ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ 9ನೇ ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 140 ವಿದ್ಯಾರ್ಥಿಗಳಿಗೆ ಈ ಶಾಲಾ ಬ್ಯಾಗುಗಳನ್ನು ನಾವೆಲ್ ಹೋಪ್ ಫೌಂಡೇಷನ್ ಬೆಂಗಳೂರು ಇವರ ವತಿಯಿಂದ ಉಚಿತವಾಗಿ ಕೊಡಲಾಯಿತು. ಹಾಗೂ ಇದಕ್ಕೆ ಶ್ರೀ ವಿಜಯಕುಮಾರ ಸರ್ ಸರಕಾರಿ ಪ್ರೌಢ ಶಾಲೆ ಬಂದರವಾಡ ಇವರ ಸಂಪೂರ್ಣ ಸಹಕಾರದಿಂದ ನೆರವೇರಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆಯನ್ನು ಉದ್ದೇಶಿಸಿ ಶ್ರೀ ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ರೈತ ಸಂಘ ಮಾತನಾಡಿದರು ಇದಕ್ಕೆ ಕಾರಣೀಭೂತರಾದ ರಟಕಲ್ ಶಾಲೆಯ ಶ್ರೀ ಶರಣಪ್ಪ ದೈಹಿಕ ಶಿಕ್ಷಣ ಶಿಕ್ಷಕರಿಗೆ, ರಟಕಲ್ ಗ್ರಾಮದ ವತಿಯಿಂದ ಮತ್ತು ಮಕ್ಕಳ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಲಾಯಿತು. ಮತ್ತು ಇದೇ ರೀತಿ ತಮ್ಮ ಫೌಂಡೇಶನ್ ವತಿಯಿಂದ ಇನ್ನೂ ಹೆಚ್ಚು ಹೆಚ್ಚು ಸಹಾಯ ಸಹಕಾರ ನಮ್ಮ ಶಾಲೆಗೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವೀರೇಶ್ ಬುಕ್ಕಟಗಿ ಅಧ್ಯಕ್ಷರು ಎಸ್ ಡಿ ಎಂ ಸಿ, ಸದಸ್ಯರಾದ ಮಲ್ಲಿನಾಥ ಪಾರ, ಸಚಿನ್ ನಂಗಾರಿ, ಸಿಬ್ಬಂದಿ ವರ್ಗದವರು ಶ್ರೀಮತಿ ಶಶಿಕಲಾ ಮುಖ್ಯಗುರುಗಳು, ಶ್ರೀ ಅಮೃತ ಸಹ ಶಿಕ್ಷಕರು, ಶ್ರೀಮತಿ ಲಕ್ಕಮ್ಮ ಸಹ ಶಿಕ್ಷಕರು, ಶ್ರೀ ಶರಣಪ್ಪ ದೈಹಿಕ ಶಿಕ್ಷಣ ಶಿಕ್ಷಕರು, ಕು. ಜಯಶ್ರೀ ಸಹ ಶಿಕ್ಷಕರು, ಶ್ರೀ ಬಸವರಾಜ್ ವಿಶೇಷ ಶಿಕ್ಷಕರು, ಕುಮಾರ ಸಿದ್ದು ಅತಿಥಿ ಶಿಕ್ಷಕರು, ಕುಮಾರ ಶೇಖ್ ಅಹಮದ್ ಅತಿಥಿ ಶಿಕ್ಷಕರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ ಎಸ್ ವಿ ಗಂಗಾಣಿ.



















