ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಅಂಬೇಡ್ಕರ್ ಸಮುದಾಯ ಭವನದ ಶೌಚಾಲಯಕ್ಕೆ ಸುಮಾರು 23 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಂಜೂರು ಆಗಿದ್ದು ಆದಷ್ಟು ಬೇಗ ಗುಣಮಟ್ಟದ ಕಾಮಗಾರಿ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು,ನಂತರ ಮಾತನಾಡಿದ ಶಾಸಕರು ಈ ಭವನವು 4.38 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಅಂತಿಮ ಹಂತ ತಲುಪಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್.ಸಿ. ಮಹದೇವಪ್ಪ ಅವರು ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ 3 ಕೋಟಿ ಅನುದಾನ ನೀಡಿದ್ದು, 25 ಲಕ್ಷ ಬಿಡುಗಡೆಯಾಗಿದ್ದು, ಉಳಿದ 75 ಲಕ್ಷ ರೂ. ಸೋಮವಾರ ಬಿಡುಗಡೆಯಾಗಲಿದೆ. ಇದರಿಂದಾಗಿ ಭವನ ನಿರ್ಮಾಣ ಕಾಮಗಾರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಅಲ್ಲದೇ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ತನಕ ಉದ್ಘಾಟನೆ ಬೇಡ ಎಂದು ಯಜಮಾನರು, ಮುಖಂಡರು ತಿಳಿಸಿದ್ದು ಅದರಂತೆ ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲರ ತೀರ್ಮಾನ ಪಡೆದು ಸಿಎಂ ಮತ್ತು ಡಿಸಿಎಂ ಹಾಗೂ ಸಚಿವರನ್ನು ಆಹ್ವಾನಿಸಿ ಭವನ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ರೇಖಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರೇಶ್, ಸದಸ್ಯರಾದ ಮಂಜುನಾಥ್, ರಾಘವೇಂದ್ರ, ಭೀಮನಗರದ ದೊಡ್ಡ ಯಜಮಾನರಾದ ಚಿಕ್ಕಮಾಳಿಗೆ, ಯಜಮಾನರಾದ ಪಾಪಣ್ಣ, ನಟರಾಜು, ಕಿರಣ್, ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷರಾದ ಆನಂದಮೂರ್ತಿ, ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವ ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್




















