ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಡಲತೀರದ ಭಾರ್ಗವ, ಶಿವರಾಮ ಕಾರಂತ, ಅವರ ಜನ್ಮ ದಿನಾಚರಣೆ, ಮತ್ತು ಅಗಲಿದ ಚೇತನಗಳಿಗೆ ಭಾವಪೂರ್ಣ ಶ್ರದ್ಧಾಂಜಲಿಯ ನುಡಿ ನಮನ..

ಕೊಪ್ಪಳ : ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಸ್ಥಳೀಯ ಪ್ರವಾಸಿ ಮಂದಿರದಲ್ಲಿ, ಕಡಲ ತೀರದ ಭಾರ್ಗವ, ಡಾ. ಶಿವರಾಮ ಕಾರಂತ, ಅವರ ಜನ್ಮದಿನದ ನೆನಪಿನ ಹಿನ್ನಲೆಯಲ್ಲಿ, ಡಾ. ಶಿವರಾಮ ಕಾರಂತರ ಬದುಕು ಬರಹ, ಕುರಿತು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಶರಣಬಸಪ್ಪ ಬಿಳಿಯಲಿ, ಅವರು ವಿಶೇಷ ಉಪನ್ಯಾಸ ನೀಡಿ, ಶಿವರಾಮ ಕಾರಂತರದು
ಬಹುಮುಖ ಪ್ರತಿಭೆಯ ವ್ಯಕ್ತಿತ್ವ, ಅವರ ಕಾದಂಬರಿಗಳಲ್ಲಿ,ಸಾಮಾಜಿಕ ಕಳಕಳಿಯ ಜೊತೆಗೆ ವೈಜ್ಞಾನಿಕ, ವೈಚಾರಿಕ ಅಂಶಗಳಿಂದ ಓದುಗರ ಗಮನ
ಸೆಳೆದರು, ತಮ್ಮ ಕ್ರಿಯಾಶೀಲತೆಯಿಂದ ಎಲ್ಲರನ್ನೂ ಬೆರಗುಗೊಳಿಸಿದ್ದರು, ಅವರು
ಇಹಲೋಕದಿಂದ ಮರೆಯಾದರೂ ಸಹೃದಯರ
ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ
ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಎಸ್. ಎಂ ಕಂಬಾಳಿಮಠ ಅವರು, ಶಿವರಾಮ ಕಾರಂತರ ಹಲವು
ಕಾದಂಬರಿಗಳನ್ನು ಓದಿದ ನನಗೆ, ಅವರ
ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು,
ಅಳಿದ ಮೇಲೆ, ಕಾದಂಬರಿಗಳು ಬಹಳ ಇಷ್ಟವಾಗಿವೆ, ಕೇವಲ ಸಾಹಿತ್ಯ ಕೃತಿಗಳಲ್ಲದೇ, ಯಕ್ಷಗಾನ, ರಂಗಭೂಮಿ, ವಿಜ್ಞಾನ, ಕ್ಷೇತ್ರಗಳಲ್ಲಿಯೂ
ಗಣನೀಯ ಸಾಧನೆ ಮಾಡಿದ ಕಾರಂತರು ಸದಾ ಸ್ಮರಣೀಯರು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಮುಖ್ಯೋಪಧ್ಯಾಯರಾದ ಮೈಲಾರಪ್ಪ ಉಂಕಿ, ಅವರು ಶಿವರಾಮ ಕಾರಂತರ ಸಾಹಿತ್ಯ
ಕೃತಿಗಳ ಕುರಿತು ಮಾತಾಡಿದರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ
ಕಾರ್ಯದರ್ಶಿ, ಡಾ. ಮಹಾಂತೇಶ ನೆಲಾಗಣಿ ಅವರು ಮಾತನಾಡುತ್ತಾ ಶಿವರಾಮ ಕಾರಂತರು ನಡೆದಾಡುವ ವಿಶ್ವಕೋಶವಾಗಿದ್ದರು ಎಂದು ಅವರನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ
ಅಧ್ಯಕ್ಷ, ರುದ್ರಪ್ಪ ಭಂಡಾರಿ,ವಹಿಸಿ ಮಾತನಾಡಿ ಅವರು, ಮಂಗಳೂರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಅವರನ್ನು ಸಂದರ್ಶನ ಮಾಡುವ ಸುಯೋಗ ನನ್ನದಾಗಿತ್ತು, ಕಾರಂತರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿ, ಶಿವರಾಮ ಕಾರಂತರ ಗುಣಗಾನ ಮಾಡಿದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಮ್ಮನ್ನಗಲಿದ ಕನ್ನಡ ಸಾಹಿತ್ಯದ ಮೇರು ಕತೆಗಾರರಾದ ಮೊಗಳ್ಳಿ ಗಣೇಶ,
ಹಾಗೂ ಕನ್ನಡ ನಿವೃತ್ತ ಪ್ರಾಧ್ಯಾಪಕಿ ಡಾ. ಪಾರ್ವತಿ ಪೂಜಾರ ಅವರ ಭಾವಚಿತ್ರಗಳಿಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ, ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.
ಆರಂಭದಲ್ಲಿ ಕಾರ್ಯಕ್ರಮಕ್ಕೆ, ಎಲ್ಲರನ್ನು ಸ್ವಾಗತಿಸಿ, ಶಿವಪ್ರಸಾದ್ ಹಾದಿಮನಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರೆ,
ಡಾ. ಬಸವರಾಜ ಗಡಾದ ಅವರ ಅಚ್ಚು ಕಟ್ಟಾದ ನಿರೂಪಣೆ, ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!