ಬೆಳಗಾವಿ/ಕಾಗವಾಡ : 13 /10/2025 ರಂದು ಕಾಗವಾಡದಲ್ಲಿ ತಾಲೂಕಿನ ದಲಿತ ಒಕ್ಕೂಟದಿಂದ ಹಾಗೂ ವಕೀಲರಿಂದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಶ್ರೀ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲರಾದ ರಾಕೇಶ್ ಕಿಶೋರ್ ಹಾಗೂ ಭಾರತ ರತ್ನ ಡಾ|| ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅನಿಲ್ ಮಿಶ್ರಾ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಗವಾಡದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆಯಲ್ಲಿ ನೂರಾರು ದಲಿತ ಮುಖಂಡರು, ಕಾರ್ಯಕರ್ತರು ಹಾಗೂ ವಕೀಲರು ಎಲ್ಲರೂ ಸೇರಿ ಕಾಗವಾಡದ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ರವೀಂದ್ರ ಹಾದಿಮನಿ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿಯನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಶಶಿಕಾಂತ ನಡೋಣಿ, ವಕೀಲರಾದ ಮಿತಿಷ್ ಪಟ್ಟಣ, ದಯಾನಂದ ವಾಘಮೋರೆ, ಸದಾಶಿವ್ ಕಾಂಬಳೆ, ಸುನಿಲ್ ವಾಗ್ಮೊರೆ, ವಿಜಯ ಅಸೋದೆ, ರವಿ ಕಾಂಬಳೆ, ವಿನೋದ ಕಾಂಬಳೆ, ವಿಜಯ ಕುರಣಿ, ದೀಪಕ ಕಾಂಬಳೆ, ವಿದ್ಯಾಧರ್ ದೋಂಡಾರೆ, ಪ್ರಕಾಶ್ ದೊಂಡಾರೆ, ಶೇಖರ್ ಕುರಾಡೆ, ಪ್ರಸಾದ್ ಸಿಂಗೆ, ಮೀರಾ ಕಾಂಬಳೆ ಸೇರಿದಂತೆ ಇನ್ನೂ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ



















