ಯಾದಗಿರಿ/ಗುರುಮಠಕಲ್: ಅ.,21 ಪಟ್ಟಣದಲ್ಲಿನ ಕಸ ಸುರಿಯುವ ಸ್ಥಳಗಳ ನಿರ್ವಹಣೆ ಕುರಿತಾಗಿ ಪುರಸಭೆ ವತಿಯಿಂದ ಸಾರ್ವಜನಿಕರು ಹೆಚ್ಚಾಗಿ ಕಸ ಸುರಿಯುವ ಕಪ್ಪು ಜಾಗಗಳನ್ನು (black spots) ಗುರುತಿಸಿ ಅವುಗಳನ್ನು ಸ್ವಚ್ಛಗೊಳಿಸಿ, ಸುಂದರಗೊಳಿಸಿ, ಬಣ್ಣ ಬಣ್ಣದ ಸುಂದರ ರಂಗೋಲಿ ಬಿಡಿಸಿ ಕಸ ಸುರಿಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಇಂದು ನಾರಾಯಣಪುರ ವಾರ್ಡ್ ಸಂಖ್ಯೆ 6ರಲ್ಲಿ ಜಾಗೃತಿ ಅಭಿಯಾನ ಜರುಗಿತು, ಅಭಿಯಾನದಲ್ಲಿ ಪುರಸಭೆ ಸದಸ್ಯ ನವಾಜರೆಡ್ಡಿ, ನೈರ್ಮಲ್ಯ ಅಧಿಕಾರಿಗಳಾದ ಬಸಪ್ಪ, ವೆಂಕಟಪ್ಪ ಮಿಟ್ಟಿ, ರಾಮಕೃಷ್ಣ ಯಾದವ್ ಇನ್ನೂ ಸಿಬ್ಬಂದಿ ರಾಘವೇಂದ್ರ, ಬಡಾವಣೆ ನಿವಾಸಿಗಳಾದ ಶಿವಕುಮಾರ ಭೂಮಾ ಇನ್ನಿತರರು ಭಾಗವಹಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















