ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಕ್ತರಿಗೆ ಹರಕೆ ತೀರಿಸಲು ಅಡ್ಡಿಯಾದ ದೇವಸ್ಥಾನ ಸಿಬ್ಬಂದಿ

ಕಲಬುರಗಿ/ ಕಾಳಗಿ :ಧಾರ್ಮಿಕ ದತ್ತಿ ಇಲಾಖೆ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗಿ (ರಟಕಲ್).

ಜಗದ್ಗುರು ಶ್ರೀ ರೇವಣಸಿದ್ದೇಶ್ವರರು ಬೇಡಿದವರಿಗೆ ಬೇಡಿದ್ದನ್ನೇ ಕರುಣಿಸುವ ಕರುಣಾಮಯಿ, ಆದರೆ ಹರಕೆ ತೀರಿಸಲು ಬಂದ ಭಕ್ತಾದಿಗಳು ಹರಕೆ ತೀರಿಸದೇ ವಾಪಸ್ ಹೋಗುವ ಪರಿಸ್ಥಿತಿ ಇಲ್ಲಿ ಉದ್ಭವವಾಗಿದ್ದು
ಸೋಮವಾರ ಬೆಳಗ್ಗೆ 5:00ಯಿಂದ 8 ಗಂಟೆವರೆಗೆ ಕಾದು ಕಾದು ಸುಸ್ತಾಗಿದ್ದಾರೆ ರೇವಣಸಿದ್ದೇಶ್ವರ ಭಕ್ತರು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದ ದೇವಸ್ಥಾನ ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳೇ ಕಾರಣ ಎನ್ನುತ್ತಾರೆ ಭಕ್ತರು.
ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜಾ ನಡೆಯುತ್ತದೆ ಬೆಳಗಿನ ಜಾವ ನಾಲ್ಕು ಗಂಟೆಗೆ ಭಕ್ತರಿಂದ ಅಭಿಷೇಕ, ಸಾವಿರದ ಒಂದು ಜಂಗಮ ಅರ್ಚನೆ, ನೂರಾಒಂದು ಜಂಗಮ ಅರ್ಚನೆ, ಗೂಳಿ ಬಿಡುವದು, ಜವಳ ಕಾರ್ಯಕ್ರಮ, ತನಾರತಿ, ದೀರ್ಘದಂಡ ನಮಸ್ಕಾರ, ಹೀಗೆ ಇನ್ನಿತರ ಅನೇಕ ಹರಕೆ,ದೈವಿಕ ಕಾರ್ಯಗಳು ನಡೆಯುತ್ತವೆ. 5 ಗಂಟೆಗೆ ಪ್ರಾರಂಭವಾಗುವ ಅಭಿಷೇಕ ಇಂದು 8 ಗಂಟೆಗೆ ಪ್ರಾರಂಭವಾಗಿದೆ. ಕಾರಣ ಇಲ್ಲಿ ಸಿಬ್ಬಂದಿಗಳ ಕೊರತೆ ಮತ್ತು ಇದ್ದಂತಹ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಹಾಜರಾಗದೆ ಇರುವುದು ಮತ್ತು ಮೇಲಾಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣವಾಗಿದೆ ಪ್ರತಿನಿತ್ಯ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಿರುತ್ತಾರೆ ಆದರೆ ಇಲ್ಲಿ ಬಂದಂತಹ ಭಕ್ತಾದಿಗಳಿಗೆ ಯಾವುದೇ ಬೇಕಾದ ಮೂಲ ಸೌಕರ್ಯ ಇರುವುದಿಲ್ಲ. ಬಂದಂತಹ ಭಕ್ತರು ಸಿಬ್ಬಂದಿಗಳಿಗೆ ಮತ್ತು ಮೇಲಾಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಹೋಗುವುದು ಪ್ರತಿದಿನದ ವಾಡಿಕೆಯಾಗಿದೆ. ಹೀಗಾದರೆ ಧಾರ್ಮಿಕ ದತ್ತಿ ಇಲಾಖೆಯಿಂದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಆಗುವುದಾದರೂ ಯಾವಾಗ ಮತ್ತು ಖಜಾನೆಯಲ್ಲಿ ಇರತಕ್ಕಂತ ದುಡ್ಡು ಅಭಿವೃದ್ಧಿ ಹೆಸರಿನಲ್ಲಿ ವರ್ಷ ವರ್ಷ ಖಾಲಿಯಾಗುವುದಂತೂ ಸತ್ಯ. ಈಗ ಆಗಿರತಕ್ಕಂತ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಬೇಕು ಮುಂದಿನ ದಿನಮಾನದಲ್ಲಿ ಇದೇ ರೀತಿ ನಡೆದು ಹೋದರೆ ದೇವಸ್ಥಾನದಲ್ಲಿಯೇ ಹೋರಾಟ ಮಾಡುವುದಾಗಿ ಎಚ್ಚರಿಸುತ್ತೇವೆ.

” ಮಾತು ದೇವಸ್ಥಾನದಲ್ಲಿ ಸ್ಥಳೀಯ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು ನಾನು ಏನೇ ಕೆಲಸ ಕಾರ್ಯಗಳನ್ನು ಹೇಳಿದರೂ ಅವರು ನಮಗೆ ಸ್ಪಂದಿಸುತ್ತಿಲ್ಲ “.

  • ಸದಾಶಿವ ವಗ್ಗೆ, ದೇವಸ್ಥಾನದ ಕಾರ್ಯದರ್ಶಿ

ವೀರಣ್ಣ ಗಂಗಾಣಿ ರಟಕಲ್, ನಾಗರಾಜ ತುಪ್ಪದ ಟೆಂಗಳಿ, ರುದ್ರಮುನಿ ಬುಬಲಿ ಕೊಡ್ಲಿ, ಸಿದ್ದು ಬಸ್ಸಟ್ಟಿ, ಶ್ರೀಶೈಲ್ ಭೈರಪ್ಪ, ನವರು ಅಡಿಗೆ ಮಾಡುವ ಸಾಮಾನುಗಳು ಇಲ್ಲದೆ ಪರದಾಡಿದರೂ ಸಹಿತ ಕೊಡಲು ಯಾರೂ ಇರಲಿಲ್ಲ ಕೋಣೆಯಲ್ಲಿ ಮತ್ತು ಸಾಮಾನುಗಳು ಎಲ್ಲೆಂದರಲ್ಲಿ ಬಿದ್ದಿದ್ದವು ಒಟ್ಟಾರೆ ವ್ಯವಸ್ಥೆ ಸರಿ ಇಲ್ಲ ಎನ್ನುವುದು ಅನೇಕ ಭಕ್ತರ ಮಾತು. ಕೆಲಸಕ್ಕೆ ಬಾರದ ಸಿಬ್ಬಂದಿಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ಅವರ ಹೆಸರು ಸೂಚಿಸಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಅಥವಾ ಅಂಥವರನ್ನು ಬೇರೆಡೆ ವರ್ಗಾವಣೆ ಮಾಡಿಸಿ ಎನ್ನುತ್ತಾರೆ ಭಕ್ತರು.
ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಎ ಗ್ರೇಡ್ ದೇವಸ್ಥಾನವಿದ್ದು ಪ್ರತಿದಿನ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಈಗಾಗಲೇ ಇದ್ದ ಸಿಬ್ಬಂದಿಗಳ ವರ್ಗಾವಣೆಯಾಗಿದ್ದು ಹೋದಂತ ಸಿಬ್ಬಂದಿಗಳ ಜಾಗದಲ್ಲಿ ಹೊಸದಾಗಿ ಸಿಬ್ಬಂದಿಗಳ ನೇಮಿಸಬೇಕು ಎನ್ನುತ್ತಾರೆ ವೀರಣ್ಣ ಗಂಗಾಣಿ ರಟಕಲ್ ರೈತ ಮುಖಂಡರು.

ವರದಿ: ಎಸ್. ವಿ. ಗಂಗಾಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!