ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುಸ್ತಕ ಪರಿಚಯ

ವಚನ ಸಾಹಿತ್ಯವು ಕನ್ನಡದ ಪ್ರಮುಖ ಪ್ರಕಾರವಾಗಿದೆ. ವಚನ ಸಾಹಿತ್ಯವು ಹನ್ನೆರಡನೇ ಶತಮಾನದದಲ್ಲಿ ಆರಂಭವಾಗಿದೆ. ಆಗ ಅನೇಕ ಶರಣರು ವಚನಗಳನ್ನು ರಚಿಸಿ ಕೊಡುಗೆಯಾಗಿ ಕೊಟ್ಟಿದ್ದಾರೆ. 15ನೇ ಶತಮಾನದಿಂದ 19ನೇ ಶತಮಾನದ ಅವಧಿಯಲ್ಲಿ ಕೂಡ ವಚನ ಬರಹ ಬಿತ್ತರವಾಗಿರುವುದನ್ನು ಕಾಣಬಹುದು.
ಇತ್ತೀಚೆಗೆ ಆಧುನಿಕ ಕಾಲಘಟ್ಟದಲ್ಲಿ ಹಲವರು ತಮ್ಮದೇ ಆದ ಅಂಕಿತನಾಮವಿಟ್ಟು ವಚನ ರಚನೆ ಮಾಡ್ದಿದ್ದಾರೆ. ಅವರಲ್ಲಿ ರವೀಶ್. ಎಸ್. ಇವರು ಕೂಡಾ ಒಬ್ಬರಾಗಿದ್ದಾರೆ.
ರವೀಶ್ ಸ್ವಾಮಿನಾಥ್ ಮತ್ತು ರಾಧಮ್ಮ ದಂಪತಿಗಳ ಪುತ್ರನಾಗಿ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಎಂಬ ಊರಿನಲ್ಲಿ ಜನಿಸಿದ್ದಾರೆ. ಕಷ್ಟಪಟ್ಟು ಓದಿ ಎಂ. ಎ. ಎಂ. ಎಡ್. ಉನ್ನತ ಪದವಿ ಪಡೆದುಕೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಬರಹಗಾರರಾಗಿ ಕವನ, ಚುಟುಕು,ಕಥೆ, ವಚನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ವೀರಮಾತ ಪ್ರೊಡಕ್ಷನ್ ಎಂಬ ಯುಟ್ಯೂಬ್ ಚಾನೆಲ್ ಮೂಲಕ ತಮ್ಮ ಸ್ವಂತ ಕವನದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಇವರ ಎಲ್ಲಾ ಕಾರ್ಯಗಳಿಗೂ ಶ್ರೀಮತಿ ಶ್ರೀದೇವಿ ಮತ್ತು ಮಕ್ಕಳಾದ ಶ್ರೇಯಾ ಮತ್ತು ದೇಶಿಕ್ ಸಹಕರಿಸುತ್ತಿರುವುದನ್ನು ಸುಸ್ಮರಣೀಯವಾಗಿದೆ. ರವೀಶ್ ಈಗಾಗಲೇ ‘ಬಾಂಬೆ ತೆಂಗು’ ಎಂಬ ಮೊದಲ ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯಾರಿಂದಲೂ ಯಾವುದೇ ರೀತಿಯ ಶುಲ್ಕ ಪಡೆಯದೇ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ನಾನು ಆ ಕವಿಗೋಷ್ಠಿಯಲ್ಲಿ ಭಾಗವಹಿಸಿದಾಗ ಅವರು ಪರಿಚಯವಾಗುತ್ತಾರೆ. ಸರಳ ಸಜ್ಜನಿಕೆ, ಯಾರ ತಂಟೆಗೂ ಹೋಗದೆ ಸನ್ಮಾರ್ಗದ ಹಾದಿಯಲ್ಲಿ ಸಾಗುತ್ತಿದ್ದಾರೆ. ಇತ್ತೀಚೆಗೆ ಪರಿಚಯವಾದರೂ ಇವರ ಈ ಒಳ್ಳೆಯ ವ್ಯಕ್ತಿತ್ವದಿಂದ ನನ್ನ ಸಹೋದರ ಸ್ನೇಹಿತರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಈಗ ಅವರ ಎರಡನೇ ಕೃತಿಯಾದ ‘ಕಾಂತಿ ದೀಪ ‘ ಎಂಬ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಲು ಕೇಳುತ್ತಾರೆ. ವಚನ ಹೊತ್ತಿಗೆಗೆ ಮುನ್ನುಡಿ ಬರೆಯುವ ಅವಕಾಶ ಸಿಕ್ಕಿರುವುದು ಪುಣ್ಯದ ಫಲ ಎಂದು ಭಾವಿಸಿ ಬರೆದುಕೊಡುತ್ತಿರುವೆ. ‘ರವಿಸಿದ್ದೇಶ್ವರ’ ಎಂಬ ಅಂಕಿತ ನಾಮದಲ್ಲಿ 192 ವಚನಗಳನ್ನು ರಚಿಸಿ, ‘ ಕಾಂತಿ ದೀಪ ‘ ಶೀರ್ಷಿಕೆಯಡಿಯಲ್ಲಿ ಪುಸ್ತಕ ಪ್ರಕಟಣೆ ಮಾಡುತ್ತಿದ್ದಾರೆ. ಇಲ್ಲಿನ ಎಲ್ಲಾ ವಚನಗಳು ಮೌಲ್ಯಭರಿತವಾಗಿವೆ. ವಚನಗಳು ಮೂಲಕ ಸಮಾಜದ ಅಂಕುಡೊಂಕುಗಳನ್ನು ವಿಡಂಬನಾತ್ಮಕವಾಗಿ ಬಿಂಬಿಸಿದ್ದಾರೆ. ಇದಕ್ಕೆ ಅವರ ಮೊದಲ ವಚನವೇ ಸಾಕ್ಷಿಯಾಗಿದೆ. ಬದುಕಿರುವಾಗ ಮಾತು ಮಾತಿಗೂ
ಚುಚ್ಚಿ ನುಡಿಯುವವರು ನಮ್ಮವರು!
ಮರಣದಲಿ ಗುಂಪು ಗೂಡಿ
ಇನ್ನಷ್ಟು ದಿನ ಬದುಕಬಾರದೆ..?
ಎಂದು ಹೇಳುವವರೂ ನಮ್ಮವರು..!!
ಏನು ಸೋಜಿಗ ನಾಟಕ ಅರಿಯದಾದೆ ರವಿಸಿದ್ದೇಶ್ವರ.
ನಮ್ಮೊಡನೆ ಇರುವ ಜನರ ನಾಟಕೀಯ ಸ್ವಭಾವವನ್ನು ತಮ್ಮ ಅನುಭವದ ಅರಿವನ್ನು ಈ ವಚನದಲ್ಲಿ ತಿಳಿಸಿದ್ದಾರೆ.
ಕಾಯಕ-ದಾಸೋಹ, ಸಂಸಾರ ಹಾಗೂ ಸಾಮಾಜಿಕ ಸಾಮರಸ್ಯದೊಂದಿಗೆ ವಾಸ್ತವ ಬದುಕನ್ನು ಸವಿಯುತ್ತ ಆಧ್ಯಾತ್ಮದತ್ತ ಬದುಕನ್ನು ಹೇಗೆ ಕೊಂಡೋಯ್ಯಬೇಕು ಎಂಬುದನ್ನು ತಮ್ಮ ವಚನಗಳ ಮುಖೇನ ರವೀಶ್ ಬಿಂಬಿಸಿದ್ದಾರೆ.
ಎಲ್ಲಾ ವಚನಗಳು ನೀತಿ ಪ್ರಧಾನವಾಗಿವೆ. ಸಾಮಾಜಿಕ ಜೀವವನ್ನು ಪ್ರಕೃತಿಯ ರೂಪಕ ಪ್ರತಿಮೆಗಳೊಂದಿಗೆ ಮನಮುಟ್ಟುವಂತೆ ಬರೆದಿದ್ದಾರೆ. ಅವರ ವಚನಗಳ ಪ್ರಭುದ್ಧತೆಯನ್ನು ಗಮನಿಸಿದಾಗ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದಂತೆ ಅನಿಸುತ್ತದೆ.
ಈ ಪುಸ್ತಕದ ಎಲ್ಲ ವಚನಗಳು ಬಿಡದೆ ಓಡಿಸಿಕೊಂಡು ಹೋಗುತ್ತವೆ. ಮತ್ತೊಂದು ವಚನವನ್ನು ಗಮನಿಸುವುದಾದರೆ
ಬದುಕಿನ ಸಂತಸಕ್ಕೆ ಸಂಪತ್ತಿನ ಅಗತ್ಯವಿಲ್ಲವಯ್ಯ
ಜೀವನದ ಸಂತೃಪ್ತಿ, ನೆಮ್ಮದಿಯ ಪ್ರಾಪ್ತಿಯಿಂದಯ್ಯ ಸಂಪತ್ತು ಇದ್ದರೆ ಬದುಕುವೆನೋ ನೆಮ್ಮದಿ ಇಲ್ಲದೆ ಬದುಕಲಾರೆನೋ ರವಿಸಿದ್ದೇಶ್ವರ ….!!
ಈಗಿನ ಕಾಲದಲ್ಲಿ ಬಹುತೇಕರು ಸಂಪತ್ತೆ ಜೀವನ ಎಂದು ಸೇಣಸಾಡಿಸುತ್ತಾರೆ. ಅಂಥಹವರಿಗೆ ಸಂಪತ್ತು ಬರೀ ತೃಣ, ಆದರೆ ನೆಮ್ಮದಿ ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎಂದು ಈ ವಚನದಲ್ಲಿ ಸಾರಿ ಹೇಳಿದ್ದಾರೆ.
“ಮನೆಯ ಕಸಬರಿಕೆ, ಆಗಲು ಬಯಸುವೆನಯ್ಯ…….”
ಇಲ್ಲಿ ಬಳಕೆಯಾಗುವ ಪ್ರತಿಯೊಂದು ವಸ್ತುವು ಮುಖ್ಯ ಎಂದು ಹೇಳುವುದರ ಜೊತೆಗೆ ಮನಸ್ಸಿನ ಕೆಟ್ಟತನನ್ನು ನಾವೇ ಗುಡಿಸಿಕೊಳ್ಳುತ್ತಿರಬೇಕು ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

“ಅಗ್ಗದ ಸಹಾಯಕ್ಕಿಂತ ದುಬಾರಿ ಸಹಾಯಕೆ ಸಿದ್ದರಾಮ ಮೆಚ್ಚಿ ಒಲಿವನೋ ರವಿಸಿದ್ದೇಶ್ವರ……!!”

“ತಿರಸ್ಕಾರ ಪುರಸ್ಕಾರದ ನಡುವೆ ಬದುಕು ಅಡಗಿದೆಯೋ…!!”

” ಈ ಲೋಕದಿ ಮೋಸಕೆ ಬೆಲೆಯೂ, ನಿಯತ್ತಿಗೆ ನೋವು ಅಧಿಕವೋ ರವಿಸಿದ್ದೇಶ್ವರ….!! “

ಇವು ಈ ಪುಸ್ತಕದ ಕೆಲವು ವಚನೋಕ್ತಿಗಳು, ಉಳಿದವನ್ನು ಸಂಪೂರ್ಣ ಓದುವ ಭಾಗ್ಯ ಪ್ರತಿಯೊಬ್ಬರ ಓದುಗರದಾಗಲಿ. ಈ’ ಕಾಂತಿ ದೀಪ’ ಪುಸ್ತಕ ಹೆಚ್ಚು ಓದುಗರ ತಲುಪಲಿ. ರವೀಶ್ ಅವರ ಸೃಜನಶೀಲತೆಯಲ್ಲಿ ಸಾಕಷ್ಟು ಪುಸ್ತಕಗಳು ಬರೆದು ಕನ್ನಡ ಸಾರಸ್ವತ ಲೋಕವನ್ನು ತುಂಬಿಸುತ್ತಿರಲಿ ಎಂದು ಶುಭ ಹಾರೈಸೋಣ.

ಧನ್ಯವಾದಗಳು.

  • ಲೋಕರತ್ನ ಸುತೆ
    ಭವ್ಯ ಸುಧಾಕರ ಜಗಮನೆ
    ಆಧುನಿಕ ವಚನಕಾರ್ತಿ,
    ಭಾವ ಸುಧೆ ಸಂಸ್ಥೆ ಸಂಸ್ಥಾಪಕಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

One Response

  1. ಪುಸ್ತಕ ಪರಿಚಯ ಲೇಖನ ಪ್ರಕಟಣೆ ಮಾಡಿರುವ ಸಾಹಿತ್ಯ ಪೋಷಕರಾದ ಕನ್ನಡ ಕಂದ ಪತ್ರಿಕ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!