ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ

ಶಿವಮೊಗ್ಗ: ಆರೋಗ್ಯ ಎನ್ನುವುದು ಕೇವಲ ದೈಹಿಕ ಸುಸ್ಥಿತಿ ಎನ್ನುವುದಕ್ಕಿಂತ ವಿಸ್ತಾರ ಅರ್ಥ ಹೊಂದಿದೆ. ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಸಮತೋಲನ ಸಾಧಿಸುವುದು ಬಹಳ ಮುಖ್ಯ ಎಂದು ಖ್ಯಾತ ವೈದ್ಯರೂ ಬರಹಗಾರರೂ ಆದ ಡಾ.ಎಚ್.ಎಸ್.‌ ಅನುಪಮಾ ಅವರು ತಿಳಿಸಿದರು.

ಅವರು ಕಾಲೇಜಿನ ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ ಮತ್ತು ದೈಹಿಕ ಶಿಕ್ಷಣ ವಿಭಾಗಗಳ ಸಂಯುಕ್ತ ಅಶ್ರಯದಲ್ಲಿ ಆಯೋಜಿಸಲಾದ ‘ ಆರೋಗ್ಯ ಮತ್ತು ಸ್ವಾಸ್ಥ್ಯ ‘ ಕುರಿತ ಸರ್ಟಿಫಿಕೇಟ್‌ ಕೋರ್ಸ್‌ ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು.

ಸರಿಯಾದ ಸಮಯದಲ್ಲಿ ನಿದ್ದೆ ಮತ್ತು ಆಹಾರ ಸೇವನೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ಇಂದಿನ ಯುವಜನರು ಇವುಗಳನ್ನು ಪಾಲಿಸದೇ ಜಂಕ್‌ ಆಹಾರ ಸೇವನೆ, ನಿದ್ರಾಹೀನತೆಗೆ ಪಕ್ಕಾಗಿದ್ದಾರೆ ಎಂದು ನುಡಿದ ಅವರು ದೈಹಿಕ ಶ್ರಮದ ಮಹತ್ವವನ್ನು ತಿಳಿಯಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಐಕ್ಯೂಎಸಿ ಸಂಚಾಲಕಿ ಡಾ. ಭಾರತಿ ದೇವಿ ಅವರು ರೋಗ ಬಂದ ಮೇಲೆ ಔಷಧಿ ಸೇವಿಸುವುದಕ್ಕಿಂತ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮಹಳ ಮುಖ್ಯ ಎನ್ನುತ್ತಾ ಈ ಕೋರ್ಸಿನ ಮಹತ್ವವನ್ನು ತಿಳಿಯಪಡಿಸಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲರಾದ ಡಾ.ಪ್ರತಿಭಾ.ಕೆ.ಆರ್‌ ಅವರು ಸದೃಢ ಯುವಜನತೆಯಿಂದ ಮಾತ್ರ ದೇಶ ಸದೃಢಗೊಳ್ಳುವುದು ಸಾಧ್ಯ, ಇಂದು ದೊಡ್ಡತನದ ದ್ಯೋತಕ ಸಂಪತ್ತಲ್ಲ, ಬದಲಿಗೆ ಒಳ್ಳೆಯ ಆರೋಗ್ಯವೇ ಶ್ರೀಮಂತಿಕೆ ಎಂದು ವಿವರಿಸಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ನಾಗರಾಜ ನಾಯ್ಕ್.‌ ಎಸ್‌ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಚಂದ್ರಪ್ಪ.ಸಿ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ತ್ರಿಶೂಲ್.ಜಿ.ಎಸ್‌ ನಿರೂಪಿಸಿದರು. ಅನುವಾದಕರೂ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಕ್ರಿಯ ಕಾರ್ಯಕರ್ತರೂ ಆದ ರೇಖಾಂಬಾ.ಟಿ.ಎಲ್‌, ದೈಹಿಕ ಶಿಕ್ಷಣ ನಿರ್ದೇಶಕರಾದ ವಿಶ್ವನಾಥ.ಎಂ.ಡಿ ಉಪಸ್ಥಿತರಿದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!