಣ್ಮುಕಪ್ಪ, ಮೆಟ್ರಿ ಗಿರೀಶ ಸೇರಿದಂತೆ ಅನೇಕರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!