ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುರುಷವಾದ : ಸುದ್ದಿಯಾಗದ ಗಂಡು ಧ್ವನಿ

ಲೇಖಕರು : ರಾಮಕೃಷ್ಣ . ಎನ್ .

ಪುರುಷವಾದ ವಿಮರ್ಶೆ ಇದು ಸುದ್ದಿಯಾಗದ ಗಂಡು ಧ್ವನಿ. ಈ ಬರಹ ಪ್ರಸ್ತುತ ಪುರುಷನಿಗೆ ಆಗುತ್ತಿರುವ ಭಾವನಾತ್ಮಕ, ಸಾಮಾಜಿಕ, ಮಾನಸಿಕ ಯಾತನೆಗಳನ್ನು ಹೇಗೆ ಪುರುಷನ ಮೇಲೆ ಈ ಸಮಾಜ ಹೊರೆ ಹೊರಿಸಿದೆ ಮತ್ತು ಸ್ತ್ರೀಯರಿಂದ ಯಾವೆಲ್ಲಾ ಸಮಸ್ಯೆಗಳಿಗೆ ಪುರುಷ ತನ್ನ ತಪ್ಪಿಲ್ಲದೆ ಶಿಕ್ಷೆ ಅನುಭವಿಸುತ್ತಿದ್ದಾನೆ. ಎಂಬೆಲ್ಲಾ ವಿಷಯವನ್ನು ಕವಿಯು ಸವಿವರವಾಗಿ ಕೆಲವು ವೃತ್ತಾಂತಗಳ ಮೂಲಕ ನಮ್ಮ ಮುಂದಿಟ್ಟಿದ್ದಾರೆ. ಸ್ತ್ರೀಯರ ಆಸೆಗಳಿಗಾಗಿ ಪುರುಷ ಬಲಿ ಆಗುತ್ತಿರುವುದು ಇತ್ತೀಚಿಗೆ ಬಹಳ ಗಂಭೀರ ಸಂಗತಿಯಾಗಿದೆ. ಸ್ತ್ರೀ ತನ್ನ ಆಸೆಗೆ ಗಂಡನ್ನು ಬಲಿ ನೀಡುತ್ತಿರುವುದನ್ನು ಕಾಣಬಹುದು. ಅವಳಿಗೆ ಚಂಚಲತೆ ಇದ್ದರೆ ಪುರುಷ ಕಾರಣವಿಲ್ಲದೆಯೇ ಬಲಿಯಾಗುತ್ತಾನೆ. ಯುವಜನತೆ ಪ್ರೀತಿ ಎಂಬ ಚಕ್ರವ್ಯೂಹದಲ್ಲಿ ಅಭಿಮನ್ಯುವಿನಂತೆ ಸಿಲುಕಿಕೊಂಡು ತಮ್ಮ ಕೊನೆಯ ಉಸಿರು ಇರುವವರೆಗೂ ನೋವನ್ನು ಸಹಿಸುವುದು ಈ ಬರಹ ತಿಳಿಸುತ್ತದೆ. ಅನಾದಿ ಕಾಲದಿಂದಲೂ ಪ್ರಖ್ಯಾತವಾಗಿರುವ :“ಉದ್ಯೋಗo ಪುರುಷ ಲಕ್ಷಣಂ.” ಸಂದೇಶ ಆ ಕಾಲಕ್ಕೆ ಸರಿ ಇರಬಹುದು ಆದರೆ ಪ್ರಸ್ತುತ ಯುಗಕ್ಕೆ ಇದು ಅನ್ವಯ ಆಗದು. ಆದರೂ ಪುರುಷ ತನ್ನ ಮನೆಯವರಿಗಾಗಿ ದುಡಿಯುತ್ತಿರುವನು. ಯುವಕರು ಓದಿ ಉದ್ಯೋಗಕ್ಕಾಗಿ ಬೀದಿ ಬೀದಿ ಅಲೆಯುತ್ತಿರುವುದು ಕಾಣಬಹುದು. ಈ ರಾಜಕೀಯ ವ್ಯಕ್ತಿಗಳು ಪಗಡೆ ಆಟಕ್ಕೆ ಸಿಕ್ಕ ದಾಳದಂತೆ ಸರಿಯಾಗಿ ಉದ್ಯೋಗ ಭರ್ತಿ ಮಾಡದೆ ಯುವಜನತೆ ಅದರಲ್ಲೂ ಯುವಕರು ಮನೆಯ ಹಲವಾರು ಜವಾಬ್ದಾರಿ ಹೊತ್ತು ಸಾಧಿಸಲು ಬಂದು ಸೋಲುತ್ತಿದ್ದಾರೆ. ಬಹುತೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಾಣಬಹುದು. ಈಗಿನ ಕಾಲದಲ್ಲಿ ಯುವಕ ವಿವಾಹವಾಗಲು ಎಷ್ಟು ಕಷ್ಟಪಡುತ್ತಾನೆ ಮತ್ತು ಮಹಿಳೆ ಎಷ್ಟೆಲ್ಲಾ ಅಪೇಕ್ಷೆ ಇಡುತ್ತಾಳೆ ಅಂದರೆ ಅವಳ ಆಸೆಗೆ ಪುರುಷ ಬಲಿಯಾಗುತ್ತಿದ್ದಾನೆ. ಇಂತಹ ಹಲವಾರು ವಿಷಯಗಳು ಈ ಗಂಡಿನ ಹೃದಯದಲ್ಲಿ ಧ್ವನಿಯಾಗದೆ ಉಳಿದಿರುವ ಸತ್ಯವನ್ನು ಈ ಬರಹ ಚಿತ್ರಿಸುತ್ತದೆ.
ಪುಸ್ತಕ ಬೇಕಾದಲ್ಲಿ ಕದಂಬ ಪ್ರಕಾಶನ – 7795506693 ಈ ಸಂಖ್ಯೆಗೆ ವಾಟ್ಸ್ ಆಪ್ ಅಥವಾ ಕರೆ ಮಾಡಿ ವಿಳಾಸ ಕಳಿಸಿದರೆ ಪುಸ್ತಕವನ್ನು ನಿಮ್ಮ ವಿಳಾಸಕ್ಕೆ ತಲುಪಿಸುತ್ತಾರೆ.

ವಿಮರ್ಶಕರು : ನಾಗರಾಜ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!