ಶಿರಸಿ : ಇದೇ ಶನಿವಾರ 25-10-2025 ರ ಇಳಿಹೊತ್ತು ನಾಲ್ಕು ಗಂಟೆಯಿಂದ ಶಿರಸಿ ಮಾರಿಕಾಂಬಾ ನಗರ,ಹಾಲುಹೊಂಡ ಬಡಾವಣೆ, ಗಾಯತ್ರಿ ಗೆಳೆಯರ ಬಳಗದಲ್ಲಿ, ಜಸ್ಟೀಸ್ ಜಿ ಎನ್ ಸಭಾಹಿತ ಹಾಗೂ ಜಸ್ಟೀಸ್ ವಿ ಜಿ ಸಭಾಹಿತ ಸ್ಮರಣೆ ಕಾರ್ಯಕ್ರಮದಡಿ, ಪ್ರಸಿದ್ಧ ಚಿಂತಕ ಗಣಪತಿ ವೆಂಕಟರಮಣ ಹೆಗಡೆ, ಹುಳ್ಸೇಮಕ್ಕಿ , ಮೂರೂರು ಇವರ ಪುಸ್ತಕ ಅಪರಿಚಿತ ಪೌರಾಣಿಕ ಪಾತ್ರಗಳು ಬಿಡುಗಡೆ ಸಮಾರಂಭ ಹಾಗೂ ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಅವರಿಂದ ಈ ಪುಸ್ತಕದ ಅವಲೋಕನ ಜರುಗುವುದು.
ಇದೇ ಸಂದರ್ಭದಲ್ಲಿ ಕಲಾಕಾರ, ಶಿಲ್ಪಿ ಸಮಾಜಸೇವಕ ಶಿವಮೂರ್ತಿ ಭಟ್, ಸಿದ್ದರಮಠ ಅಳವಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವಿದ್ದು ಆಸಕ್ತರು ಆಗಮಿಸಿ ಚಂದಗಾಣಿಸಿ ಕೊಡಬೇಕು ಎಂದು ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್.



















