ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕಗೆ ಭಾವಪೂರ್ಣ ಶ್ರದ್ದಾಂಜಲಿ

ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ದಂದು ವೃಕ್ಷಮಾತೆ ಎಂದೇ ಹೆಸರು ಪಡೆದ ಸಾಲುಮರದ ತಿಮ್ಮಕ್ಕನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಗಣಪತಿ ಲಮಾಣಿಯವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿನಿಯರು ಸಾಲುಮರದ ತಿಮ್ಮಕ್ಕನಂತೆ ನಿಮ್ಮ ನಿಮ್ಮ ಮನೆಗಳ ಮುಂದೆ ಎರಡು ಸಸಿಗಳನ್ನು ಹಾಕುವಂತೆ ತಿಳಿಸಿದರು. ಸಾಲುಮರದ ತಿಮ್ಮಕ್ಕನವರು ಮಾತೃ ಹೃದಯ ಭಾವನೆಯಿಂದ ಮರಗಳನ್ನು ಬೆಳೆಸಿ ಎಲ್ಲರಿಗೂ ಜೀವವನ್ನು ನೀಡಿದ ಮಹಾನ್ ಮಹಿಳೆ ಎಂದು ಸ್ಮರಿಸುತ್ತಾ ವಿದ್ಯಾರ್ಥಿನಿಯರೆಲ್ಲ ತಿಮ್ಮಕ್ಕನವರ ಜೀವನವನ್ನು ಮಾದರಿಯನ್ನಾಗಿ ಮಾಡಿಕೊಳ್ಳಬೇಕೆಂದು ತಿಳಿಸಿದರು.

ನಂತರ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹುಲಿಗೆಮ್ಮ ಇವರು ಸಾಲುಮರದ ತಿಮ್ಮಕ್ಕನವರ ಜೀವನ ಕುರಿತು ಹೇಳುತ್ತಾ ಸಾಲುಮರದ ತಿಮ್ಮಕ್ಕನವರು ಮಾತೃ ಹೃದಯದ ತಾಯಿ ಎಂದು ಹೇಳಿದರು. ಅಲ್ಲವೇ ಮಕ್ಕಳಿಲ್ಲದ ಕೊರಗನ್ನು ತಿಮ್ಮಕ್ಕನವರು ಮರ ಗಿಡಗಳನ್ನು ಬೆಳೆಸುತ್ತಾ ಮಕ್ಕಳ ಪ್ರೀತಿಯನ್ನು ಪ್ರಕೃತಿಯಲ್ಲಿ ಅನುಭವಿಸಿದರು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರಾದ ಶುಭ ಟಿ.ಇ, ಡಾ ಪ್ರದೀಪ್ ಕುಮಾರ್, ಸುಮಿತ್ರ ಎಸ್‌.ವಿ, ಸುಮಯ್ಯ ಕೆ, ಸಂತೋಷ್ ಬೆಲ್ಲದ, ಡಾ ಮಲ್ಲಿಕಾರ್ಜುನ.ಡಾ ಪ್ರಕಾಶ ಹುಲ್ಲೂರ್, ಬಸಮ್ಮ, ಕಸ್ತೂರಿ, ಉಮಾದೇವಿ, ನಿಂಗಜ್ಜ ಸೋಂಪುರ, ಕಲ್ಯಯ್ಯ ಪೂಜಾರ್, ಶ್ರೀಕಾಂತ್ ಹಾಗೂ ಕಾಲೇಜಿನ ಎಲ್ಲಾ ಬೋಧಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!