ಚಾಮರಾಜನಗರ/ಹನೂರು : ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹ ಮುಂಭಾಗ ಶಾಸಕರು ಮಾತನಾಡಿ, ನಾಗಣ್ಣ ನಗರ ಕಂದಾಯ ಗ್ರಾಮವಾದರೆ ಜನರಿಗೆ ಸರ್ಕಾರದ ಸವಲತ್ತುಗಳು ಮತ್ತಷ್ಟು ಸಿಗಲಿದೆ. ಇಲ್ಲಿಯಜನರಿಗೆ ಡಿಮ್ಯಾಂಡ್, ರಿಜಿಸ್ಟರ್, ಈ ಸ್ವತ್ತು ಸಿಗುತ್ತಿಲ್ಲ ಎಂಬ ಸಮಸ್ಯೆ ತಲೆ ದೂರಿದೆ. ಅಂಗನವಾಡಿ, ಶಾಲಾ ಕಟ್ಟಡ ಶಿಥಿಲವಾಗಿದೆ ಈ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ಜನರಿಗೆ ಅನುಕೂಲ ಕಲ್ಪಿಸಿ ಗ್ರಾಮವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಲಾಗುತ್ತಿದೆ ಎಂದರು.
ಸರ್ಕಾರ ಹಂತದಲ್ಲಿರುವ ಆದೇಶ ಬರುವ ತನಕ ವೈಯಕ್ತಿಕವಾಗಿ ನಾನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ ಚರ್ಚೆ ನಡೆಸಲಾಗುವುದು, ನಾಗಣ್ಣನವರ ಗ್ರಾಮ ಅಭಿವೃದ್ಧಿಗೆ ಹಾಗೂ ಜನರಿಗೆ ಅಗತ್ಯವಾಗಿ ಬೇಕಾದಂತಹ ಚರಂಡಿ ಕುಡಿಯುವ ನೀರು ಹಾಗೂ ವಿದ್ಯುತ್ ಸೇರಿದಂತೆ ಇನ್ನಿತರ ಕೆಲಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ ಅಲ್ಲದೆ ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನಾಗಣ್ಣ ನಗರ ಗ್ರಾಮಕ್ಕೆ ಕಂದಾಯ ಗ್ರಾಮ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡಲು ನಿಖರವಾದ ತಂತ್ರಾಂಶಕ್ಕೆ ಸೇರ್ಪಡೆಗೊಳ್ಳಬೇಕಾಗಿದೆ ನಾಗಣ್ಣ ನಗರವು ರಾಮಪುರ ಮತ್ತು ಅಜಿಪುರ ಗ್ರಾಮ ಪಂಚಾಯಿತಿಗೆ ಸೇರ್ಪಡೆಗೊಂಡಿರುವ ಅಧಿಕೃತ ದಾಖಲೆ ಅಥವಾ ಆದೇಶ ಹೊರ ಬಿದ್ದಿದ್ದೆ ಆದರೆ ಇಲ್ಲಿಯ ಜನರಿಗೆ ಅನುಕೂಲವಾಗಲಿದೆ ಹೀಗಾಗಿ ಸದ್ಯಕ್ಕೆ ಪಡಿತರ ಚೀಟಿ ವಿದ್ಯುತ್ ಕುಡಿಯುವ ನೀರು ರಸ್ತೆ ಚರಂಡಿ ಹಾಗೂ ಇನ್ನಿತರ ಸೌಕರ್ಯಗಳನ್ನು ಒದಗಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹೇಳಲಾಗಿದ್ದು ಅಗತ್ಯ ಕ್ರಮ ವಹಿಸಲಿದ್ದಾರೆ ಸಮಸ್ಯೆಗಳನ್ನು ಹಂತ ಹಂತ ವಾಗಿ ಬಗೆಹರಿಸಲು ಶ್ರನಿಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಾಗಣ್ಣ ನಗರ ಗ್ರಾಮದ ಗ್ರಾಮಸ್ಥರು ಶಾಸಕ ಎಂ.ಆರ್ ಮಂಜುನಾಥ್ ಅವರನ್ನು ಬೇಟಿ ಮಾಡಿ, ರಾಮಾಪುರ ನಗರ ಗ್ರಾಮವು 1995-96ರಿಂದಲೂ ಯಾವುದೇ ಗ್ರಾಮ ಪಂಚಾಯಿತಿ ಗೆ ಸೇರ್ಪಡೆ ಆಗಿರುವುದಿಲ್ಲ ಬಳಿಕ ರಾಮಪುರ ಸೇರಿದೆ. ಆದರೆ ಡಿಮ್ಯಾಂಡ್, ರಿಜಿಸ್ಟರ್, ಈ ಸ್ವತ್ತು ಸಿಗುತ್ತಿಲ್ಲ, ಅಂಗನವಾಡಿ, ಶಾಲಾ ಕಟ್ಟಡ ಶಿಥಿಲವಾಗಿದೆ ಇದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.
ರಾಮಾಪುರದಿಂದ ನಾಗಣ್ಣನಗರ ಮಾರ್ಗವಾಗಿ ಬೆಳಿಗ್ಗೆ 8:30 ಸಮಯಕ್ಕೆ ಶಾಲಾ ಮಕ್ಕಳಿಗೆ ಶಾಲೆಗೆ ತೆರಳಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಮನವಿಯನ್ನು ಮಾಡಿದರು ಇದಕ್ಕೆ ಸ್ಪಂದಿಸಿದ ಶಾಸಕರು ಸಾರಿಗೆ ವ್ಯವಸ್ಥಾಪಕರನ್ನು ಸ್ಥಳಕ್ಕೆ ಕರೆಸಿ ಶಾಲಾ ಮಕ್ಕಳಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಖಡಕ್ ಸೂಚನೆ ನೀಡಿದರು. ಅಲ್ಲದೆ ನಾಗಣ್ಣ ನಗರ ಗ್ರಾಮದ ಜನರಿಗೆ ಶೌಚ ಗೃಹ ಹಾಗೂ ಪಡಿತರ ಚೀಟಿ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಒದಗಿಸಬೇಕು ಜನರ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಇದೇ ವೇಳೆ ಪಿಡಿಓ ಪುಷ್ಪಲತಾ ಅವರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.
ರಾಮಪುರ ಗ್ರಾಮ ಪಂಚಾಯತಿ ಸದಸ್ಯರಾದ ಕುಂಜುಮಾನ್ ಹಾರಯಮ್ಮ, ಮುರುಗೇಶ್, ಸುರೇಂದ್ರ, ಮುರುಗೇಶ್,ಮಹದೇವಮ್ಮ, ಸುಗುಣ,ಮಾದಮ್ಮ, ಲಕ್ಷ್ಮಿ,ಭಾಗ್ಯಮ್ಮ, ಪೆರಿಯಮ್ಮ,ಶಾರದ ಹಾಗೂ ಗ್ರಾಮಸ್ಥರು ಇದ್ದರು.
ವರದಿ :ಉಸ್ಮಾನ್ ಖಾನ್




















